Vijayapatha – ವಿಜಯಪಥ
Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ವಿಜಯಪುರ ವಿಭಾಗದಲ್ಲೇ ನಾನೇ ಡಿಸಿ, ನಾನೇ ಡಿಸಿ ಎಂದು ಕಚ್ಚಾಡುತ್ತಿರುವ ಇಬ್ಬರು ಅಧಿಕಾರಿಗಳು – ಕ್ರಮ ತೆಗೆದುಕೊಳ್ಳಬೇಕಾದ ವ್ಯವಸ್ಥಾಪಕ ನಿರ್ದೇಶಕರೇ ಮೌನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ನಾನೇ ಡಿಸಿ, ನಾನೇ ಡಿಸಿ ಎಂದು ಇಬ್ಬರು ಅಧಿಕಾರಿಗಳು ಕಚ್ಚಾಡುತ್ತಿದ್ದಾರೆ. ಇತ್ತ ನಿಗಮ ಎಂಡಿ ಈ ಇಬ್ಬರು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ನೇಮಿಸುವ ಮೂಲಕ ನೌಕರರನ್ನು ಇಕ್ಕಟಿಗೆ ಸಿಲುಕಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಹಿಂದೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಗಣಕ ವ್ಯವಸ್ಥಾಪಕರಾಗಿದ್ದ ನಾರಾಯಣಪ್ಪ ಕುರಬರ ಅವರನ್ನು ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಇದೇ ಆ.1ರಂದು ನೇಮಕ ಮಾಡಿದೆ ಆದೇಶ ಹೊರಡಿಸಲಾಗಿದೆ.

ಆದರೆ, ಕೆಕೆಆರ್‌ಟಿಸಿ ವಿಜಯಪುರ ವಿಭಾಗಕ್ಕೆ ಜೂನ್‌ 27ರಂದು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಕಗೊಂಡಿರುವ ಜೆ.ಮೊಹಮ್ಮದ್‌ ಫೈಜ್‌ ಅವರು ಕೇವಲ ಒಂದು ತಿಂಗಳೊಳಗೆ ನನ್ನನ್ನು ಕೆಕೆಆರ್‌ಟಿಸಿ ಕಲಬುರಗಿಯ ಕೇಂದ್ರ ಕಚೇರಿಗೆ ಮಂಡಳಿ ಕಾರ್ಯದರ್ಶಿಯಾಗಿ ನೇಮಿಸಿ ವರ್ಗಾವಣೆ ವರ್ಗಾವಣೆ ಮಾಡಲಾಗಿದೆ ಎಂದು ಈ ವರ್ಗಾವಣೆಗೆ ನ್ಯಾಯಾಲದಲ್ಲಿ ತಡೆ ತಂದಿದ್ದಾರೆ.

ಹೌದು! ವರ್ಗಾವಣೆಯನ್ನು ಪ್ರಶ್ನಿಸಿ ಹಾಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿರುವ ಜೆ.ಮೊಹಮ್ಮದ್‌ ಫೈಜ್‌ ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ಕೋರ್ಟ್‌ ಮೊಹಮ್ಮದ್‌ ಫೈಜ್‌ ಅವರ ವರ್ಗಾವಣೆ ತಡೆ ನೀಡಿದೆ. ಹೀಗಾಗಿ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜೆ.ಮೊಹಮ್ಮದ್‌ ಫೈಜ್‌ ಅವರೇ ಮುಂದುವರಿಯಬೇಕಿದೆ.

ಆದರೆ, ಇಲ್ಲಿ ಇವರ ಜತೆಗೆ ಆ.1ರಂದು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಕಗೊಂಡಿರುವ ನಾರಾಯಣಪ್ಪ ಕುರಬರ ಅವರೂ ಕೂಡ ಅಧಿಕಾರ ನಡೆಸುತ್ತಿದ್ದಾರೆ. ಅಲ್ಲದೇ ಈ ಇಬ್ಬರೂ ಅಧಿಕಾರಿಗಳೂ ಘಟಕಗಳಿಗೆ ಭೇಟಿ ನೀಡುವ ಮೂಲಕ ನೌಕರರಿಗೆ ಕೆಲವೊಂದು ನಿರ್ದೇಶನ ಮತ್ತು ಆದೇಶ ಮಾಡುತ್ತಿದ್ದಾರೆ. ಹೀಗಾಗಿ ನೌಕರರು ಇಲ್ಲಿ ಯಾರನ್ನು ಡಿಸಿ ಎಂದು ಒಪ್ಪಿಕೊಳ್ಳಬೇಕೋ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.

ಇದನ್ನು ನಿವಾರಿಸಬೇಕಾದ ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದು ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಈ ಇಬ್ಬರು ಅಧಿಕಾರಿಗಳು ಮಾಡುವ ಆದೇಶವನ್ನು ಪಾಲಿಸಬೇಕೋ ಬೇಡವೋ ಎಂಬ ವಿಷಯದಲ್ಲಿ ನೌಕರರು ಇಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ನ್ಯಾಯಾಲಯದಿಂದ ವರ್ಗಾವಣೆ ಆದೇಶದ ವಿರುದ್ಧ ತಡೆ ತಂದಿರುವುದರಿಂದ ಇಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜೆ.ಮೊಹಮ್ಮದ್‌ ಫೈಜ್‌ ಅವರನ್ನು ಮುಂದುವರಿಸಬೇಕು. ಒಂದು ವೇಳೆ ಅವರಿಗೆ ಅವಕಾಶ ನೀಡದಿದ್ದರೆ ನ್ಯಾಯಾಲಯದ ತಡೆಯಾಜ್ಞೆ ವಿರುದ್ಧ ನಿಗಮದ ಎಂಡಿ ನಡೆದುಕೊಂಡಂತಾಗುತ್ತದೆ.

ಹೀಗಾಗಿ ನಾರಾಯಣಪ್ಪ ಕುರಬರ ಅವರ ವರ್ಗಾವಣೆ ಆದೇಶವನ್ನು ಹಿಂಪಡೆದು ಮತ್ತೆ ಅವರಿದ್ದ ಸ್ಥಳಕ್ಕೆ ನೀಯೋಜನೆ ಮಾಡಬೇಕು. ಅದನ್ನು ಬಿಟ್ಟರೆ ಬೇರೆಡೆಗೆ ವರ್ಗಾವಣೆ ಮಾಡಬೇಕು. ಈ ಎರಡನ್ನು ಮಾಡದೆ ಎಂಡಿ ಅವರು ನಾರಾಯಣಪ್ಪ ಕುರಬರ ಅವರನ್ನು ಡಿಸಿಯಾಗಿ ಮುಂದುವರಿಯಲು ಬಿಟ್ಟಿದ್ದು, ಇತ್ತ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜೆ.ಮೊಹಮ್ಮದ್‌ ಫೈಜ್‌ ಅವರಿಗೂ ಅವಕಾಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನೌಕರರು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ನಾರಾಯಣಪ್ಪ ಕುರಬರ ಅವರ ಬಗ್ಗೆ ಈಗಾಗಲೇ ಭ್ರಷ್ಟಾಚಾರ, ಲಂಚಬಾಕ ಅಧಿಕಾರಿ ಎಂಬ ಆರೋಪ ಕೂಡ ಇದೆ. ಈ ಆರೋಪದ ಬಗ್ಗೆ ತನಿಖೆ ನಡೆಸಿದ ನಿಗಮವು ಮೇಲ್ನೋಟಕ್ಕೆ ಇದು ಸತ್ಯ ಎಂದು ತಿಳಿದು ಈ ಹಿಂದೆಯೇ ಅವರನ್ನು ಡಿಸಿ ಹುದ್ದೆಯಿಂದ ಬಿಡಿಸಿತ್ತು. ಆದರೆ, ಹಠ ಬಿಡದೆ ಕುರಬರ ಅವರು ವಿಜಯಪುರಕ್ಕೆ ಡಿಸಿಯಾಗಿ ಬರಬೇಕು ಎಂದು ಮತ್ತೆ ಬಂದಿದ್ದಾರೆ.

ಒಟ್ಟಾರೆ, ವಿಜಯಪುರ ಸಾರಿಗೆ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಈ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಇಬ್ಬರು ಅಧಿಕಾರಿಗಳಿಗೂ ಸಂಸ್ಥೆಯ ವಾಹನ ನೀಡಿಲ್ಲ. ಹೀಗಾಗಿ ಇವರು ತಮ್ಮ ಸ್ವಂತ ವಾಹನಗಳಲ್ಲೇ ಡಿಪೋಗಳಿಗೆ ಇತರ ಸ್ಥಳಗಳಿಗೆ ಭೇಟಿ ನೀಡಿ ನಾನೇ ಡಿಸಿ ನಾನೇ ಡಿಸಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನಾದರೂ ಈ ಸಂಬಂಧ ಎಂಡಿ ಅವರು ಸೂಕ್ತ ಕ್ರಮವಹಿಸಿ ಯಾರು ಡಿಸಿ ಎಂಬುದರ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ