Vijayapatha – ವಿಜಯಪಥ
Friday, November 1, 2024
NEWSದೇಶ-ವಿದೇಶನಮ್ಮರಾಜ್ಯ

ಇಡೀ ವಿಶ್ವಕ್ಕೆ ಭಾರತದ ತಾಕತ್‌ ತೋರಿಸಿಕೊಟ್ಟ ನಮ್ಮ ವಿಜ್ಞಾನಿಗಳು : ಪ್ರಧಾನಿ ಮೋದಿ ಭಾವುಕ ನುಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಾಹ್ಯಾಕಾಶ ಯಾನದಲ್ಲಿ ವಿಶ್ವದಲ್ಲೇ ಚಂದ್ರಯಾನ-3 ಸಕ್ಸಸ್ ಆಗಿದ್ದು, ಈ ಅವಿಸ್ಮರಣೀಯ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆ ಮೆಚ್ಚುಗೆ ವ್ಯಕ್ತಪಡಿಸಿಲು ಸ್ವತಃ ಇಂದು ಪ್ರಧಾನಿ ನರೇಂದ್ರ ಮೋದಿ ಅವರೇ ಬೆಂಗಳೂರಿಗೆ ಆಗಮಿಸಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಮೋದಿ ಜೈ ಜವಾನ್, ಜೈ ಕಿಶಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದು ಘೋಷಣೆ ಕೂಗಿದರು. ಬಳಿಕ ಇಡೀ ವಿಶ್ವಕ್ಕೆ ನಮ್ಮ ವಿಜ್ಞಾನಿಗಳು ಭಾರತದ ತಾಕತ್ತನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. HALನಿಂದ ರಸ್ತೆ ಮಾರ್ಗವಾಗಿ ಇಸ್ರೋ ಕಚೇರಿ ತಲುಪಿದರು.

ಚಂದ್ರಯಾನ-3 ಯಶಸ್ಸು ಮಹತ್ತರವಾದ ಸಾಧನೆ ಆಗಿದ್ದು ಈ ನಿಮ್ಮ ಕಾರ್ಯ ಮತ್ತು ಪರಿಶ್ರಮಕ್ಕೆ ಸೆಲ್ಯೂಟ್ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳುತ್ತ ಭಾವುಕರಾದರು.

ವಿಜ್ಞಾನಿಗಳ ಜತೆ ಚಂದ್ರಯಾನ-3 ಕುರಿತು ಮಾಹಿತಿ ಪಡೆದುಕೊಂಡರು. ಅದೇ ಖುಷಿಯಲ್ಲಿ ಮೋದಿ ಅವರು ವಿಜ್ಞಾನಿಗಳ ಮತ್ತು ಭಾರತದ ಸಾಧನೆಯಲ್ಲಿ ಹೆಮ್ಮೆಯ ವಿಜ್ಞಾನಿಗಳ ಸಾಹಸವನ್ನು ಬಣ್ಣಿಸಿದರು. ವಿಶ್ವದಲ್ಲಿ ಯಾರೂ ಮಾಡದ ಸಾಧನೆ ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಭಾರತೀಯರ ಕನಸನ್ನು ನನಸು ಮಾಡಿದ್ದಾರೆ. ನಿಮ್ಮೆಲ್ಲರಿಗೂ ನಾನು ಸೆಲ್ಯೂಟ್ ಹೇಳುತ್ತೇನೆ. ನಿಮ್ಮ ಪರಿಶ್ರಮಕ್ಕೆ ನನ್ನ ಸೆಲ್ಯೂಟ್, ನಿಮ್ಮ ಧೈರ್ಯಕ್ಕೆ ಸೆಲ್ಯೂಟ್, ನಿಮ್ಮ ಬದುಕಿಗೆ ಸೆಲ್ಯೂಟ್ ಎನ್ನುತ್ತ ಮತ್ತಷ್ಟು ಭಾವುಕರಾದರು.

ಚಂದ್ರನ ಅಂಗಳದಲ್ಲಿ ಲ್ಯಾಂಡರ್, ಪ್ರಗ್ಯಾನ್ ಪರಾಕ್ರಮ ಮಾಡುತ್ತಿವೆ. ಇಸ್ರೋ ವಿಜ್ಞಾನಿಗಳು ಭಾರತೀಯರ ಕನಸನ್ನು ನನಸು ಮಾಡಿದ್ದಾರೆ. ವಿಜ್ಞಾನಿಗಳ ಸಾಧನೆಯನ್ನು ಎಸ್ಟೇ ಕೊಂಡಾಡಿದರು ಕಡಿಮೆಯೇ. ಮೂನ್ ಲ್ಯಾಂಡ್ ಇಳಿದ ಸ್ಥಳಕ್ಕೆ ‘ಶಿವಶಕ್ತಿ’ ಎಂದು ಮೋದಿ ಹೆಸರಿಟ್ಟರು.

ಅಲ್ಲದೆ ‘ಶಿವಶಕ್ತಿ’ ಎಂದು ಹೆಸರಿಡಲು ಭಾರತ ನಿರ್ಧಾರ ಮಾಡಿದೆ. ಭೂಮಿ ಪ್ರಾರಂಭದಿಂದ ಮುಳುಗಿ ಹೋಗುವರೆಗೆ ನಾರಿ ಶಕ್ತಿ ಮುಖ್ಯ. ಚಂದ್ರನ ಮೇಲೆ ವಿಕ್ರಮನ ಮೂಲಕ ಭಾರತ ಪರಾಕ್ರಮ ಮಾಡಿದೆ. ಜಗತ್ತಿನಲ್ಲಿ ಯಾವುದೇ ಸಮಸ್ಯೆ ಇರಲಿ ಅದರ ಪರಿಹಾರ ಭಾರತದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಚಂದ್ರಯಾನ-2 ಲ್ಯಾಂಡ್ ಆದ ಸ್ಥಳವನ್ನು ತಿರಂಗ ಪಾಯಿಂಟ್ ಎನ್ನೋಣ ಎಂದ ಅವರು, ತಿರಂಗ ಪಾಯಿಂಟ್ ನಮ್ಮ ಮುಂದಿನ ಸಂಶೋಧನೆಗೆ ದಾರಿಯಾಯಿತು ಎಂದು ಸ್ಮರಿಸಿದರು. ಇನ್ನು ಆಗಸ್ಟ್​ 23 ಪ್ರತಿ ವರ್ಷ ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸೋಣ ಎಂದು ಘೋಷಣೆ ಮಾಡಿದರು.

ರಸ್ತೆ ಮಾರ್ಗವಾಗಿಯೇ ಇಸ್ರೋ ಕಚೇರಿ ತಲುಪಿದ ಮೋದಿ: ಎಚ್‌ಎಎಲ್ ವಿಮಾನನಿಲ್ದಾಣದಿಂದ ಓಲ್ಡ್​​ ಮದ್ರಾಸ್ ರಸ್ತೆ, ಹಲಸೂರು, ಎಂ.ಜಿ.ರಸ್ತೆ, ರಾಜಭವನ, ಮೇಖ್ರಿ ಸರ್ಕಲ್, ಸದಾಶಿವನಗರ ಜಂಕ್ಷನ್, ಯಶವಂತಪುರ ಸರ್ಕಲ್, ಗೊರಗುಂಟೆಪಾಳ್ಯ, ಪೀಣ್ಯ ಮೊದಲ ಹಂತ ಅಲ್ಲಿಂದ ಜಾಲಹಳ್ಳಿ ಕ್ರಾಸ್ ಬಳಿಕ ಇಸ್ರೋ ಕಚೇರಿಗೆ ಮೋದಿ ತಲುಪಿದರು.

ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲು ಮೋದಿಯವರು ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ನಿಂತಿದ್ದ ಬಿಜೆಪಿ ನಾಯಕರಾದ ಶಾಸಕ ಮುನಿರತ್ನ, ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಆರ್.ಅಶೋಕ್, ಕೆ. ಗೋಪಾಲಯ್ಯ ಕಡೆ ಕೈ ಬೀಸಿದರು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ