CrimeNEWSನಮ್ಮಜಿಲ್ಲೆ

BMTC: ಡಿಪೋ 21ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಚಾಲಕನ ಕುಟುಂಬ ಪರ ನಿಂತ ನೌಕರರ ವಿರುದ್ಧದ ಪ್ರಕರಣ- 8 ಮಂದಿಗೆ ಜಾಮೀನು ಮಂಜೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬಿಎಂಟಿಸಿ ಚಾಲಕನ ಕುಟುಂಬ ಪರನಿಂತ ಸಂಸ್ಥೆಯ ನೌಕರರು ಮತ್ತು ಎಎಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಪೊಲೀಸ್‌ ಪ್ರಕರಣ ಸಂಬಂಧ ಇಂದು 8 ಮಂದಿಗೆ 46ನೇ ಎಸಿಎಂಎಂ ನ್ಯಾಯಾಲಯ ಕೆಲ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ.

ಮಂಗಳವಾರ ಎಸಿಎಂಎಂ 46ನೇ ಕೋರ್ಟ್‌ ಹಾಲ್‌ನಲ್ಲಿ ಪ್ರಕರಣ ಸಂಬಂಧ ಆರೋಪಿತರ ಪರ ಸುಪ್ರೀಂ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ. ಶಿವರಾಜು ಅವರು ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು 8 ಮಂದಿಗೆ ಮಧ್ಯಾಹ್ನ ಜಾಮೀನು ಮಂಜೂರು ಮಾಡಿ ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಿದರು.

ಸಂಸ್ಥೆಯ ನೌಕರರಾದ ಎಚ್‌.ಡಿ.ನಾಗೇಂದ್ರ, ಎಚ್‌.ಆರ್‌.ಜಗದೀಶ್‌, ಪಿ.ಹರೀಶ್‌ಗೌಡ, ಎನ್‌.ಸುಧಾಕರರೆಡ್ಡಿ, ಲಕ್ಷ್ಮಣ ಮಗವೀರ್‌ ಸೇರಿದಂತೆ 8 ಮಂದಿಗೆ ಕೋರ್ಟ್‌ ಜಾಮೀನು ನೀಡಿದ್ದು,  ಹೈ ಕೋರ್ಟ್‌ನಲ್ಲಿ ಈ ಪ್ರಕರಣ ರದ್ದು ಕೋರಿ  ಅರ್ಜಿ ಹಾಕಲಾಗುವುದು ಎಂದು ವಕೀಲ ಶಿವರಾಜು ತಿಳಿಸಿದ್ದಾರೆ.

ನೌಕರರಿಂದ ಯಾವುದೆ ಫೀ ಪಡೆಯದೆ ಉಚಿತವಾಗಿ ವಕಾಲತ್ತು ವಹಿಸಿ ಇಂದು ಜಾಮೀನು ಮಂಜೂರು ಮಾಡಿಸಿಕೊಟ್ಟಿದ್ದು ವಕೀಲರಿಗೆ ನಾವು ಸದಾ ಅಭಾರಿಯಾಗಿದ್ದೇವೆ ಎಂದು ಸಂಸ್ಥೆ ಮಾಜಿ ನೌಕರ ಎಚ್‌.ಆರ್‌.ಜಗದೀಶ್‌ ತಿಳಿಸಿದ್ದಾರೆ.

ಚನ್ನಸಂದ್ರ ಬಿಎಂಟಿಸಿ ಡಿಪೋ ಬಳಿ ಮುಂಜಾನೆಯಿಂದ ನೌಕರರ ಧರಣಿ, ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲು ಆಗ್ರಹ

ಪ್ರಕರಣವೇನು?: ಬಿಎಂಟಿಸಿ ಘಟಕ -21ರಲ್ಲಿ ಮೇಲಧಿಕಾರಿಗಳ ಕಿರುಕುಳದಿಂದ ನೊಂದು ಚಾಲಕ ಹೊಳೆ ಬಸಪ್ಪ ಎಂಬುವರು 30 ಅಗಸ್ಟ್‌ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಾಲಕನ ಆತ್ಮಹತ್ಯೆಗೆ ಕಾರಣವಾದ ಅಧಿಕಾರಿಗಳನ್ನು ವಜಾ ಮಾಡಬೇಕು ಹಾಗೂ ಮೃತರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಅಂದು ಹೋರಾಟ ಮಾಡಲಾಗಿತ್ತು.

ಚಾಲಕ ಹೊಳೆ ಬಸಪ್ಪ ಘಟಕದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಎಪಿ ಮುಖಂಡರು ಸೇರಿದಂತೆ ಅಂದು ರಾತ್ರಿ ವರೆಗೂ ಹೋರಾಟ ಮಾಡಿದ 19 ಮಂದಿ ವಿರುದ್ಧ ಬಿಎಂಟಿಸಿ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದರು.

ಸಚಿವರು ಸ್ಥಳಕ್ಕೆ ಬರಲೇ ಬೇಕು- ಬಿಎಂಟಿಸಿ ಡಿಪೋದಲ್ಲಿ ಶವವಿಟ್ಟುಕೊಂಡು ಅಹೋರಾತ್ರಿ ಧರಣಿ : ಘೋಷಣೆ ಮಾಡಿದ ಎಎಪಿ

ನ್ಯಾಯ ಕೇಳಲು ಬಂದಿದ್ದ ನೌಕರರು ಮತ್ತು ಎಎಪಿ ಮುಖಂಡರ ವಿರುದ್ಧವೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಅಂದು ಸಂಸ್ಥೆಯ ಅಧಿಕಾರಿಗಳು ತಪ್ಪು ಮಾಡಿದವರನ್ನು ಬಿಟ್ಟು ಅಮಾಯಕರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಿದ್ದರಿಂದ ಇಂದುಯಾವುದೇ ತಪ್ಪು ಮಾಡದವರನ್ನು ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ಇಂದು ಎಸಿಎಂಎಂ 46ನೇ ಕೋರ್ಟ್‌ ಹಾಲ್‌ನಲ್ಲಿ ಪ್ರಕರಣದ ವಿಚಾರಣೆ ನಡೆದು 8 ಮಂದಿಗೆ ಜಾಮೀನು ಸಿಕ್ಕಿದೆ. ಇನ್ನು ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ