NEWSನಮ್ಮಜಿಲ್ಲೆವಿಡಿಯೋ

KSRTC: ಉಚಿತ ಟಿಕೆಟ್‌ ಕಾಯ್ದಿರಿಸಿದ್ದು ಶಿವಮೊಗ್ಗಕ್ಕೆ ಇಳಿದಿದ್ದು ಭದ್ರಾವತಿಯಲ್ಲಿ- ಅದಕ್ಕೆ ಮಹಿಳೆ ಕೊಟ್ಟ ಉತ್ತರ ಏನು ಗೊತ್ತಾ..!!?

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಬೇಕಾಬಿಟ್ಟಿಯಾಗಿ ಉಚಿತ ಟಿಕೆಟ್‌ ಕಾಯ್ದಿರಿಸುವವರ ( Booking free tickets ) ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ಜತೆಗೆ ಟಿಕೆಟ್‌ ಬುಕ್‌ ಮಾಡಿದ ನಿಲ್ದಾಣದಲ್ಲಿ ಇಳಿಯುವ ಬದಲು ಮಾರ್ಗ ಮಧ್ಯೆ ಇಳಿದು ಹೋಗುವವರ ಸಂಖ್ಯೆಗೂ ಲೆಕ್ಕವಿಲ್ಲ ಎಂಬಂತಾಗಿದೆ.

ಇನ್ನು ಮಹಿಳೆಯರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಲು ಟಿಕೆಟ್‌ ಕಾಯ್ದಿರಿಸುತ್ತಾರೆ. ಅದೂ ಕೂಡ ಒಮ್ಮೆಗೆ ಎರಡೆರಡು ಕಡೆ ಬೇರೆ ಬೇರೆ ಸಮಯಕ್ಕೆ ಬುಕ್‌ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ನಡುವೆ ಇಂದು ಅಂದರೆ ಅ.22ರ ಭಾನುವಾರ ಮುಂಜಾನೆ 6ಗಂಟೆಗೆ ಟಿಕೆಟ್‌ ಬುಕ್‌ ಮಾಡಿದ ಬಸ್‌ನಲ್ಲಿ ಮಹಿಳೆ ಮಂಗಳೂರಿನಲ್ಲಿ ಬಸ್‌ ಹತ್ತಿದ್ದಾರೆ. ಈ ವೇಳೆ ಆ ಮಹಿಳೆಗೆ ಆಕೆ ಕಾಯ್ದಿರಿಸಿದ ಶಿವಮೊಗ್ಗಕ್ಕೆ 286 ರೂ.  ಮೌಲ್ಯದ ಉಚಿತ ಟಿಕೆಟ್‌ಅನ್ನು  ನಿರ್ವಾಹಕರು ನೀಡಿದ್ದಾರೆ.

ಆಕೆ ಮಂಗಳೂರಿನಿಂದ ಭದ್ರಾವತಿಗೆ ಬಸ್‌ಬರುತ್ತಿದ್ದಂತೆ ಇಳಿದು ಹೋಗಲು ಸಿದ್ಧರಾಗಿದ್ದಾರೆ. ಈ ವೇಳೆ ನಿರ್ವಾಹಕರು ನೀವು ಟಿಕೆಟ್‌ ಕಾಯ್ದಿರಿಸಿರುವುದು ಶಿವಮೊಗ್ಗಕ್ಕೆ ಆದರೆ, ಇಳಿಯುತ್ತಿರುವುದು ಭದ್ರಾವತಿಯಲ್ಲಿ. ಹೀಗೆ ಏಕೆ ಮಾಡುತ್ತೀರಿ ಇದರಿಂದ ನಮಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ. ಅದಕ್ಕೆ ಮಹಿಳೆಯ ಸಂಬಂಧಿ ಬಂದು ಇಲ್ಲ ಇಲ್ಲಿಯೇ ಇಳಿಯಬೇಕು. ಅದು ನಮ್ಮಿಷ್ಟ ಎಂದು ನಿರ್ವಾಹಕರ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ.

ಈ ವೇಳೆ ನಿರ್ವಾಹಕರು ನೀವು ಹೀಗೆ ಮಾಡಿದರೆ ನಮಗೆ ಕಾರಣ ಕೇಳಿ ಮೆಮೋ ನೀಡಿ ನಂತರ ಅಮಾನತು ಮಾಡುತ್ತಾರೆ, ನಮ್ಮ ಸಮಸ್ಯೆಯನ್ನು ನೀವು ಅರ್ಥ ಮಾಡಿಕೊಳ್ಳಿ ಎಂದು ಹೇಳಿ, ಭದ್ರಾವತಿಯಲ್ಲಿ ಇಳಿಯದಂತೆ ಮನವಿ ಮಾಡುತ್ತಾರೆ. ಅದಕ್ಕೆ ಒಪ್ಪದಿದ್ದಾಗ ಸರಿ ನೀವು ಇಳಿಯುತ್ತಿರುವುದಕ್ಕೆ ಕಾರಣ ಹೇಳಿ ನಾವು ವಿಡಿಯೋ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ವೇಳೆ ಮಹಿಳೆ ನಮಗೆ ಭದ್ರಾವತಿಗೆ ಟಿಕೆಟ್‌ ಕಾಯ್ದಿರಿಸಲು ಅವಕಾಶವಿಲ್ಲ. ಹೀಗಾಗಿ ಶಿವಮೊಗ್ಗಕ್ಕೆ ಕಾಯ್ದಿರಿಸಿದ್ದೇವೆ. ಆದರೆ, ನಮ್ಮ ಮನೆ ಇರುವುದು ಕೆಜಿಎಫ್‌ನಲ್ಲಿ ಆದ್ದರಿಂದ ಭದ್ರಾವತಿ ಬಸ್‌ ನಿಲ್ದಾಣದಲ್ಲಿ ಇಳಿಯುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ನಿರ್ವಾಹಕರು ಹೀಗೆ ಏಕೆ ಮಾಡುತ್ತೀರಿ ಎಂದು ಕೇಳಿದಕ್ಕೆ ಆ ಮಹಿಳೆಯ ಸಂಬಂಧಿ ಸಿಟ್ಟಾಗಿ ಮಾತನಾಡುತ್ತಾರೆ. ಈ ಮಧ್ಯೆ ಅದೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳಾ ವಕೀಲರೊಬ್ಬರು ಬಂದು ನೀವು ಹೀಗೆ ಮಾಡಿದರೆ ತನಿಖಾಧಿಕಾರಿಗಳು ಬಂದು ಕಾರಣ ಕೇಳಿ ನಿರ್ವಾಹಕರಿಗೆ ಮೆಮೋ ಕೊಡುತ್ತಾರೆ ಇದು ನಿಮಗೆ ಗೊತ್ತಾ?

ಅಲ್ಲದೆ ಡಿಪೋಗಳಲ್ಲಿ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಇವರು ಉತ್ತರ ಕೊಡಬೇಕು. ಅಲ್ಲದೆ ಸಮಸ್ಯೆ ಎದುರಿಸಬೇಕು. ಹೀಗಾಗಿ ನೀವು ಇಳಿಯುತ್ತಿರುವುದಕ್ಕೆ ಕಾರಣ ಹೇಳಿ ಹೋಗಿ ಎಂದು ಹೇಳಿದ್ದರೂ ಅವರೊಂದಿಗೂ ವಾದಕ್ಕೆ ಇಳಿದರು.

ಬಳಿಕ ಭದ್ರಾವತಿಯಲ್ಲಿ ಇಳಿಯುತ್ತಿರುವುದಕ್ಕೆ ಕಾರಣ ಹೇಳಿ ಹೋದರು. ನೋಡಿ ಹೀಗೆ ಬೇಕಾಬಿಟ್ಟಿಯಾಗಿ ಕೆಲ ಮಹಿಳೆಯರು ನಡೆದುಕೊಳ್ಳುತ್ತಿರುವುದರಿಂದ ಚಾಲನಾ ಸಿಬ್ಬಂದಿ ಅಮಾನತಿನ ಶಿಕ್ಷೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ನಿಗಮದ ಆಡಳಿತ ಮಂಡಳಿ ಮತ್ತು ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದರೆ ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೂ ಶಿಕ್ಷೆ ಎಂಬಂತಾಗುತ್ತದೆ.

ಇನ್ನು ನಾಡಿನ ಮಹಿಳೆಯರು ಕೂಡ ತಾವು ಇಳಿಯುವ ಊರಿಗೆ ಮಾತ್ರ ಟಿಕೆಟ್‌ ತೆಗೆದುಕೊಳ್ಳಬೇಕು. ಒಂದು ವೇಳೆ ಆ ಬಸ್‌ನಿಲ್ದಾಣಕ್ಕಿಂತ ಮುಂದಿನ ಬಸ್‌ ನಿಲ್ದಾಣದಲ್ಲಿ ಇಳಿಯುವುದಿದ್ದರೆ ಬಳಿಕ ನಂತರದ ನಿಲ್ದಾನಕ್ಕೆ ಮತ್ತೆ ಟಿಕೆಟ್‌ ಪಡೆದುಕೊಳ್ಳಿ ಇದರಿಂದ ಯಾರಿಗೂ ಸಮಸ್ಯೆ ಆಗಲ್ಲ ಎಂಬುವುದು ಸಿಬ್ಬಂದಿಯ ಮನವಿಯಾಗಿದೆ.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!