NEWS

KSRTC – 4 ನಿಮಗಳಲ್ಲೂ ಸಿಬ್ಬಂದಿ  ಕೊರತೆ: ನಾಲ್ಕು ವರ್ಷದಿಂದಲೂ ಆಗಿಲ್ಲ ನೌಕರರ ನೇಮಕ – ಒತ್ತಡದಲ್ಲಿ ಚಾಲನಾ ಸಿಬ್ಬಂದಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಕಳೆದ 4 ವರ್ಷದಿಂದಲೂ ಚಾಲನಾ ಸಿಬ್ಬಂದಿಯ ನೇಮಕವಾಗಿಲ್ಲ. ಇದರಿಂದ ಈ ಎಲ್ಲ ನಿಗಮಗಳೂ ನೌಕರರ ಕೊರತೆಯಲ್ಲಿ. ಇದರಿಂದ ನೌಕರರು ಒತ್ತಡಕ್ಕೆ ಸಿಲುಕಿದ್ದಾರೆ.

ಇನ್ನೂ ಕೂಡ ಯಾವುದೇ ನೇಮಕ ಪ್ರಕ್ರಿಯೆ ನಡೆಎಯುತ್ತಿಲ್ಲ. ಆದರೆ, ತಿಂಗಳುಗಳ ಕೊನೆಯಲ್ಲಿ ನಿವೃತ್ತರಾಗುವವರ ಸಂಖ್ಯೆಯೂ ಹೆಚ್ಚಗಿದ್ದು, ಅವರ ಸ್ಥಾನಕ್ಕೆ ಬದಲಿ ಸಿಬ್ಬಂದಿ ಇಲ್ಲದ ಕಾರಣ ಇರುವ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಅಪಘಾತಗಳು ಅಲ್ಲಲ್ಲಿ ಸಂಭವಿಸುತ್ತಿವೆ.

ಹೌದು! ರಾಜ್ಯದ ಎಲ್ಲ ಡಿಪೋಗಳಲ್ಲೂ ನೌಕರರ ಕೊರತೆ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಹೊಸದಾಗಿ ನೌಕರರ ನೇಮಕ ಪ್ರಕ್ರಿಯೆ ನಡೆಯದಿರುವುದು. ನಿವೃತ್ತಗೊಂಡವರು ತಿಂಗಳ ಕೊನೆಯಲ್ಲಿ ಮನೆಗೆ ಹೋಗುತ್ತಿರುವುದು. ಇತ್ತ ಕೆಲ ಅಧಿಕಾರಿಗಳು ಲಂಚಕ್ಕಾಗಿ ನಿಷ್ಠಾವಂತ ನೌಕರರನ್ನು ಅಮಾನತು ಮಾಡುತ್ತಿರುವುದರಿಂದ ನಿಗಮಗಳಲ್ಲಿ ಇನ್ನಷ್ಟು ಸಮಸ್ಯೆ ಹೆಚ್ಚಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಹೊಸದಾಗಿ ನೇಮಕಾತಿ ಆಗಿಲ್ಲ, ಸಿಬ್ಬಂದಿ ನೇಮಕಾತಿಗೆ ಸರ್ಕಾರ ಅನುಮತಿ ನೀಡಬೇಕು. ಸಾರಿಗೆ ಮುಷ್ಕರದ ನಂತರ ಅನೇಕ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ. ಅವರಲ್ಲಿ ಕೆಲವರು ಕೋವಿಡ್ -19 ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ.

ಇನ್ನು ಕೆಲವರು ನಿವೃತ್ತರಾಗಿದ್ದಾರೆ ಮತ್ತಷ್ಟು ನೌಕರರು ಅಮಾನತು ಶಿಕ್ಷೆಯಲ್ಲಿದ್ದಾರೆ. ಈಗ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ನೌಕರರ ಮೇಲೆ ಕೆಲ ಮಹಿಳಾ ಪ್ರಯಾಣಿಕರು ಹಲ್ಲೆ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಅಂತ ಮಹಿಳೆಯರ ವಿರುದ್ಧ ನಿಗಮಗಳು ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲ. ಆದರೆ ಆ ಶಿಕ್ಷೆಯನ್ನು ನೌಕರರಿಗೆ ಕೊಡುತ್ತಿವೆ.

ಇತ್ತ ಪ್ರಯಾಣಿಕರಿಂದ ಕಿರಿಕಿರಿ ಅನುಭವಿಸಬೇಕು. ಅತ್ತ ಡ್ಯೂಟಿ ಮುಗಿದ ಮೇಲೂ ಮತ್ತೆ ಡ್ಯೂಟಿ ಹತ್ತಬೇಕು. ಇದರಿಂದ ಸರಿಯಾಗಿ ನಿದ್ರೆ ಆಗುತ್ತಿಲ್ಲ, ಆಯಾಸವಾಗುತ್ತಿದೆ. ಆದರೂ ವಿಧಿ ಇಲ್ಲದೆ ಡಬ್ಬಲ್‌ ಡ್ಯೂಟಿ ಮಾಡಬೇಕು, ಹೋಗಲಿ ಓಟಿ ಮಾಡಿದ್ದಕ್ಕೆ ಸರಿಯಾಗಿ ಓಟಿಯ ಹೆಚ್ಚುವರಿ ವೇತನ ನೀಡುತ್ತಾರೆಯೇ ಅದೂ ಇಲ್ಲ.

8 ಗಂಟೆಗಳ ಕಾಲ ಓಟಿ ಮಾಡಿದರೆ ನಿಗಮದಿಂದ ಕೊಡುವುದು 4 ಗಂಟೆಗಳ ಓಟಿ ಇದರಿಂದ ನೌಕರರು ಕೂಡ ಅಸಮಾಧಾನಗೊಂಡಿದ್ದಾರೆ. ಯಾವುದೇ ಸಂಸ್ಥೆಯಲ್ಲಿ ಓಟಿ ಮಾಡಿದರೆ ವೇತನಕ್ಕಿಂತ ಹೆಚ್ಚಿಗೆ ಓಟಿ ಕೊಡುವ ನಿಯಮವಿದೆ. ಆದರೆ, ಸಾರಿಗೆ ನಿಗಮಗಳಲ್ಲಿ ಓಟಿ ಮಾಡಿದರೆ ವೇತನದ ಅರ್ಧದಷ್ಟು ಮಾತ್ರ ಓಟಿ ಹಣ ನೀಡುತ್ತಾರೆ. ಇದರಿಂದ ನೌಕರರು ನಾವು ಓಟಿ ಮಾಡುವುದಿಲ್ಲ ಎಂದು ಹೇಳುತ್ತಾರೆ.

ಯಾವುದೇ ನೌಕರರಾಗಲಿ ಡ್ಯೂಟಿ ಮಾಡಿದ ಮೇಲೆ ಇನ್ನು 4 ಗಂಟೆಗಳು ಓಟಿ ಮಾಡಿದರೆ ಅವರಿಗೆ ದಿನದ ವೇತನಕ್ಕೆ ಸಮಾನಾಗಿ ಓಟಿ ಕೊಡಬೇಕು, ಆದರೆ ಇಲ್ಲಿ 4 ಗಂಟೆ ಡ್ಯೂಟಿ ಮಾಡಿದರೆ 2 ಗಂಟೆಯ ಓಟಿ ಮಾತ್ರ ಕೊಡುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಹಲವಾರು ವರ್ಷಗಳಿಂದಲೂ ಪ್ರಶ್ನೆಯಾಗಿಯೇ ಉಳಿದಿದೆ.

ನೌಕರರಿಂದ ಬಿಟ್ಟಿ ದುಡಿಸಿಕೊಳ್ಳುತ್ತಿದ್ದರೂ ಕೇಳ ಬೇಕಾದ ಸಂಘಟನೆಗಳು ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿವೆ. ಇನ್ನಾದರೂ ಈ ಬಗ್ಗೆ ಸಂಘಟನೆಗಳು ನೌಕರರ ಪರ ಧ್ವನಿ ಎತ್ತಬೇಕಿದೆ. ಆ ಮೂಲಕ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ.

Leave a Reply

error: Content is protected !!
LATEST
ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು