ಬೆಂಗಳೂರು: ಜಿ20 ಸಮಾವೇಶಕ್ಕೆ ಬರುತ್ತಿರುವ ವಿದೇಶಿ ಗಣ್ಯರಿಗೆ ಮೋದಿ‘ಜಿ’ ಅವರ ಅಭಿವೃದ್ಧಿಯ ಅಚ್ಚೆ ದಿನಗಳನ್ನು ಮುಚ್ಚಿಡಲು ಪರದೆ ಹಾಕಲಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಬಡವರನ್ನು, ಬಡತನವನ್ನು ನೋಡದಿದ್ದರೆ ಆಯ್ತು ಬಡತನ ನಿರ್ಮೂಲನೆ ಮಾಡಿದಂತಾಗುತ್ತದೆ ಎಂಬುದು ‘ಬಡ ತಾಯಿಯ ಮಗನ’ (ನರೇಂದ್ರ ಮೋದಿ) ನಂಬಿಕೆಯಾಗಿದೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದೆ ಕಾಂಗ್ರೆಸ್.
ಇನ್ನು ದೆಹಲಿಯ ಸ್ಲಮ್‌ಗಳಿಗೆ ಪರದೆ ಹಾಕಿರುವ ಕೇಂದ್ರ ಸರ್ಕಾರ ಜಿ20 ಸಮಾವೇಶಕ್ಕಾಗಿ ದೆಹಲಿಯ ಸುಂದರೀಕರಣಕ್ಕೆ ಮಾಡಿದ ಖರ್ಚು ಬರೋಬ್ಬರಿ ₹4,200 ಕೋಟಿ ಎಂದು ವಿವರಿಸಿದೆ.
ಜಿ20 ಸಮಾವೇಶಕ್ಕಾಗಿ ಬಜೆಟ್ಟಿನಲ್ಲಿ ಮೀಸಲಿಟ್ಟ ಮೊತ್ತ ₹990 ಕೋಟಿ. ಅತಿಥಿ ಸತ್ಕಾರಕ್ಕಾಗಿ ಮಾಡಿದ ಖರ್ಚು ₹2,700 ಕೋಟಿ. ಹೀಗೆ ದೆಹಲಿಯ ಸುಂದರೀಕರಣಕ್ಕೆ ₹4,200 ಕೋಟಿ ಖರ್ಚು ಮಾಡಿದೆ. ಈ ಎಲ್ಲಾ ಖರ್ಚಿನಲ್ಲಿ ಬಡವರನ್ನು ಮುಚ್ಚಿಡುವ ಬದಲು ಬಡತನವನ್ನೇ ನಿರ್ಮೂಲನೆ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದೆ.