NEWSದೇಶ-ವಿದೇಶನಮ್ಮಜಿಲ್ಲೆ

KSRTC ಸಮಾನ ಮನಸ್ಕರ ಹೋರಾಟಕ್ಕೆ ಬೆಚ್ಚಿಬಿದ್ದ ಸರ್ಕಾರ – ದೌರ್ಜನ್ಯದ ಲಜ್ಜೆಗೆಟ್ಟ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಸೋಮವಾರದಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸರ್ಕಾರ ಬೆಚ್ಚಿಬಿದ್ದಿದ್ದು, ಈ ಶಾಂತಿಯುವಾಗಿ ಹೋರಾಟದಿಂದ ನಾವು ನೌಕರರ ಬೇಡಿಕೆ ಈಡೇರಿಸಬಾಕಾಗುತ್ತದೆ ಎಂದು ಭಯಗೊಂಡು ಪೊಲೀಸ್‌ ಬಲದಿಂದ ಧರಣಿ ನಿರತರನ್ನು ಎಬ್ಬಿಸುವ ಕೆಲಸ ಮಾಡಿದೆ.

ಇಂಥ ಲಜ್ಜೆಗೆಟ್ಟ ಸರ್ಕಾರಕ್ಕೆ ಕೆಲ ಹಿಂಬಾಲಕರು ಹೇಳುವ ಮಾತೆ ಮುಖ್ಯ ಎಂಬಂತಾಗಿದ್ದು, ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವ ನೌಕರರನ್ನು ಎಬ್ಬಿಸಿ, ತಾನು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬ ಹೀನಾಯ ಸ್ಥಿತಿಗೆ ಈ ರಾಜ್ಯ ಸರ್ಕಾರ ಬಂದಿತೆ ಎಂಬ ಅನುಮಾನ ಮೂಡುತ್ತಿದೆ.

ಸಾರಿಗೆ ನೌಕರರಿಗೆ ಚುನಾವಣೆ ಸಮಯದಲ್ಲಿ ಅದೂ ಕೂಡ ಪ್ರಣಾಳಿಕೆಯಲ್ಲೇ ತಾವೆ ಕೊಟ್ಟ ಭರವಸೆಯನ್ನು ಈಡೇರಿಸಲಾದ ಕಾಂಗ್ರೆಸ್‌ ಅಧಿಕಾರಿಕ್ಕೆ ಬಂದಮೇಲೆ ಸಾರಿಗೆ ನೌಕರರ ಹೋರಾಟಕ್ಕೆ ಬೆಚ್ಚಿಬಿದ್ದು ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಧರಣಿಯನ್ನು ಅದೂ ಕೂಡ ಯಾವುದೇ ತೊಂದರೆ ಕೊಡದೆ ಶಾಂತಿಯುತವಾಗಿ ಮಾಡುತ್ತಿರುವ ಧರಣಿಯನ್ನು ಹತ್ತಿಕ್ಕುತ್ತಿರುವುದು ನೋಡಿದರೆ ಈ ನೌಕರರು ಸರ್ಕಾರಕ್ಕೆ ಹುಲಿ ಸಿಂಹಕ್ಕಿಂತಲೂ ಭಯನಕವಾಗಿ ಕಾಣಿಸುತ್ತಿದ್ದಾರೆ ಎಂಬಂತಾಯಿತು.

ಸಾರಿಗೆ ನೌಕರರು ಒಗ್ಗಟ್ಟಿನಿಂದ ಇದ್ದಿದ್ದರೆ ಇಂಥ ಸರ್ಕಾರಕ್ಕೆ ಬೆವರಿಳಿಸಬಹುದು. ಆದರೆ, ಕೆಲ ಕುತಂತ್ರಿಗಳ ಮಾತಿಗೆ ಬಲಿಯಾಗಿ ನೌಕರರು ಒಗ್ಗಟ್ಟನ್ನು ಮುರಿದುಕೊಂಡು ತಮ್ಮ ಪರವಾಗಿ ನಿಲ್ಲುತ್ತಿರುವವರು ಯಾರು ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಜತೆ ಬೆಲ್ಲದ ಮಾತನಾಡುತ್ತಿರುವವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ಮುಗ್ದರಾಗಿಬಿಟ್ಟಿದ್ದಾರೆ.

ನೌಕರರ ಈ ಮುಗ್ದತೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲ ಸಂಘಟನೆಗಳು ನಾಮ್‌ ಕೇ ವಾಸ್ತೆ ಎಂಬಂತೆ ಧರಣಿ ಮಾಡಿ ಸಂಜೆಯೊಳಗೆ ಟೆಂಟ್‌ ಎತ್ತಿಕೊಂಡು ಹೋಗುತ್ತವೆ. ಆದರೆ, ನೌಕರರಿಗೆ ಒಳ್ಳೆಯದಾಗಲೇಬೇಕು ಎಂದು ಹಠ ಮಾಡಿ ಕುಳಿತುಕೊಳ್ಳುವ ಸಂಘಟನೆಗಳ ಮುಖಂಡರನ್ನು ಸರ್ಕಾರವೇ ಪೊಲೀಸ್‌ ಬಲ ಪ್ರಯೋಗ ಮಾಡಿ ಎಬ್ಬಿಸುತ್ತದೆ.

ಇದೇ ನೋಡಿ ಸಂಘಟನೆ- ಸಂಘಟನಗೆಳ ನಡುವೆ ಇರುವ ವ್ಯತ್ಯಾಸ. ಈ ಬಗ್ಗೆ ಇನ್ನಾದರೂ ಅರಿತುಕೊಂಡು ನೌಕರರು ಯಾರು ನಮ್ಮ ಪರ ಧ್ವನಿಯಾಗುತ್ತಿದ್ದಾರೆ ಎಂಬುದನ್ನು ತಿಳಿದು ಅಂಥವರಿಗೆ ಮುಂದಿನ ದಿನಗಳಲ್ಲಿ ಬೆಂಬಲವಾಗಿ ನಿಲ್ಲಬೇಕು. ಆ ಮೂಲಕ ಇಂಥ ಹೋರಾಟಗಳನ್ನು ಹತ್ತಿಕ್ಕುವವರ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡಬೇಕು.

ಇನ್ನು ಇತರ ನಿಗಮಗಳ ನೌಕರರಂತೆ ನೆಮ್ಮದಿಯಿಂದ ಕರ್ತವ್ಯ ನಿರ್ವಸುವುದಕ್ಕೆ ಅನುಕೂಲ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ನೋಡಿ ನಾವು ಶಾಂತಿಯುತವಾಗಿ ಹೋರಾಟಮಾಡುತ್ತಿದ್ದೇವೆ. ಬರುತ್ತಿರುವ ನೌಕರರು ಸಂಖ್ಯೆ ಹೆಚ್ಚಾಯಿತು ಎಂದರೆ ಅದನ್ನು ನಾವು ಕಡಿಮೆ ಮಾಡಿಕೊಳ್ಳುತ್ತೇವೆ ನಮ್ಮನ್ನು ಹೋರಾಟ ಮಾಡಲು ಬಿಡಿ ಎಂದು ಹೋರಾಟಗಾರರು ಮನವಿ ಮಾಡಿದರೂ ಕೂಡ ಆರಕ್ಷಕರು ಅವರನ್ನು ಬಿಡಲಿಲ್ಲ.

ಇಲ್ಲಿ ಆರಕ್ಷಕರದೇನು ತಪ್ಪಿಲ್ಲ. ಅವರು ಈ ಹೋರಾಟಗಾರರನ್ನು ಬಂಧಿಸದಿದ್ದರೆ ಅವರ ಕೆಲಸಕ್ಕೆ ಕುತ್ತು ತರುವಂತ ರೀತಿಯಲ್ಲಿ ಈ ಸರ್ಕಾರ ನಡೆದುಕೊಳ್ಳುತ್ತದೇನೋ ಗೊತ್ತಿಲ್ಲ? ಆದರೆ, ಆ ಭಯದಿಂದಲೇ ವಿಧಿ ಇಲ್ಲದೆ ಶಾಂತಿಯುತ ಹೋರಾಟ ಮಾಡುತ್ತಿರುವ ನೌಕರರನ್ನು ಎಬ್ಬಿಸುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಹೇಯ ಕೆಲಸ ಈ ರೀತಿ ಮಾಡುವುದಕ್ಕೆ ಪೊಲೀಸರಿಗೂ ಶೋಭೆ ತರುವಂತದ್ದಲ್ಲ.

ಗಲಾಟೆ ಮಾಡುತ್ತಿದ್ದರೆ ಮಾತ್ರ ಪೊಲೀಸರು ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ, ಶಾಂತಿಯುತವಾಗಿ ಹೋರಾಟ ಮಾಡುತ್ತಿರುವವರನ್ನು ಎಬ್ಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾನೂನು ತಜ್ಞರೆ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಇಲ್ಲ ಪೊಲೀಸ್‌ ಉನ್ನತ ಅಧಿಕಾರಿಗಳೇ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಈ ಬಗ್ಗೆ ಸಮಾನ ಮನಸ್ಕರ ವೇದಿಕೆ ಕೋರ್ಟ್‌ ಮೊರೆ ಹೋದರೆ ಸರ್ಕಾರಕ್ಕೆ ಮತ್ತು ಪೊಲೀಸರ ನಡೆಗೆ ಕೋರ್ಟ್‌ ಛೀಮಾರಿ ಹಾಕುವುದರಲ್ಲಿ ಸಂಶಯವೇ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆ ಒಗ್ಗಟ್ಟಿಲ್ಲದಿದ್ದರೆ ಈ ರೀತಿಯ ದೌರ್ಜನ್ಯಕ್ಕೆ ಬಲಿಯಾಗುವುದು ನಿರಂತರವಾಗಲಿದೆ. ಯೋಚಿಸಿ ನೌಕರರೇ ಯೋಚಿಸಿ.

Leave a Reply

error: Content is protected !!
LATEST
ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ