KSRTC: ಶೌಚಕ್ಕೆ ಹೋಗಲು ಮಹಿಳಾ ಪ್ರಯಾಣಿಕರು ಕೇಳಿದಕ್ಕೆ ಬಸ್ ನಿಲ್ಲಿಸಿದ ಚಾಲನಾ ಸಿಬ್ಬಂದಿ ವಿರುದ್ಧ ಕೇಸ್ ಬರೆದ ತನಿಖಾಧಿಕಾರಿ
ಬೆಂಗಳೂರು: ದಾರಿ ಮಧ್ಯೆ ತನಿಖಾಧಿಕಾರಿಗಳು ಬಂದು ಬಸ್ ನಿಲ್ಲಿಸಿದ್ದಕ್ಕೆ ಕಾರಣ ಕೇಳಿದ್ದಾರೆ. ಆ ವೇಳೆ ಕೆಎಸ್‌ಆರ್‌ಟಿಸಿ ಬಸ್‌ನ ಚಾಲನಾ ಸಿಬ್ಬಂದಿ ಮಹಿಳಾ ಪ್ರಯಾಣಿಕರೊಬ್ಬರು ಶೌಚಕ್ಕೆ ಹೋಗಬೇಕು ಬಸ್ ನಿಲ್ಲಿಸಿ ಎಂದು ಮನವಿ ಮಾಡಿದಕ್ಕೆ ಬಸ್ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ಆ ಮಹಿಳಾ ಪ್ರಯಾಣಿಕರ ಮನವಿ ಮೇರೆಗೆ ಬಸ್ ನಿಲ್ಲಿಸಿದ್ದಕ್ಕೆ ತನಿಖಾಧಿಕಾರಿಗಳು ಬಂದು ಸಿಬ್ಬಂದಿ ವಿರುದ್ಧ ಕೇಸ್ ಬರೆದಿದ್ದಾರೆ. ಅಲ್ಲದೆ ವೇ ಬಿಲ್ ಕೊಡಿ ಎಂದು ಕೇಳಿದ್ದಾರೆ. ಈ ವೇಳೆ ಸಿಬ್ಬಂದಿ ನೀವು ಸಮಸ್ತ್ರವಿಲ್ಲದೆ ಬಂದಿದ್ದೀರಾ ಸಮಸ್ತ್ರದಲ್ಲಿ ಬನ್ನಿ ನಾವು ವೇ ಬಿಲ್ ಕೊಡುತ್ತೇವೆ ಎಂದು ಹೇಳಿದ್ದಾರೆ.
ಆದರೆ, ಸಿಬ್ಬಂದಿಯ ವಿರುದ್ಧ ವೇ ಬಿಲ್ ಕೊಡಲು ನಿರಾಕರಿಸಿದರು ಎಂದು ದೂರು ಬರೆದುಕೊಂಡು ಹೋಗಿದ್ದಾರೆ ತನಿಖಾಧಿಕಾರಿಗಳು. ಸಾರಿಗೆ ನಿಗಮದ ಯಾವುದೇ ಒಬ್ಬ ತನಿಖಾಧಿಕಾರಿ ಲೈನ್ ಚೆಕಿಂಗ್‌ಗೆ ಬಂದ ವೇಳೆ ಅವರು ಸಮವಸ್ತ್ರ ಧರಿಸಿರಬೇಕು ಎಂದು ನಿಗಮದಲ್ಲಿ ಕಾನೂನನ್ನು ಮಾಡಲಾಗಿದೆ. ಆದರೆ, ಆ ನಿಯಮವನ್ನೇ ಗಾಳಿಗೆ ತೂರಿ ತನಿಖಾಧಿಕಾರಿಗಳು ಟಿಕೆಟ್ ಚೆಕ್ ಮಾಡುವುದಕ್ಕೆ ಬರುತ್ತಾರೆ.
ಇನ್ನು ಈ ಬಗ್ಗೆ ಚಾಲನಾ ಸಿಬ್ಬಂದಿ ಪ್ರಶ್ನೆ ಮಾಡಿದರೆ ಮೇಲಧಿಕಾರಿಗಳಿಗೇ ಎದುರು ಮಾತನಾಡಿದ ಎಂದು ಮೆಮೋ ಕೊಟ್ಟು ಬಳಿಕ ಅಮಾನತು ಮಾಡಲಾಗುತ್ತಿದೆ. ಅಂದರೆ ಮೇಲಧಿಕಾರಿಗಳು ಯಾವ ರೀತಿ ಬಂದರು ಅದನ್ನು ಪ್ರಶ್ನೆ ಮಾಡಬಾರದು ಎಂಬ ಅಲಿಖಿತ ನಿಯಮವನ್ನು ಈ ಅಧಿಕಾರಿಗಳೇ ಮಾಡಿಕೊಂಡಿದ್ದಾರೆ.
ಇನ್ನಾದರೂ ನಿಗಮದಲ್ಲಿ ಇರುವ ನಿಯಮಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲಿಸಲೇ ಬೇಕು ಎಂಬುದರ ಬಗ್ಗೆ ಇರುವ ಕಾನೂನನ್ನು ಉಲ್ಲಂಘಿಸುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಕೊಡಬೇಕು. ಆಗ ಅವರು ಕೂಡ ಸಮಸ್ತ್ರ ಧರಿಸಿಕೊಂಡು ಕೆಲಸಕ್ಕೆ ಹಾಜರಾಗುತ್ತಾರೆ.
ಆದರೆ, ಇಲ್ಲಿ ಮೇಲಧಿಕಾರಿಗಳೇ ನಿಯಮ ಪಾಲಿಸದೆ ಕೆಳ ಹಂತದ ಸಿಬ್ಬಂದಿಗೆ ಪಾಲನೆ ಮಾಡಬೇಕು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂಬ ಪ್ರಶ್ನೆಯನ್ನು ಈಗ ಪ್ರಯಾಣಿಕರೇ ಕೇಳುತ್ತಿದ್ದಾರೆ.
ಇನ್ನು ಲೈನ್ ಚೆಕಿಂಗ್‌ಗೆ ಬರುವ ತನಿಖಾಧಿಕಾರಿಗಳಿಗೆ ಅವರು ಡ್ಯೂಟಿಗೆ ಹಾಜರಾಗತ್ತಿದ್ದಂತೆ ಈ ರೂಟ್‌ನ ಇದೇ ಬಸ್‌ಗಳನ್ನು ಚೆಕ್ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಆ ಬಳಿಕ ಆ ಬಸ್‌ಗಳನ್ನು ಮಾತ್ರ ತನಿಖಾಧಿಕಾರಿಗಳು ಚೆಕ್ ಮಾಡಬೇಕು. ಆದರೆ, ನಿಗಮಗಳಲ್ಲಿರುವ ಈ ನಿಯಮ ಈಗಲೂ ಪಾಲನೆಯಾಗುತ್ತಿಲ್ಲ. ಬದಲಿಗೆ ಸಿಕ್ಕ ಸಿಕ್ಕ ಬಸ್‌ಗಳನ್ನು ದಾರಿ ಮಧ್ಯೆ ನಿಲ್ಲಿಸಿ ಹತ್ತಿಕೊಂಡು ಟಿಕೆಟ್ ಚೆಕ್ ಮಾಡಲಾಗುತ್ತಿದೆ. ಮೊದಲು ಈ ಪದ್ಧತಿಗೆ ಕಡಿವಾಣ ಬೀಳಲೇಬೇಕು ಎಂದು ಉನ್ನತ ಅಧಿಕಾರಿಗಳಲ್ಲಿ ನೌಕರರು ಮನವಿ ಮಾಡಿದ್ದಾರೆ.