NEWSಉದ್ಯೋಗಮೈಸೂರು

ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಮೈಸೂರಲ್ಲಿ ನ.19ರಂದು ಉದ್ಯೋಗ ಮೇಳ

ವಿಜಯಪಥ ಸಮಗ್ರ ಸುದ್ದಿ

ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಎನ್ಟಿಟಿ, ಡಿ.ಇಡಿ, ಎಂ.ಇಡಿ, ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಯುವಕ/ ಯುವತಿಯರಿಗಾಗಿ

ಪಿರಿಯಾಪಟ್ಟಣ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾವಂತ ಯುವಕ/ ಯುವತಿಯರ ಸ್ವಾವಲಂಬನೆ ಬದುಕಿಗಾಗಿ ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ನವೆಂಬರ್ 19 ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ನಂಜೇಗೌಡ ತಿಳಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಉದ್ಯೋಗ ಮೇಳವನ್ನು ಆದಿ ಚುಂಚನಗಿರಿ ಮಠದ ಪರಮ ಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಆಯೋಜಿಸಲಾಗಿದ್ದು, ಈ ಮೇಳವು ನವೆಂಬರ್ 19 ರ ಭಾನುವಾರದಂದು ಮೈಸೂರಿನ ಹೆಬ್ಬಾಳದ ಲಕ್ಷ್ಮಿಕಾಂತ ದೇವಾಲಯದ ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡು ಸಂಜೆ 5 ಗಂಟೆಯ ವರೆಗೂ ನಡೆಯಲಿದೆ ತಿಳಿಸಿದರು.

ಈ ಉದ್ಯೋಗ ಮೇಳಕ್ಕೆ ದೇಶದ ಹೆಸರಾಂತ ಕಂಪನಿಗಳಾದ ಯುರೇಕಾ ಫೋರ್ಬ್ಸ್, ಟ್ರೈಟಾನ್ ವಾಲ್ವ್ಸ್ ಪ್ರೈ. ಲಿ, ಜೆಕೆ ಟೈರ್ಸ್ ಪ್ರೈವೇಟ್ ಲಿಮಿಟೆಡ್, ಶೆಕಾಮರ್ಜ್, ಪ್ಯಾರಡಿಗ್ಮ್ ಐಟಿ ಎಚ್ಆರ್ ಪ್ರೈವೇಟ್ ಲಿಮಿಟೆಡ್, ಡೊಮಿನೋಸ್, ಲೀಡೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕ್ವೆಸ್ ಕಾರ್ಪ್ ಲಿಮಿಟೆಡ್, ಗ್ರಿಟ್ ಮ್ಯಾನ್‌ಪವರ್ ಪ್ರೈವೇಟ್ ಲಿಮಿಟೆಡ್, ಎಲ್ ಜಿ ಬಾಲಕೃಷ್ಣನ್ ಪ್ರೈವೇಟ್ ಲಿಮಿಟೆಡ್, ಅಲಯನ್ಸ್ ಮೆಕಾಟ್ರಾನಿಕ್ಸ್ ಪ್ರೈ. ಲಿ, ರಿಷಿಕ್ ಎಫ್ಐಬಿಸಿ ಪ್ರೈವೇಟ್ , ಲಿಮಿಟೆಡ್, ಮಹೇಂದ್ರ ಟೆಲಿಫೋನಿಕ್ಸ್, ಮಹೇಂದ್ರ ಫೈನಾನ್ಶಿಯಲ್ಸ್, ಕಲರ್ಟೋನ್ ಪ್ರೈ. ಲಿಬಕಾರ್ಡಿ ಇಂಡಿಯಾ ಲಿಮಿಟೆಡ್, ವಿಂಧ್ಯಾ ಇನ್ಫೋಟೆಕ್, ಸಬ್‌ವೇ ಹಾಸ್ಪಿಟಾಲಿಟಿ ಪ್ರೈ. ಲಿ.

ಸಂಧರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಬಿರಾ ಬೆವರೇಜಸ್ ಪ್ರೈ. ಲಿ, ಜಇಆರ್ಎಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ತ್ರಿವೇಣಿ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ರುಚಾ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಸೈಡರ್ಫೋರ್ಗೆರೋಸ್ಸಿ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಪ್ರೇಮ್ ಇಂಡಸ್ಟ್ರೀಸ್,ವಿನ್ಯಾಸ್ ಟೆಕ್ನಾಲಜೀಸ್, ಸ್ಪಾರ್ಕ್ ಮಿಂಡಾ ಕಾರ್ಪೊರೇಷನ್, ಎಸ್ಪಿ ಆರ್ ಡಿಸ್ಟಿಲರೀಸ್ ಪ್ರೈ. ಲಿ, ರಿಲಯನ್ಸ್ ರಿಟೇಲ್ ಲಿ,ಡಿಟಿಎಸ್ ಇಂಡಿಯಾ ಲಿ,ಪ್ರಬೋಧಿತ ಸರ್ವೀಸಸ್ ಇಂಡಿಯಾ ಲಿಮಿಟೆಡ್, ಬೆಲ್‌ಫಾಸ್ಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್.

ಐಡಿಯಲ್ ವರ್ಕ್‌ಫೋರ್ಸ್ ಪ್ರೈವೇಟ್ ಲಿಮಿಟೆಡ್, ಎಂ ಪವರ್ ಸೋಲ್ಶನ್ಸ್ ಇಂಡಿಯಾ ಲಿಮಿಟೆಡ್, ಹಿಂದುಜಾ ಗ್ಲೋಬಲ್ ಸಲ್ಯೂಷನ್ಸ್, ಮಹಾಲಕ್ಷ್ಮಿ ಸ್ವೀಟ್ಸ್ ಸೇರಿದಂತೆ 50 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು ಒಬ್ಬ ಅಭ್ಯರ್ಥಿ 5 ಸಂಸ್ಥೆಗಳ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಎನ್ಟಿಟಿ, ಡಿ.ಇಡಿ, ಎಂ.ಇಡಿ, ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಯುವಕ ಯುವತಿಯರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿರುವ ಅವರು, ಹೆಚ್ಚಿನ ಮಾಹಿತಿಗಾಗಿ ಮೋಹನ್ 9686564192, ರವಿಚಂದ್ರ 9886943810, ಕಿರಣ್ ಕುಮಾರ್ 8660569173 ಇವರನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ