ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮತ್ತೊಂದು ಗರಿ ಮೂಡಿಗೆರಿದೆ. ಏಷ್ಯಾದ ಅತ್ಯುತ್ತಮ ಬ್ರಾಂಡ್ ಉದ್ಯೋಗದಾತ ಪ್ರಶಸ್ತಿ ಅಂದರೆ ಏಷ್ಯಾಸ್ ಬೆಸ್ಟ್ ಎಂಪ್ಲಾಯರ್ ಅವಾರ್ಡ್ ಲಭಿಸಿದೆ. ಈ ಪ್ರಶಸ್ತಿಯನ್ನು ಇದೇ ಆಗಸ್ಟ್ ತಿಂಗಳಿನಲ್ಲಿ ಸಿಂಗಾಪೂರ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ರಾಜ್ಯದ ರಸ್ತೆ ಸಾರಿಗೆ ನಿಗಮ ನಾಡಿನ ಕೋಟ್ಯಂತರ ಜನರಿಗೆ ನಿತ್ಯ ಬಸ್ ಸೇವೆಗಳನ್ನು ಒದಗಿಸುತ್ತಿದೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ KSRTC ಬಸ್ ಸಂಪರ್ಕ ಕಲ್ಪಿಸಿದೆ. ಇದರಿಂದಾಗಿ ಹಳ್ಳಿ ಹಳ್ಳಿಯಲ್ಲಿನ ಮಕ್ಕಳು ಅಥವಾ ಉದ್ಯೋಗಿಗಳು ತಮ್ಮ ತಮ್ಮ ಕೆಲಸಕ್ಕೆ ಹೋಗಲು ಅನುಕೂಲಕರವಾಗಿದೆ.
ಈಗ ಸರ್ಕಾರ KSRTC ಬಸ್ ಸಂಪರ್ಕವನ್ನು ಹಳ್ಳಿಯ ಮೂಲೆ ಮೂಲೆಗೂ ಕಲ್ಪಿಸಿದ್ದು, ಜನರಿಗೆ ಬಹಳ ಅನುಕೂಲವಾಗಿದೆ. ಸಿಬ್ಬಂದಿಗಳ ಸಮಾಧಾನಕರ ಸೇವೆ ವಾಹನ ಚಾಲನೆ ಸರಿಯಾದ ಸಮಯಕ್ಕೆ ಬಸ್ ಬರುವುದು ಮೊದಲಾದ ಕಾರಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಪ್ರಶಸ್ತಿಗೆ ಭಾಜನವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬೆಸ್ಟ್ ಬ್ರಾಂಡ್ ಎಂಪ್ಲಾಯರ್ ಪ್ರಶಸ್ತಿಯನ್ನು ‘ಆರ್ಗನೈಜೇಷನ್ ವಿಥ್ ಇನೋವೇಟಿವ್ ಎಚ್ ಆರ್ ಪ್ರಾಕ್ಟಿಸಸ್’ ವಿಭಾಗದಲ್ಲಿ ನೀಡಲಾಗಿದೆ. ಮಂಗಳವಾರ ಅಂದರೆ ಆಗಸ್ಟ್ 8 2023ರಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬ್ರಾಂಡ್ ಕಾಂಗ್ರೆಸ್ನ 14ನೇ ಆವೃತ್ತಿಯಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಈ ಪ್ರಶಸ್ತಿ ನಿಗಮಕ್ಕೆ ಸಂದಿರುವುದಕ್ಕೆ ಸಂತಸಗೊಂಡಿರುವ ಸಂಸ್ಥೆಯ ಮುಖ್ಯಸ್ಥರು ಆಗಸ್ಟ್ 17, 2023ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಿರುವುದರ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ನಿಗಮಕ್ಕೆ ಈ ಪ್ರಶಸ್ತಿ ಲಭಿಸಿರುವುದು ಮುಖ್ಯವಾಗಿ ನೌಕರರ ಅವಿರತ ಸೇವೆಯ ಶ್ರಮದಿಂದ, ಅಧಿಕಾರಿಗಳ ಶ್ರಮವು ಇದರಲ್ಲಿ ಇದೆ. ಆದರೆ ಸರಿಯಾದ ಸಮಯಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಚಾಲನಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಈ ಪ್ರಶಸ್ತಿಯ ಹಿರಿಮೆ ಚಾಲನಾ ಸಿಬ್ಬಂದಿಗೆ ಸಲ್ಲಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖುಷಿ ಹಂಚಿಕೊಂಡಿದ್ದಾರೆ.