NEWS

ವಾಲ್ಮೀಕಿ ಮಠದ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ವಾಲ್ಮೀಕಿ ಮಠದ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ವೈರಲ್ ಆಗಿದ್ದು, ಅವರು ಬಳಸಿರುವ ಭಾಷೆ, ದ್ವೇಷದ ಮಾತುಗಳು ಪೀಠಾಧಿಪತಿಗಳ ವಿರುದ್ಧ ಬೊಟ್ಟು ಮಾಡುವಂತಿದೆ.

ಸ್ವಾಮೀಜಿಗಳು ಅಂದ್ರೆ ಭಕ್ತರಿಗೆ ಸನ್ಮಾರ್ಗ ತೋರಿಸುವ ದಾರಿದೀಪ. ಸ್ವಾಮೀಜಿಗಳು ನಡೆದಾಡುವ ದೇವರೆಂದೇ ತಿಳಿದಿರುವ ಭಕ್ತಗಣ ಇದನ್ನು ಕೇಳಿದ್ರೆ ಅನುಮಾನದಿಂದ ನೋಡುವಂತಾಗಿದೆ. ಭಾರತೀಯ ಪರಂಪರೆಯಲ್ಲಿ ಸ್ವಾಮೀಜಿಗಳಿಗೆ ಪವಿತ್ರ ಸ್ಥಾನವಿದೆ. ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮೀಜಿಗಳು ಸರಳ, ಮೃದು ಸ್ವಭಾವದ ಸಾತ್ವಿಕ ಜೀವನ.

ಮನುಕುಲದ ಉದ್ಧಾರಕ್ಕೆ ಜಾತಿ, ಮತ, ಪಂಥಗಳನ್ನು ಮೀರಿ ಅಧ್ಯಾತ್ಮ ಜೀವಿಯಾಗಿ ಬಾಳುತ್ತಾರೆ. ಭಕ್ತಿಯ ಬೀಜಗಳನ್ನು ಬಿತ್ತಿ ಸಮಾಜಕ್ಕೆ ಬೆಳಕು ಚೆಲ್ಲುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಸ್ವಾಮೀಜಿಗಳ ಬದುಕು ಭಕ್ತಿಯ ಹಳಿ ತಪ್ಪಿದಂತಿದೆ. ಸ್ವಾರ್ಥ, ಸ್ವಜನಪಕ್ಷಪಾತ, ದ್ವೇಷ, ಮತ್ಸರ ಮೇಳೈಸಿದಂತಿದೆ.

ವಾಲ್ಮೀಕಿ ಸಮುದಾಯದ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯ ತುಂಗಭದ್ರೆಯ ತಟದಲ್ಲಿ ಸ್ವಾಪಿತವಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ತನ್ನದೇ ಆದ ಪರಂಪರೆ ಇದೆ. ಸದ್ಯ ಈ ಪೀಠಕ್ಕೆ ಪ್ರಸನ್ನಾನಂದಪುರಿ ಸ್ವಾಮೀಜಿ ಪೀಠಾಧ್ಯಕ್ಷರಾಗಿದ್ದಾರೆ. ಆದ್ರೆ ಸ್ವಾಮೀಜಿ ಇತ್ತೀಚೆಗೆ ತಮ್ಮ ವಿವಾದಿತ ಮಾತುಗಳಿಂದಲೇ ಸುದ್ದಿಯಾಗ್ತಿದ್ದಾರೆ.

ಸದ್ಯ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳ ನಡುವೆ ಮಾತುಕತೆ ನಡೆದಿದ್ದು ಅಶ್ಲೀಲ ಮಾತುಗಳು ಆಡಿಯೋದಲ್ಲಿ ಕೇಳಿಸಿವೆ.

ಭಕ್ತಿಯ ಪ್ರವಚನಗಳ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡುತ್ತಾ ಸಾಮಾನ್ಯರಲ್ಲೇ ಸಾಮಾನ್ಯರಂತೆ ಬದುಕಿದ ಪರಂಪರೆ ವಾಲ್ಮೀಕಿ ಪೀಠದ ಸ್ವಾಮೀಜಿಗಳದ್ದು. ಆದರೆ ಇಲ್ಲಿ ಪ್ರಸನ್ನಾನಂದ ಸ್ವಾಮೀಜಿ ಮಾತುಗಳನ್ನು ಕೇಳಿ, ಮಾಜಿ ಸಚಿವ ಶ್ರೀರಾಮುಲು ಬಗ್ಗೆಯೂ ಮಾತನಾಡಿರುವ ಸ್ವಾಮೀಜಿ ಅಯೋಗ್ಯ, ಉಗ್ರವಾದಿ, ಬಟ್ಟೆ ಬಿಚ್ಚಿಸ್ತೀನಿ ಅನ್ನೋ ಮಾತುಗಳನ್ನು ಆಡಿದ್ದಾರೆ.

ಈ ಆಡಿಯೋ ಬಗ್ಗೆ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ ಮಠಾಧಿಪತಿಗಳು ಭಕ್ತರಿಗೆ ಸನ್ಮಾರ್ಗ ತೋರಿಸುವ ದಾರಿದೀಪ. ಅಂಧಕಾರವನ್ನು ತೊಲಗಿಸಿ ವಿಶ್ವಪ್ರೇಮತ್ವ ಸಾರುವ ಸ್ವಾಮೀಜಿಗಳ ಇಂತಹ ನಡೆ ಭಕ್ತರ ಮನಸ್ಸನ್ನ ಘಾಸಿ ಮಾಡ್ತಿರೋದಂತೂ ಸುಳ್ಳಲ್ಲ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು