NEWSಕ್ರೀಡೆದೇಶ-ವಿದೇಶ

IND vs SA, World Cup 2023: ಜಡೇಜಾ ದಾಳಿಗೆ ತತ್ತರಿಸಿದ ಹರಿಣಗಳು- ಕೊಹ್ಲಿಗೆ ಗೆಲುವಿನ ಗಿಫ್ಟ್‌ ನೀಡಿದ ಭಾರತ

ವಿಜಯಪಥ ಸಮಗ್ರ ಸುದ್ದಿ

ಕೋಲ್ಕತ್ತಾ: ತಡೆಯಲಾಗದ ತಡೆಯಲಾಗದ್ದು, ಟೀಮ್ ಇಂಡಿಯಾ ಗೆಲುವಿಗಿಲ್ಲ ಅಡೆತಡೆ. ಇದು ದಕ್ಷಿಣ ಆಫ್ರಿಕಾ ಎದುರಿನ ಗೆಲುವು ನೋಡಿದ್ಮೇಲೆ ವಿಶ್ವ ಕ್ರಿಕೆಟ್​​ ಅಭಿಮಾನಿಗಳ ಮನದ ಮಾತು. ಹಾಗಾದ್ರೆ ಭಾರತದ ಕ್ರಿಕೆಟ್​ ಕಾಶಿಯಲ್ಲಿ ಆಫ್ರಿಕನ್ಸ್​ನ ಇಂಡಿಯನ್ ಟೈಗರ್ಸ್ ಬೇಟೆಯಾಡಿದ್ದೇಗೆ ಎಂಬುವುದೆ ಒಂದು ರೋಚಕ.

ಭಾರತ ಎದುರು ‘ಸೋತ‘ ಆಫ್ರಿಕಾ: ಭಾರತದ ಕ್ರಿಕೆಟ್​ ಕಾಶಿ ಈಡನ್ ಗಾರ್ಡನ್ಸ್​ನಲ್ಲಿ ಅಕ್ಷರಶಃ ನಡೆದಿದ್ದು, ಟೀಮ್ ಇಂಡಿಯಾದ ದಂಡಯಾತ್ರೆ. ಬ್ಯಾಟಿಂಗ್​, ಬೌಲಿಂಗ್​​​ನಲ್ಲಿ ಘರ್ಜಿಸಿದ ಇಂಡಿಯನ್​ ಟೈಗರ್ಸ್​, ಹರಿಣಗಳ ಚೆಂಡಾಡಿದ್ರು. ಬರೋಬ್ಬರಿ 243 ರನ್​ಗಳ ವಿಜಯದ ಪತಾಕೆ ಹಾರಿಸಿದ ಟೀಮ್ ಇಂಡಿಯಾ ಕಿಂಗ್ ಕೊಹ್ಲಿಗೆ ಗೆಲುವಿನ ಗಿಫ್ಟ್​ ನೀಡಿತು.

ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರೋಹಿತ್, ಹರಿಣಗಳ ಮೇಲೆ ಸವಾರಿ ನಡೆಸಿದ್ರು. 24 ಎಸೆತಗಳಲ್ಲೇ 6 ಬೌಂಡರಿ, 2 ಸಿಕ್ಸರ್​ ಒಳಗೊಂಡ 40 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಈ ಬೆನ್ನಲ್ಲೇ 23 ರನ್​​​ ಗಳಿಸಿದ್ದ ಶುಭ್​​ಮನ್, ಕೇಶವ್ ಮಹಾರಾಜನ ಅದ್ಭುತ ಎಸೆತಕ್ಕೆ ಕ್ಲೀನ್​ಬೌಲ್ಡ್​ ಆದರು.

4ನೇ ವಿಕೆಟ್​​ಗೆ ವಿರಾಟ್​​-ಶ್ರೇಯಸ್​​ 134 ರನ್​​​​ಗಳ ಜೊತೆಯಾಟ: 93 ರನ್​​​​​​​ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದೆ ವಿರಾಟ್​ ಕೊಹ್ಲಿ ಹಾಗೂ ಶ್ರೇಯಸ್​ ಅಯ್ಯರ್. 4ನೇ ವಿಕೆಟ್​​ಗೆ 134 ರನ್​ಗಳ ಜೊತೆಯಾಟವಾಡಿದ್ರು. ಅರ್ಧಶತಕ ಸಿಡಿಸಿ ರನ್​​ಗಳಿಕೆಗೆ ವೇಗ ನೀಡಿದ್ದ ಶ್ರೇಯಸ್ 77 ರನ್​​ಗಳಿಗೆ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ರಾಹುಲ್ ಬಂದಷ್ಟೇ ಬೇಗ ವಿಕೆಟ್ ಒಪ್ಪಿಸಿದ್ರೆ, ಸೂರ್ಯ ಆಟ 22 ರನ್​​ಗಳಿಗೆ ಅಂತ್ಯವಾಯ್ತು. ಏಕಾಂಗಿ ಹೋರಾಟ ನಡೆಸಿದ ವಿರಾಟ್​, ಅಜೇಯ 101 ರನ್​ಗಳೊಂದಿಗೆ ಏಕದಿನ ವೃತ್ತಿ ಜೀವನದ 49ನೇ ಶತಕ ದಾಖಲಿಸಿದರು. ಡೆತ್​ ಓವರ್​ನಲ್ಲಿ ಅಬ್ಬರಿಸಿದ ಜಡೇಜಾ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಒಳಗೊಂಡ 29 ರನ್ ಸಿಡಿಸಿದ್ರು. ಪರಿಣಾಮ ಟೀಮ್ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 326 ರನ್ ದಾಖಲಿಸಿತು.

ಭಾರತೀಯ ಬೌಲರ್​ಗಳ ದಾಳಿಗೆ ಆಫ್ರಿಕಾ ಅಟ್ಟರ್​ಫ್ಲಾಫ್: 327 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ದಕ್ಷಿಣ​ ಆಫ್ರಿಕಾ ಇಂಡಿಯನ್​ ಬೌಲರ್ಸ್​ ಎದುರು ಅಕ್ಷರಶಃ ಪರದಾಡಿದರು. ಆರಂಭದಲ್ಲೇ ಡೇಂಜರಸ್ ಡಿಕಾಕ್, ವಿಕೆಟ್ ಉರುಳಿಸಿದ ಸಿರಾಜ್ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿದ್ರೆ, ತೆಂಬಾ ಬವುಮಾಗೆ ಜಡ್ಡು ಮ್ಯಾಜಿಕಲ್ ಎಸೆತಕ್ಕೆ ದಂಗಾಗಿ ಪೆವಿಲಿಯನ್​ಗೆ ಹೆಜ್ಜೆಹಾಕಿದ್ರು.

ಈ ಬೆನ್ನಲ್ಲೇ ದಾಳಿಗಿಳಿದ ಮೊಹಮ್ಮದ್ ಶಮಿ, ವಾನ್‌ಡರ್ ಡುಸೆನ್ ಹಾಗೂ ಮಾರ್ಕಮ್​​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ, ಕ್ಲಾಸೆನ್​​ಗೆ ಎಲ್​​ಬಿಡ್ಲ್ಯೂ ಬಲೆಗೆ ಸಿಲುಕಿಸುವಲ್ಲಿ ಯಶಸ್ವಿಯಾದ್ರು. ಇದರೊಂದಿಗೆ 40 ರನ್​ಗಳಿಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡಿದ್ದ ದಕ್ಷಿಣ​ ಆಫ್ರಿಕಾ, ಸೋಲಿನತ್ತ ಹೆಜ್ಜೆಹಾಕಿತ್ತು.

ಈ ವೇಳೆ ಜಡ್ಡು ಸ್ಪಿನ್​ ಜಾಲಕ್ಕೆ ಸಿಲುಕಿದ ಮಿಲ್ಲರ್ 11 ರನ್​​​​​​​​​​​​​​​​​​​ಗೆ ಆಟ ಅಂತ್ಯಗೊಳಿಸಿದರು. ಕೇಶವ್ ಮಹಾರಾಜ್​​​​​​​​​​​​​​, ಕಗಿಸೋ ರಬಡ ಬಂದಷ್ಟೇ ವೇಗವಾಗಿ ಹಿಂತಿರುಗಿದ್ರು. ಮಾರ್ಕೋ ಯಾನ್ಸನ್, ಲುಂಗಿ ಎಂಗಿಡಿ ಕುಲ್​ದೀಪ್​​ಗೆ ವಿಕೆಟ್ ಒಪ್ಪಿಸುವುದರೊಂದಿಗೆ 83 ರನ್​ಗೆ ಸರ್ವಪತನ ಕಂಡ ದಕ್ಷಿಣ ಆಫ್ರಿಕಾ, 243 ರನ್​ಗಳ ಹೀನಾಯ ಸೋಲು ಕಾಣ್ತು. ಇದರೊಂದಿಗೆ ಟೀಮ್ ಇಂಡಿಯಾ, ವಿಶ್ವಕಪ್​ನಲ್ಲಿ ಸತತ 8ನೇ ಗೆಲುವು ದಾಖಲಿಸಿತು. ಈ ಮೂಲಕ ವಿರಾಟ್​ಗೆ ಬರ್ತ್​ ಡೇ ಗಿಫ್ಟ್​ ನೀಡಿತು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ