NEWS

ಏಕದಿನ ವಿಶ್ವಕಪ್​ನಲ್ಲಿ ಅಗ್ರಜರ ಕಾದಾಟ: ಇವತ್ತಿನ ಪಂದ್ಯದತ್ತಲೇ ಕ್ರಿಕೆಟ್ ಫ್ಯಾನ್ಸ್ ಚಿತ್ತ

ವಿಜಯಪಥ ಸಮಗ್ರ ಸುದ್ದಿ

ನಿಜಕ್ಕೂ ಕ್ರಿಕೆಟ್ ಕಾಶಿಯಲ್ಲಿ ನಡೆಯೋದು ಬ್ಯಾಟ್​ ಆ್ಯಂಡ್​ ಬಾಲ್ ನಡುವಿನ ಫೈಟ್. ಹೌದು! ಏಕದಿನ ವಿಶ್ವಕಪ್​ನಲ್ಲಿ ಇಂದು ನಡೆಯೋದು ಅಗ್ರಜರ ಕಾದಾಟ. ಹೀಗಾಗಿ ಇವತ್ತಿನ ಪಂದ್ಯದತ್ತಲೇ ಕ್ರಿಕೆಟ್ ಫ್ಯಾನ್ಸ್ ಚಿತ್ತ ನೆಟ್ಟಿದೆ. ಹಾಗಾದ್ರೆ, ಇಂದಿನ ಮೆಗಾ ದಂಗಲ್​ನಲ್ಲಿ ಟೀಮ್ ಇಂಡಿಯಾಗೆ ಆಫ್ರಿಕಾ ಬ್ರೇಕ್ ಹಾಕುತ್ತಾ? ಡೇಂಜರಸ್ ಆಫ್ರಿಕನ್ಸ್​ ವ್ಯೂಹಕ್ಕೆ ಟೀಮ್ ಇಂಡಿಯಾ ಗೇಮ್​ಪ್ಲಾನ್ ಏನು?

ವಿಶ್ವಕಪ್​ನ ಮೆಗಾ ಫೈಟ್​​ಗೆ ಭಾರತದ ಕ್ರಿಕೆಟ್ ಕಾಶಿ ಸಾಕ್ಷಿಯಾಗುತ್ತಿದೆ. ವಿಶ್ವಕಪ್​ನ ಟೇಬಲ್ ಟಾಪರ್​​ಗಳ ದಂಗಲ್​ ನಡೀತಿದ್ದು, ಯಾರಿಗೆ ಯಾರು ಟಕ್ಕರ್ ನೀಡುತ್ತಾರೆ ಎಂಬ ಭಾರಿ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ಸೆಂಚುರಿ ಸಿಡಿಸಿದ ಕ್ವಿಂಟನ್ ಡಿಕಾಕ್: ವಿಶ್ವಕಪ್​ನಲ್ಲಿ ಇಂದು ಅನ್​​ಸ್ಟಾಪಬಲ್​ ಟೀಮ್ ಇಂಡಿಯಾಗೆ, ಡೇಂಜರಸ್ ಸೌತ್ ಆಫ್ರಿಕಾ ಸವಾಲ್​ ಎಸೆಯಲಿದೆ. ಟೀಮ್ ಇಂಡಿಯಾ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕೋ ಲೆಕ್ಕಚಾರದಲ್ಲಿದೆ. ಇತ್ತ ಹರಿಣಗಳ ಬೇಟೆಗೆ ಇಂಡಿಯನ್ ಟೈಗರ್ಸ್ ಟಾರ್ಗೆಟ್​ ಸೆಟ್​ ಮಾಡಿದ್ದಾರೆ. ಇನ್​ಫ್ಯಾಕ್ಟ್​_ ಸೌತ್​ ಆಫ್ರಿಕಾದ ಈ ಆಟಗಾರರನ್ನು ಮಟ್ಟ ಹಾಕಿದ್ರೇನೆ, ಟೀಮ್ ಇಂಡಿಯಾ ಗೆಲುವಿಗೆ ರಹದಾರಿ ಕೂಡ. ಹಾಗಾದ್ರೆ ರೋಹಿತ್ ಯಾರ‍್ಯಾರಿಗೆ ಟಾರ್ಗೆಟ್ ಫಿಕ್ಸ್​ ಮಾಡಿದ್ದಾರೆ?

ಡಿಕಾಕ್​ಗೆ ಆರಂಭದಲ್ಲೇ ನೀಡಬೇಕು ಡಿಚ್ಚಿ..!: ಟೀಮ್ ಇಂಡಿಯಾಗೆ ಮೇನ್ ಥ್ರೆಟ್​​​​​​​​​​​​​​​​​​ ಓಪನರ್ ಕ್ವಿಂಟನ್ ಡಿಕಾಕ್.. ಇಂಡಿಯನ್ ಕಂಡೀಷನ್ಸ್​ನಲ್ಲಿ ಅಕ್ಷರಶಃ ಬೊಬ್ಬೆರೆಯುತ್ತಿರುವ ಡಿಕಾಕ್, ಟೀಮ್ ಇಂಡಿಯಾ ಎದುರು ಸಹ ಸಾಲಿಡ್ ಓಪನಿಂಗ್ ನೀಡೋ ಲೆಕ್ಕಚಾರದಲ್ಲಿದ್ದಾರೆ. ಹೀಗಾಗಿ ಹಿಟ್​ಮ್ಯಾನ್ ಪರ್ಫೆಕ್ಟ್​ ವ್ಯೂಹದೊಂದಿಗೆ ಡಿಚ್ಚಿ ನೀಡಬೇಕು. ಇಲ್ಲ ಎಲ್ಲವೂ ತಲೆಕೆಳಗಾಗೋದ್ರಲ್ಲಿ ಡೌಟೇ ಇಲ್ಲ.!

ಸೈಲೆಂಟ್ ಕಿಲ್ಲರ್ಸ್​ಗೆ ​ ಬೀಸಬೇಕು ಬಲೆ..!: ಹೆನ್ರಿಚ್ ಕ್ಲಾಸೆನ್.. ಸೌತ್​ ಆಫ್ರಿಕಾದ ಪವರ್ ಹಿಟ್ಟರ್​ ಆ್ಯಂಡ್​ ಸೈಲೆಂಟ್ ಕಿಲ್ಲರ್​. ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್​ ಕಟ್ಟೋ ಈತ, ಕ್ರೀಸ್​ನಲ್ಲಿ ನೆಲೆಯೂರಿದಷ್ಟು ಅಪಾಯಕಾರಿ. ಹೀಗಾಗಿ ಈತನ ಬೇಟೆಗೆ ಸ್ಪಿನ್​ ಅಸ್ತ್ರವನ್ನೇ ರೋಹಿತ್ ಪ್ರಯೋಗಿಸಬೇಕಿದೆ. ಕ್ಲಾಸೆನ್ ಮಾತ್ರವೇ ಅಲ್ಲ, ಡೇವಿಡ್ ಮಿಲ್ಲರ್ ಕೂಡ ಡೆತ್​ ಓವರ್​ಗಳಲ್ಲಿ ಮೋಸ್ಟ್ ಡೇಂಜರಸ್ ಅನ್ನೋದನ್ನ ಹೇಳಬೇಕಿಲ್ಲ. ಹೀಗಾಗಿ ಆರಂಭದಲ್ಲೇ ವಿಕೆಟ್ ಬೇಟೆಯಾಡುವ ಮೂಲಕ ಒತ್ತಡ ಹೇರಬೇಕಿದೆ.

ಆಫ್ರಿಕನ್​ ಟ್ರಂಪ್​ ಕಾರ್ಡ್ ಯಾನ್ಸನ್​ ಮೇನ್ ಟಾರ್ಗೆಟ್ !: ಸೌತ್ ಆಫ್ರಿಕಾ ಸಕ್ಸಸ್​​ ಹಿಂದಿನ ಸೂತ್ರದಾರ ಮಾರ್ಕೋ ಯಾನ್ಸನ್. ಡೆತ್ ಓವರ್​ಗಳಲ್ಲಿ ಸ್ಫೋಟಕ ಇನ್ನಿಂಗ್ಸ್​ ಕಟ್ಟುವ ಈತ, ಬೌಲಿಂಗ್​ನಲ್ಲೂ ಪರಿಣಾಮಕಾರಿಯಾಗಿದ್ದಾನೆ. ಸದ್ಯ ವಿಶ್ವಕಪ್​ನಲ್ಲಿ 16 ವಿಕೆಟ್ ಉರುಳಿಸಿರುವ ಈತ, ಇಂಡಿಯನ್ ಕಂಡೀಷನ್ಸ್​ನಲ್ಲಿ, ಕಮಾಲ್ ಮಾಡ್ತಿದ್ದಾರೆ. ಹೀಗಾಗಿ ಮಾರ್ಕೋ ಮ್ಯಾಜಿಕ್ ನಡೆಯದಂತೆ ನೋಡಿಕೊಳ್ಳಬೇಕಿದೆ.

ಜಸ್​ಪ್ರೀತ್ ಬೂಮ್ರಾ: ಬೌಲಿಂಗ್​ನಲ್ಲಿ ಕಗಿಸೋ ರಬಡಾ ಜೊತೆ ಯಂಗ್ ಸೆನ್ಸೇಷನ್ ಜೆರಾಲ್ಡ್ ಕೊಟ್ಜಿಯನ್ನ ಸರಿಯಾಗಿ ಡೀಲ್ ಮಾಡಿದ್ರೆ, ಟೀಮ್ ಇಂಡಿಯಾ ನಾಗಲೋಟ ಮುಂದುವರಿಯೋದು ಕನ್ಫರ್ಮ್..

ಟೀಮ್ ಇಂಡಿಯಾನ ಸದೆಬಡೆಯೋದು ಸುಲಭವಲ್ಲ!: ಸೌತ್ ಆಫ್ರಿಕಾ ಎಷ್ಟೇ ಡೇಂಜರಸ್ ಆಗಿ ಕಾಣ್ತಿದ್ರೂ, ಟೀಮ್ ಇಂಡಿಯಾನ ಸದೆಬಡೆಯೋದು ಸುಲಭವಾಗಿಲ್ಲ. ಯಾಕಂದ್ರೆ, ಟೀಮ್ ಇಂಡಿಯಾ ಪರ ರೋಹಿತ್, ವಿರಾಟ್​ ಕೊಹ್ಲಿ ಅಗ್ರೇಸ್ಸಿವ್ ಅಪ್ರೋಚ್ ತೋರುತ್ತಿದ್ದಾರೆ. ಮತ್ತೊಂದೆಡೆ ವೇಗಿಗಳಾದ ಮೊಹಮ್ಮದ್ ಶಮಿ, ಜಸ್​ಪ್ರೀತ್ ಬೂಮ್ರಾ, ಸಿರಾಜ್​ ಎದುರಾಳಿಗಳ ಸದ್ದು ಅಡಗಿಸುತ್ತಿದ್ದಾರೆ. ಸ್ಪಿನ್ನರ್​ಗಳು ಕ್ರೂಶಿಯಲ್ ಟೈಮ್​ನಲ್ಲಿ ವಿಕೆಟ್ ಬೇಟೆಯಾಡ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಸುಲಭಕ್ಕೆ ಬಗ್ಗೋ ಮಾತೇ ಇಲ್ಲ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ