ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರ ಶಾಂತಿಯುತ ಹೋರಾಟವನ್ನು ಪೊಲೀಸ್ ಬಲದಿಂದ ಹತ್ತಿಕ್ಕುವ ಯತ್ನವಾಗಿ ಇಂದು (ಮಾ.5) ಬೆಳಗ್ಗೆ ನಡೆದ ನಾಟಕೀಯ ಬೆಳವಣಿಗೆಯ ನಡುವೆಯೂ ಮತ್ತೆ ನೌಕರರು ಅಹೋರಾತ್ರಿ ಧರಣಿ ಮುಂದುರಿಸಿದ್ದಾರೆ.
ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರದಿಂದ (ಮಾ.4) ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳನ್ನು ಇಂದು ಬೆಳಗ್ಗೆ ಏಕಾಏಕಿ ಪೊಲೀಸರು ಬಂಧಿಸಿ ಹೈಗ್ರೌಂಡ್ ಪೊಲೀಸ್ ಠಾಣೆ ಆವರಣಕ್ಕೆ ಕರೆದುಕೊಂಡು ಹೋಗಿದ್ದರು.
ಈ ವೇಳೆ ಧರಣಿ ಸ್ಥಳದಲ್ಲಿ ಹಾಕಿದ್ದ ಟೆಂಟ್‌ಅನ್ನು ಪೊಲೀಸರೆ ತೆರೆವು ಮಾಡಿದ್ದರು. ಏನೆ ಆದರೂ ನಾವು ಧರಣಿ ನಿಲ್ಲಿಸುವುದಿಲ್ಲ ಇದು ನೌಕರರ ಬೇಡಿಕೆ ಈಡೇರೀಕೆಗಾಗಿ ಮಾಡುತ್ತಿರುವ ಶಾಂತಿಯುತ ಹೋರಾಟ ಎಂದು ಹಠಹಿಡಿದ ಹಿನ್ನೆಲೆಯಲ್ಲಿ ಬೆಳಗ್ಗೆ ಬಂಧಿಸಿದ್ದ ಸಾರಿಗೆ ನೌಕರರ ಮುಖಂಡರನ್ನು ಸಾಯಂಕಾಲ ಪೊಲೀಸರು ಬಿಡುಗಡೆ ಮಾಡಿದ್ದು, ಹೋರಾಟ ಮುಂದುವರಿದಿದೆ.
ಈ ನಡುವೆ ಸರ್ಕಾರ ಕೂಡ ಮಾ.7ರಂದು ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಸಭೆಯನ್ನು ಕರೆದಿದ್ದು, ನೌಕರರ ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಳೆ (ಮಾ.6) ಸಮಾನ ಮನಸ್ಕರ ವೇದಿಕೆ ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಮಾ.7ರಂದು ಕರೆದಿರುವ ಸಭೆಯಲ್ಲಿ ನೌಕರರ ಪರವಾದ ನಿಲುವನ್ನು ಸರ್ಕಾರ ಮತ್ತ ಸಾರಿಗೆ ನಿಗಮಗಳ ಆಡಳಿತ ಮಂಡಳಿ ತೆಗೆದುಕೊಳ್ಳದೆ ಹೋದರೆ ಮತ್ತೆ ತಾತ್ಕಾಲಿಕವಾಗಿ ಕೈ ಬಿಡುವ ಹೋರಾಟವನ್ನು ಮುಂದುವರಿಸುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿ ಮಾರ್ಚ್ 7ರಂದು ಕರತೆದಿರುವ ಸಭೆಯಲ್ಲಿ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತದೋ ಎಂಬುದರ ಬಗ್ಗೆ ಸಮಸ್ತ 1.25 ಲಕ್ಷ ಸಾರಿಗೆ ಸಿಬ್ಬಂದಿಗಳ ಕಣ್ಣು ನೆಟ್ಟಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಇಂದು ನಡೆದ ನಾಟಕೀಯ ಬೆಳವಣಿಗಳ ನಡುವೆಯೂ ಮತ್ತೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನೌಕರರಲ್ಲಿ ಒಂದು ರೀತಿಯ ಅಚ್ಚರಿ ಮತ್ತು ಆತಂಕ ಎರಡು ಒಟ್ಟೊಟ್ಟಿಗೆ ಆಗುತ್ತಿರುವುದು ಸುಳ್ಳಲ್ಲ.