NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಉದಾಸೀನ ನಡೆಗೆ ನೌಕರನಿಗೆ ಬಿತ್ತು 5 ಸಾವಿರ ರೂ. ದಂಡ – ಇದು ಇತರ ಸಿಬ್ಬಂದಿಗಳಿಗೂ ಎಚ್ಚರಿಕೆ ಗಂಟೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕ ತೋರಿದ ಉದಾಸೀನ ನಡೆಗೆ ಆತ 5 ಸಾವಿರ ರೂಪಾಯಿ ದಂಡ ಕಟ್ಟುವಂತಾಗಿದ್ದು, ಇದು ಸಾರಿಗೆಯ ನಾಲ್ಕೂ ನಿಗಮಗಳ ಚಾಲನಾ ಸಿಬ್ಬಂದಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಹೌದು! ನಿಗದಿತ ಮಾರ್ಗ ಬದಲಿಸಿದ ಕಾರಣ ಚಾಲಕ ಕಂ ನಿರ್ವಾಹಕನೊಬ್ಬ 5 ಸಾವಿರ ರೂ. ದಂಡಕ್ಕೆ ಗುರಿಯಾಗಿದ್ದಾನೆ. ಘಟಕದಿಂದ ಯಾವ ಮಾರ್ಗಚರಣೆ ಮಾಡಬೇಕು ಎಂದಿದೆಯೋ ಅದನ್ನಷ್ಟೇ ಮಾಡಿದ್ದರೆ ಈ ರೀತಿ ದಂಡ ಕಟ್ಟುವ ಜತೆಗೆ ಮೆಮೋ ಪಡೆದು ಮಾನಸಿಕವಾಗಿ ಯಾತನೆ ಅನುಭವಿಸಬೇಕಿರಲಿಲ್ಲ.

ಇನ್ನು ಆ ಮಾರ್ಗದಲ್ಲಿ ಹೋಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಒಂದು ವೇಳೆ ಮಾರ್ಗ ಬದಲಾಯಿಸಿದ್ದರೆ ಅದಕ್ಕೆ ಸಕಾರಣ ಇರಬೇಕು. ಅದನ್ನು ನಮೂದಿಸುವುದು ಸಿಬ್ಬಂದಿಯ ಕರ್ತವ್ಯಕೂವಾಗಿರುತ್ತದೆ. ಅದನ್ನು ಬಿಟ್ಟು ನಮಗಿಷ್ಟಬಂದರೀತಿ ಹುಚ್ಚಾಟ ಮಾಡಿದರೆ ಸಾರ್ವಜನಿಕರ ಕೋಪಕ್ಕೂ ಗುರಿಯಾಗುವ ಜತೆಗೆ ಸಂಸ್ಥೆಯ ವಿಚಾರಣೆ ಕೂಡ ಎದುರಿಸಬೇಕು. ಇದು ನಿಮಗೆ ಬೇಕಾ?

ಏನಿದು ಪ್ರಕರಣ?: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉತ್ತರ ವಲಯದ ಘಟಕ 50ರಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸನ್ನ ಕುಮಾರ್‌ ಎಂಬುವರೇ 5 ಸಾವಿರ ರೂಪಾಯಿ ದಂಡದ ಶಿಕ್ಷೆಗೆ ಒಳಗಾದವರು.

ಕಳೆದ 2023ರ ಡಿಸೆಂಬರ್‌ 22ರಂದು 298M/9ರ ರೂಟ್‌ನಲ್ಲಿ ನಮೂನೆ-4 ರ ಪ್ರಕಾರ ಬಸ್‌ ಸೆಂಟ್ರಲ್ ಕಡೆಯಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ (ಕೆಬಿಎಸ್‌) ಮಾರ್ಗಚರಣೆ ಮಾಡಬೇಕಿತ್ತು. ಆದರೆ ಇದರ ಬದಲು ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಒಳಗಡೆಯಿಂದ ಮಾರ್ಗ ಬದಲಾಯಿಸಿ ಮಾರ್ಗಚರಣೆ ಮಾಡಿದ್ದಾರೆ.

ಇದು ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಹತ್ತುವ ಹಾಗೂ ಇಳಿಯುವ ಪ್ರಯಾಣಿಕರಿದ್ದರೂ ಸಹ ಸೆಂಟ್ರಲ್ ಬಸ್ ನಿಲ್ದಾಣಕ್ಕೆ ಹೋಗದೆ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್‌ನಿಂದ ನೇರವಾಗಿ ಕೆಬಿಎಸ್‌ಗೆ ಮಾರ್ಗಚರಣೆ ಮಾಡಿದ್ದು, ಈ ಬಗ್ಗೆ ತನಿಖಾ ಸಿಬ್ಬಂದಿ ಮೆಮೋ ನೀಡಿದ್ದು, ಜತೆಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಾರಣ ಕೇಳಿ ಆರೋಪಣ ಪತ್ರವನ್ನು ನೀಡಿದ್ದರು.

ಆದರೆ, ಚಾಲಕ ಕಂ ನಿರ್ವಾಹಕ ಪ್ರಸನ್ನ ಕುಮಾರ್‌ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಯಾವುದೇ ಲಿಖಿತ ಸಮಜಾಯಿಸಿ ನೀಡಿಲ್ಲ. ಇದರಿಂದ ಚಾಲಕ ಕಂ ನಿರ್ವಾಹಕ ತನ್ನ ಮೇಲೆ ಹೊರಿಸಿರುವ ಆರೋಪವನ್ನು ಒಪ್ಪಿಕೊಂಡಂತಾಗಿದ್ದು, ಈ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿಕ್ಷೆ ರೂಪದಲ್ಲಿ 5 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ.

ಈ ದಂಡದ ಹಣವನ್ನು ಪ್ರಸನ್ನ ಅವರ ವೇತನದಿಂದ 10 ಸಮ ಕಂತುಗಳಲ್ಲಿ ಕಡಿತ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದು, ಈ ಬಗ್ಗೆ 50ನೇ ಘಟಕ ವ್ಯವಸ್ಥಾಪಕರ ಮೂಲಕ ಸದರಿ ಸಿಬ್ಬಂದಿಗೆ ಆದೇಶವನ್ನು ಜಾರಿಗೊಳಿಸಿ ಹಿಂದುರುಗಿಸಲು, ಸಿಬ್ಬಂದಿ ಹಾಗೂ ವೇತನ ಶಾಖೆಗಳ ಸೂಕ್ತಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ