NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಆಂಧ್ರ ಪ್ರದೇಶದ ಮಹಿಳೆಗೆ 328 ರೂ. ಮೌಲ್ಯದ ಉಚಿತ ಟಿಕೆಟ್‌ ವಿತರಿಸಿದ ಕಂಡಕ್ಟರ್‌

ವಿಜಯಪಥ ಸಮಗ್ರ ಸುದ್ದಿ

ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗ ಕುಷ್ಟಗಿ ಘಟಕದ ಬಸ್‌ ನಿರ್ವಾಹಕರೊಬ್ಬರು ಕುಷ್ಟಗಿ-ಬೆಂಗಳೂರು ಮಾರ್ಗದ ಬಸ್‌ನಲ್ಲಿ ಅಂಧ್ರ ಪ್ರದೇಶದ ಮಹಿಳೆಗೆ ಉಚಿತ ಟಿಕೆಟ್‌ ನೀಡಿ ಪೇಚಿಗೆ ಸಿಲುಕಿದ್ದಾರೆ.

ಇದೇ ಆ.27ರಂದು ಅಂದರೆ ನಿನ್ನೆ 12.43ರ ಸಮಯದಲ್ಲಿ ಸಾರಿಗೆ ತನಿಖಾಧಿಕಾರಿಗಳು ಬಸ್‌ಹತ್ತಿ ಟಿಕೆಟ್‌ ಚೆಕ್‌ ಮಾಡುವಾಗ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿ ಹೇಮಾವತಿ ಎಂಬುವರು ತಮ್ಮ ಆಧಾರ್‌ ಕಾರ್ಡ್‌ ತೋರಿಸಿ ನಿರ್ವಾಹಕನ ಯಾಮಾರಿಸಿ ಉಚಿತ ಟಿಕೆಟ್‌ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಟಿಕೆಟ್‌ ವಿತರಿಸುವ ವೇಳೆ ಹೇಮಾವತಿ ಯಾವ ರಾಜ್ಯದವರು ಎಂದು ಗಮನಿಸದ ಕುಷ್ಟಗಿ ಘಟಕದ ನಿರ್ವಾಹಕ ಬಸವರಾಜ ಎಂಬುವರು ಶಕ್ತಿ ಯೋಜನೆಯ ಉಚಿತ ಟಿಕೆಟ್‌ಅನ್ನು ಕರ್ನಾಟಕ ಮಹಿಳೆಯ ಟಿಕೆಟ್‌ ಜತೆಗೆ ವಿತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆಧಾರ್‌ ಗಮನಿಸಿಯೂ ಈ ರೀತಿ ಕಂಡಕ್ಟರ್‌ ಮಾಡಿದ್ದಾರೆ ಎಂಬ ಅನುಮಾನ ಮೂಡುವಂತಿದೆ ಈ ಘಟನೆ.

ಇನ್ನು ಟಿಕೆಟ್‌ ಪರಿಶೀಲಿಸಿಕೊಂಡು ಬರುತ್ತಿದ್ದ ತನಿಖಾಧಿಕಾರಿಗಳಿಗೆ ನಿರ್ವಾಹಕ ಬಸವರಾಜ ಆಂಧ್ರ ಪ್ರದೇಶದ ಮಹಿಳೆಗೆ ಕರ್ನಾಟಕ ರಾಜ್ಯದ ಮಹಿಳೆಯ ಜತೆಗೆ ಸೇರಿ 328 ರೂ.ಗಳ ಉಚಿತ ಟಿಕೆಟ್‌ ವಿತರಿಸಿರುವುದು ಗೊತ್ತಾಗಿದೆ. ಕರ್ನಾಟಕ ಮಹಿಳೆಯ ಜತೆಗೆ ಟಿಕೆಟ್‌ ವಿತರಿಸಿರುವುದೇ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ಈ ರೀತಿ ಟಿಕೆಟ್‌ ವಿತರಿಸುವುದಕ್ಕೂ ಮುನ್ನ ನಿರ್ವಾಹಕ ಬಸವರಾಜ ಮಹಿಳೆಯ ಆಧಾರ್‌ ಕಾರ್ಡ್‌ ಚೆಕ್‌ ಮಾಡಬೇಕಿತ್ತಲ್ಲವೇ ಒಂದು ವೇಳೆ ನೋಡಿಯೂ ಈತ ಕರ್ನಾಟಕ ಮಹಿಳೆಯ ಜತೆಗೆ ಟಿಕೆಟ್‌ ವಿತರಿಸಿದ್ದರೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಇನ್ನು ಮುಂದೆ ಈ ರೀತಿಯ ಕೃತ್ಯ ಎಸಗದಂತೆ ಪಾಠ ಕಲಿಸಬೇಕಿದೆ.

ಅಲ್ಲದೆ ಈ ರೀತಿಯ ಕೃತ್ಯ ಎಸಗುವುದು ಸಂಸ್ಥೆಗೆ ಮತ್ತು ರಾಜ್ಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಇದು ಇತರೆ ನಿರ್ವಾಹಕರಿಗೂ ಪಾಠವಾಗಬೇಕಿದೆ ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ.

ಒಟ್ಟಾರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಹೆಚ್ಚಾಗಿ ಸಾರಿಗೆ ನಿರ್ವಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಇಂಥ ಕೃತ್ಯಗಳನ್ನು ಎಸಗುವುದು ಸರಿಯಲ್ಲ. ನಿರ್ವಾಹಕರು ಕೂಡ ನಿಷ್ಟೆಯಿಂದ ಕೆಲಸ ಮಾಡಬೇಕಿದೆ ಎಂದು ನೌಕರರೆ ಹೇಳುತ್ತಿದ್ದಾರೆ.

ಕೆಲವೊಮ್ಮೆ ತಪ್ಪು ಮಾಡದ ನಿರ್ವಾಹಕರಿಗೆ ಅಮಾನತಿನ ಶಿಕ್ಷೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಇದು ನಿರ್ವಾಹಕ ಬೇಕಂತಲೇ ಮಾಡಿರುವ ಕೃತ್ಯವೋ ಇಲ್ಲ ಪ್ರಯಾಣಿಕರು ನಿರ್ವಾಹಕರನ್ನು ಯಾಮಾರಿಸಿದ್ದಾರೆಯೆ ಎಂಬುದನ್ನು ತಿಳಿದುಕೊಂಡು ನಿರ್ವಾಹಕರನ್ನು ಶಿಕ್ಷೆಗೆ ಗುರಿಪಡಿಸಬೇಕಿದೆ.

ಇಲ್ಲಿ ಕೆಲ ಪ್ರಯಾಣಿಕರು ಮಾಡುವ ತಪ್ಪಿಗೆ ನಿರ್ವಾಹಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದು ಬದಲಾಗಬೇಕು. ಪ್ರಯಾಣಿಕರು ತಪ್ಪು ಮಾಡಿದರೆ ಅವರಿಗೆ ಮಾತ್ರ ಶಿಕ್ಷೆಯಾಗಬೇಕು. ಇದರಲ್ಲಿ ನಿರ್ವಾಹಕ ಕೂಡ ಪ್ರಯಾಣಿಕರೊಂದಿಗೆ ಸೇರಿ ತಪ್ಪೆಸಗಿದರೆ ಇಬ್ಬರಿಗೂ ಶಿಕ್ಷೆಯಾಗಬೇಕು ಎಂದು ನೌಕರರು ಹೇಳುತ್ತಿದ್ದಾರೆ.

ಒಟ್ಟಾರೆ ಕೆಲ ನಿರ್ವಾಹಕರು ಕೂಡ ತಪ್ಪು ಮಾಡುತ್ತಿರುವುದು ಕಂಡು ಬರುತ್ತಿದೆ. ಈ ರೀತಿಯ ತಪ್ಪು ಮಾಡಿ 10 ರೂ. ಜೇಬಿಗಿಳಿಸಿಕೊಳ್ಳಲು ಹೋಗಿ ಅಮಾನತಿನ ಶಿಕ್ಷೆ, ಜತೆಗೆ ದಂಡ ಇನ್ನು ಮುಂದುವರಿದು ಸಾವಿರಾರು ರೂ. ಲಂಚಕೊಟ್ಟು ಮತ್ತೆ ಡ್ಯೂಟಿ ಪಡೆದುಕೊಳ್ಳುವ ಗೋಜಿಲಿಗೆ ಸಿಲುಕಿಕೊಳ್ಳುವ ಜತೆಗೆ ಮಾನಸಿಕ ಯಾತನೆ ಕೂಡ ಅನುಭವಿಸಬೇಕು. ಇದು ನಮಗೆ ಬೇಕಾ ಎಂಬುದನ್ನು ಅರಿತುಕೊಂಡು ನೌಕರರು ಕೂಡ ಸಂಸ್ಥೆಗೆ ನಿಷ್ಠೆಯನ್ನು ತೋರಿಬೇಕಿದೆ.

ತನಿಖಾಧಿಕಾರಿಗಳು ನಿರ್ವಾಹಕನಿಗೆ ಮೆಮೋ ಕೊಟ್ಟಿರುವುದು.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ