Vijayapatha – ವಿಜಯಪಥ
Friday, November 1, 2024
CrimeNEWSನಮ್ಮಜಿಲ್ಲೆಸಿನಿಪಥ

ಚೆಕ್‌ಬೌನ್ಸ್‌ ಪ್ರಕರಣ: ಸಿನಿಮಾ ಸಹಾಯಕ ನಿರ್ದೇಶಕ ರಾಜೇಶ್‌ಗೆ ಜಾಮೀನು ರಹಿತ ವಾರಂಟ್ ಜಾರಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚೆಕ್ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಲನಚಿತ್ರ ಸಹಾಯಕ ನಿರ್ದೇಶಕ ಎಸ್‌.ರಾಜೇಶ್‌ ಕೋರ್ಟ್‌ಗೆ ಗೈರಾಗಿದ್ದರಿಂದ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ ಸೋಮವಾರ ಜಾಮೀನು ರಹಿತ ವಾರಂಟ್(NBW) ನೀಡಿ ನವೆಂಬರ್‌ 10ಕ್ಕೆ ಮುಂದೂಡಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಸಿನಿಮಾ ವಿತರಕ, ಬಿಸಿನಸ್‌, ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡು ತನ್ನ ಸ್ನೇಹಿತರ ಮೂಲಕ ದೇವರಾಜು ಎಂಬುವರಿಗೆ ಪರಿಚಯವಾದ ಆರೋಪಿ ರಾಜೇಶ್‌ ಗೃಹೋಪಯೋಗಿ ವಸ್ತುಗಳ ಮೇಲೆ ಬಂಡವಾಳ ಹೂಡಬೇಕು ಅದಕ್ಕಾಗಿ ಹಣದ ಅವಶ್ಯವಿದೆ ಎಂದು ಹೇಳಿ ಸುಮಾರು 4 ವರ್ಷದ ಹಿಂದೆ 4.5 ಲಕ್ಷ ರೂಪಾಯಿಯನ್ನು ಪಡೆದು ಬಳಿಕ ಕೊಟ್ಟ ಹಣವನ್ನು ವಾಪಸ್‌ ಕೊಟ್ಟಿಲ್ಲ.

ಆ ಬಳಿಕ 2022ರ ಮೇನಲ್ಲಿ 3.75 ಲಕ್ಷ ರೂಪಾಯಿ ಚೆಕ್‌ ನೀಡಿದ್ದ ಆರೋಪಿ. ಆ ಚೆಕ್‌ಅನ್ನು ಬ್ಯಾಂಕ್‌ಗೆ ಹಾಕಿದಾಗ ಅಕೌಂಟ್‌ನಲ್ಲಿ ಸಾಕಷ್ಟು ಹಣವಿಲ್ಲ ಎಂದು ಚೆಕ್‌ ಬೌನ್ಸ್‌ ಆಯಿತು. ಹೀಗಾಗಿ ಜೂನ್‌ 2022ರಲ್ಲಿ ದೇವರಾಜು ಕೋರ್ಟ್‌ ಮೊರೆ ಹೋದರು. ಅಂದಿನಿಂದ ಈವರೆಗೂ ತಲೆ ಮರೆಸಿಕೊಂಡು ಕೋರ್ಟ್‌ಗೂ ಹಾಜರಾಗದೆ ಇತ್ತ ಕೊಟ್ಟ ಹಣವನ್ನು ವಾಪಸ್‌ ಕೊಡದೆ ಓಡಾಡಿಕೊಂಡಿದ್ದಾನೆ. ಹೀಗಾಗಿ ಆರೋಪಿ ರಾಜೇಶ್‌ಗೆ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ ಸಿಟಿ ಸಿವಿಲ್‌ ಕೋರ್ಟ್‌.

ಆರೋಪಿ ರಾಜೇಶ್‌ ಇದೇ ರೀತಿ ಹಲವಾರು ಜನರ ಬಳಿ ಸುಳ್ಳು ಹೇಳಿ ಸಾಲದ ರೂಪದಲ್ಲಿ ಹಣ ಪಡೆದು ವಂಚನೆ ಎಸಗಿರುವ ಬಗ್ಗೆಯೂ ಆರೋಪವಿದೆ. ಈತ ತಮ್ಮ ಸ್ನೇಹಿತರು ಮತ್ತು ಸ್ನೇಹಿತರ ಗೆಳೆಯರ ಬಳಿಯೂ ಸಾಲ ಪಡೆದು ಮರಳಿಸಿಲ್ಲ ಎಂಬ ಆರೋಪವಿದೆ.

ಒಟ್ಟಾರೆ ಸಿನಿಮಾ, ವ್ಯಾಪಾರ ಇತ್ಯಾದಿ ಕೆಲಸ ಮಾಡುವುದಾಗಿ ನಂಬಿಸಿ ಸುಮಾರು 75 ಲಕ್ಷ ರೂಪಾಯಿವರೆಗೂ ಸ್ನೇಹಿತರಿಂದ ಪಡೆದು ವಂಚಿಸಿರುವ ಆರೋಪ ರಾಜೇಶ್‌ ಮೇಲೆ ಇದೆ. ಸದ್ಯ ಸಿಟಿ ಸಿವಿಲ್‌ ನ್ಯಾಯಾಲಯ NBW ನೀಡಿದ್ದು, ವಿಚಾರಣೆಯನ್ನು ನವೆಂಬರ್‌ 10ಕ್ಕೆ ಮುಂದೂಡಿದೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...