ಮೈಸೂರು: ಕೇಂದ್ರ ಸರ್ಕಾರದ ಅಣಕು ಶವ ಪ್ರತಿಭಟನೆ ನಡೆಸಿ ರೈತರನ್ನು ಕೂಲ್ಲುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ನಿಲ್ಲಲಿ ನಿಲ್ಲಲಿ ಪೊಲೀಸ್ ದೌರ್ಜನ್ಯ ನಿಲ್ಲಲಿ ಎಂದು ಘೋಷಣೆ ಕೂಗುತ್ತಾ ಗನ್ ಹೌಸ್ ನಿಂದ ಮೆರವಣಿಗೆ ಪ್ರತಿಭಟನೆ ನಡೆಸಲಾಯಿತು ಪೊಲೀಸರು ಅಣಕು ಶವ ಕಿತ್ತುಕೊಳ್ಳಲು ಹೊರಟಾಗ ರೈತರು ಅದಕ್ಕೆ ಅವಕಾಶ ನೀಡದೇ ರೈತ ದ್ರೋಹಿ ಕೇಂದ್ರ ಸರ್ಕಾರಕ್ಕೆ ಚುನಾವಣೆಯಲ್ಲಿ ಮರಣ ಶಾಸನ ಬರೆFarmersಯುತ್ತೇವೆ, ಎಂಪಿಗಳಿಗೆ ಹಳ್ಳಿಗಳ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಚ್ಚರಿಕೆ ನೀಡಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಕುರುಬೂರ್ ಶಾಂತಕುಮಾರ್, ದೆಹಲಿಯಲ್ಲಿ ರೈತರು ಭಿಕ್ಷೆ ಬೇಡುತ್ತಿಲ್ಲ, ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ 23 ಬೆಳೆಗಳಿಗೆ ಎಂಎಸ್ಪಿ ಬೆಲೆ ನಿಗದಿ ಮಾಡಿ ದೇಶದ ರೈತರನ್ನು ಕತ್ತಲಲ್ಲಿಟ್ಟಿದೆ. ಇನ್ನು ಈ ಸರ್ಕಾರವೇ ನಿಗದಿ ಮಾಡುವ ಬೆಲೆಗೆ ಶಾಸನಬದ್ಧ ಖಾತರಿ ನೀಡಬೇಕು ಎಂದು ಹೋರಾಟ ಮಾಡಿದರೆ, ನಮ್ಮ ರೈತರನ್ನು ಭಯೋತ್ಪಾದಕರು ದೇಶದ್ರೋಹಿಗಳು ಖಲಿಸ್ತಾನಿಗಳು ಎಂದು ಹೇಳಿ ದೆಹಲಿಗೆ ಚಳವಳಿಗೆ ಹೊರಟ ರೈತ ಹೋರಾಟಗಾರರ ಮೇಲೆ ರಬ್ಬರ್ ಬುಲೆಟ್ಗಳ ಬಾಂಬು ಹಾಕುವುದು, ಆಶ್ರುವಾಯು ಸಿಡಿಸುವುದು, ದಮನಕಾರಿ ನೀತಿಯಲ್ಲವೇ ಎಂದು ಕಿಡಿಕಾರಿದರು.
ಇನ್ನು ರೈತರು ಸರ್ಕಾರದ ಭಿಕ್ಷುಕರೇ ಅಥವಾ ದೇಶದ ಜನರಿಗೆ ಆಹಾರ ನೀಡುವ ಅನ್ನದಾತರೇ ಎಂಬುದನ್ನು ತಿಳಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತು ಕೊಳ್ಳಬೇಕು ಇಲ್ಲದಿದ್ದರೆ ಮುಂದೆ ನೇಏಗಿಲಯೋಗಿಗಳು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇತ್ತ ರೈತರ ಸಾಲ ಸಂಪೂರ್ಣ ಮನ್ನಾ, ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನೀಡಬೇಕು. ಜತೆಗೆ ಡಬ್ಲ್ಯೂಟಿಒ ಒಪ್ಪಂದದಿಂದ ಭಾರತ ಸರ್ಕಾರ ಹೊರಗೆ ಬರಬೇಕು, ರೈತರಿಗೆ ಪಿಂಚಣಿ ನೀಡುವ ಯೋಜನೆ, ಫಸಲ್ ಭೀಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು. ಕಳೆದ ವರ್ಷ ದೆಹಲಿ ರೈತ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ಮತ್ತು ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂಬ ಒತ್ತಾಯಗಳನ್ನು ಮಂಡಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ನೀತಿ ಅನುಸರಿಸಿ ಚೌಕಾಸಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಕಬ್ಬಿನ ಎಫ್ಆರ್ಪಿ ದರ ನಿಗದಿ ಮಾಡುವ ನೀತಿಯನ್ನು ಕೈ ಬಿಡಬೇಕು ಎಂದು ಅಮೇರಿಕ ಹಾಗೂ ಇನ್ನೂ ಕೆಲವು ರಾಷ್ಟ್ರಗಳು ಡಬ್ಲ್ಯೂಟಿಒನಲ್ಲಿ ಕೇಸ್ ದಾಖಲಿಸಿ ಒತ್ತಾಯ ಮಾಡುತ್ತಿವೆ. ಅದಕ್ಕಾಗಿ ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯ ಸಭೆ ಫೆ.26 ರಿಂದ 29ರ ತನಕ ಅಬುದಾಬಿಯಲ್ಲಿ ನಡೆಯುತ್ತಿದೆ.
ಡಬ್ಲ್ಯೂಟಿಒ ಒಪ್ಪಂದದಿಂದ ಆಗಿರುವ ಭಾರತ ದೇಶದ ರೈತರ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯಿಂದ ನಾನು (ಕುರುಬೂರ್ ಶಾಂತಕುಮಾರ್) ಸೇರಿದಂತೆ ಮೂರು ಜನ ರೈತ ಮುಖಂಡರಿಗೆ ಈ ಸಭೆಯಲ್ಲಿ ಭಾಗವಹಿಸಲು ಆಮಂತ್ರಣ ಬಂದಿದೆ ನಾವು ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ರೈತ ಮುಖಂಡರು ರಾಜಕೀಯ ಪಕ್ಷಗಳ ಅಡಿಯಾಳುಗಳಾಗಿ ಕಾರ್ಯನಿರ್ವಹಿಸುವ ಬದಲು ರೈತರ ಸಂಕಷ್ಟ ನಿವಾರಣೆಯ ಸಮಯ ಬಂದಿದೆ. ಈಗಲಾದರೂ ರೈತರ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಹೋರಾಟಕ್ಕೆ ಬೀದಿಗೆ ಬನ್ನಿ ಎಂದು ಸಂಘಟನೆಗಳಿಗೆ ಕರೆ ನೀಡಿದರು.
ಇನ್ನು ರಾಜಕೀಯ ಪಕ್ಷದ ಹಲವು ಕಾರ್ಯಕರ್ತರು ನಾವು ರೈತರ ಮಕ್ಕಳು ರೈತರ ಅನ್ನ ತಿನ್ನುತ್ತೇವೆ ನಮ್ಮ ಬಾಯಿಗೆ ನಾವೇ ಮಣ್ಣು ಹಾಕಿಕೊಳ್ಳಬಾರದು ಎಂಬುದನ್ನು ಅರಿತುಕೊಳ್ಳದೆ, ದೆಹಲಿಯ ರೈತ ಹೋರಾಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಗುರವಾಗಿ ಚಳವಳಿಯನ್ನು ಟೀಕಿಸಿ ಮಾತನಾಡಿಸುವುದನ್ನು ನಿಲ್ಲಿಸಿ. ರೈತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಆಗ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಕುಟುಕಿದರು.
ಕೇಂದ್ರ ಸರ್ಕಾರದ ಜೊತೆ ಈಗ ನಾಲ್ಕನೇ ಸುತ್ತಿನ ಮಾತುಕತೆ ನಡೆದಿದೆ. ಆದರೆ, ಮಾತುಕತೆ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ಸಮಸ್ಯೆ ಬಗೆರಿಸಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್ ರಾಜಸ್ಥಾನ್ನಿಂದ ಲಕ್ಷಾಂತರ ರೈತರು ಇಂದು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ ಸಮಸ್ಯೆ ಬಗೆಹರಿಯುವ ತನಕ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ದೆಹಲಿ ಹೋರಾಟದ ಜತೆ ಸಾಗಲು ನಾಳೆ 23ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿನೂತನ ಪ್ರತಿಭಟನೆ ಒತ್ತಾಯ ಪತ್ರ ಸಲ್ಲಿಸಲಾಗುವುದು. ಫೆ. 26 ರಂದು ಲೋಕಸಭಾ ಸದಸ್ಯರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು. ಮಾರ್ಚ್ 1ರಂದು ರಾಜ್ಯದ್ಯಂತ ರೈಲು ತಡೆ ಚಳುವಳಿ ನಡೆಸಲಾಗುವುದು ರೈತ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ತೀರ್ಮಾನಿಸಿ ಏಕಕಾಲದಲ್ಲಿ ರಾಜ್ಯಾದ್ಯಂತ ರೈತರ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರುಶಂಕರ, ವೆಂಕಟೇಶ್, ನೀಲಕಂಠಪ್ಪ, ಕುರುಬೂರು ಸಿದ್ದೇಶ್, ದೇವನೂರು ವಿಜೇಂದ್ರ , ನಂಜದೇವನಪುರ ಸತೀಶ್, ಹೆಗ್ಗೂರು ರಂಗರಾಜ್, ಕುರುಬೂರು ಪ್ರದೀಪ್, ಉಡಿಗಾಲ ಸುಂದರಪ್ಪ, ಕಾಟೂರು ಮಾದೇವಸ್ವಾಮಿ, ನಾಗೇಶ್, ಶ್ರೀಕಂಠ, ಪ್ರಸಾದ್ ನಾಯಕ್ ನಿಂಗರಾಜು, ಮಂಜುನಾಥ್, ಅಪ್ಪಣ್ಣ, ಕೋಟೆ ಸುನೀಲ್, ಬನ್ನೂರು ಸೂರಿ ಮತ್ತಿತರರು ಇದ್ದರು.