NEWSಕೃಷಿನಮ್ಮರಾಜ್ಯ

ಖಾಲಿ ಬಿಂದಿಗೆ ಹೊತ್ತು ಕಾವೇರಿ ನೀರು ಉಳಿಸಿ ಧರಣಿ: ಫ್ರೀಡಂ ಪಾರ್ಕಲ್ಲಿ ಕಜಸಂಸ ಹೋರಾಟ ನಾಲ್ಕನೇ ದಿನವೂ ಮುಂದುವರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಬೆದರಿಕೆಗೆ ಅಂಜಿ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುವ ನೀರು ನಿಲ್ಲಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಮಂತ್ರಿಗಳಿಗೆ ಘೇರಾವ್ ಮಾಡುವ ಚಳವಳಿಗೆ ಕರೆ ನೀಡಬೇಕಾಗುತ್ತದೆ. ಅಲ್ಲದೆ ದಸರಾ ಆಚರಣೆಗೆ ಅಡ್ಡಿ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಫ್ರೀಡಂ ಪಾರ್ಕಲ್ಲಿ ಕಾವೇರಿ ನೀರು ಉಳಿಸಿ ಎಂದು ಹಮ್ಮಿಕೊಂಡಿರುವ ಧರಣಿ ಗುರುವಾರವಾದ ಇಂದಿಗೆ ನಾಲ್ಕನೇ ದಿನ ಪೂರೈಸಿದ್ದು, ಐದನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ, ನೀರಾವರಿ ಮಂತ್ರಿಗಳು ಇಂಡಿಯಾ ಒಕ್ಕೂಟ ಬೇಕೋ ಅಥವಾ ರಾಜ್ಯದ ಜನ ಬೇಕೋ ಎಂಬುದನ್ನು ನಿರ್ಧರಿಸಿ, ಪದೇಪದೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮಾತಿನ ಒತ್ತಡಕ್ಕೆ ಅಂಜಬೇಡಿ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ಆದೇಶದಿಂದ ರಾಜ್ಯದ ಜನರಿಗೆ ಆಗುತ್ತಿರುವ ಸಂಕಷ್ಟದ ಬಗ್ಗೆ ವಿವರಿಸಲು ಕೇಂದ್ರ ಸರ್ಕಾರದ ಗಮನ ಸಳೆಯಲು ಸದ್ಯದಲ್ಲಿಯೇ ಸಮಿತಿಯ ಮುಖಂಡರ ನಿಯೋಗ ದೆಹಲಿಗೆ ತೆರಳಲಿದೆ ಏಂದ ಅವರು, ಕಾವೇರಿ ಅಚ್ಚು ಕಟ್ಟು ಭಾಗದ ಎಲ್ಲ ಲೋಕಸಭಾ ಸದಸ್ಯರಿಗೆ ಪತ್ರ ಬರೆಯಲಾಗಿದೆ. ನಿಯೋಗದ ಜತೆ ಜಲಶಕ್ತಿ ಸಚಿವರ ಭೇಟಿಗೆ ಅವಕಾಶ ಕೋರಬೇಕೆಂದು ಲೋಕಸಭಾ ಸದಸ್ಯರಿಗೆ ವಿನಂತಿಸಲಾಗಿದೆ ಎಂದು ತಿಳಿಸಿದರು.

ಇನ್ನು ಇಂದು ಖಾಲಿ ಬಿಂದಿಗೆಗಳನ್ನು ತಲೆ ಮೇಲೆ ಹೊತ್ತು ಕಾವೇರಿ ನಮ್ಮದು ಕಾವೇರಿ ಉಳಿಸಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ನಾಲ್ಕನೇ ದಿನದ ಧರಣಿ ಮುಂದುವರಿಸಿದರು. ಧರಣಿಯಲ್ಲಿ ಕನ್ನಡ ಚಳವಳಿಯ ಗುರುದೇವ ನಾರಾಯಣ್, ಮುಖಂಡ ನಾಡ ಸೇನಾನಿ ಕೆಂಪೇಗೌಡ ಪ್ರತಿಷ್ಠಾನ ಅಧ್ಯಕ್ಷ ಮೋಹನ್, ದಲಿತ ಸಂಘಟನೆಗಳ ಒಕ್ಕೂಟದ ವೆಂಕಟಸ್ವಾಮಿ, ಅಮ್ಮಾ ಆದ್ಮಿ ಪಕ್ಷದ ವಿಶ್ವನಾಥ್ ಟಿ.ಸಾಹಿತಿ ಶ್ರೀನಿವಾಸ್, ಸೂರ್ಯನಾರಾಯಣ್ ರೈತ ಮುಖಂಡ ಗಜೇಂದ್ರ, ಕಮಲಮ್ಮ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು