ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದ ತಾಯಿಯೊಬ್ಬಳು ತನ್ನ 2 ವರ್ಷದ ಹೆಣ್ಣು ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ನಡೆದಿದೆ.
ಶೃತಿಕಾ (2) ಮೃತಪಟ್ಟ ಮಗು. ಹತ್ಯೆ ಬಳಿಕೆ ತಾಯಿ ಚಿನ್ನಾ ಅತ್ಮಹತ್ಯೆಗೆ ಯತ್ನಿಸಿದಾಕೆ. ಇದು ಮಾರ್ಚ್ 17ರಂದು ನಡೆದಿರುವ ಘಟನೆಯಾಗಿದು, ತಡವಾಗಿ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಚಿತ್ತೂರು ಮೂಲದ ದಂಪತಿ ಚಿನ್ನಾ ಮತ್ತು ಆಕೆಯ ಪತಿ ಲಕ್ಷ್ಮೀನಾರಾಯಣ 2 ವರ್ಷದ ಮಗುವಿನ ಜತೆ ಮೂರು ತಿಂಗಳ ಹಿಂದೆ ಸೀಗೆಹಳ್ಳಿಗೆ ಬಂದು ವಾಸವಾಗಿದ್ದರು. ಪ್ರತಿದಿನ ಹಿಂಸೆ ನೀಡುತ್ತಿದ್ದನಂತೆ.
ಅದೇರೀತಿ ತನ್ನ ಚಾಳಿಯನ್ನು ಮುಂದುವರಿಸಿದ ಪತಿ ಲಕ್ಷ್ಮೀನಾರಾಯಣ ಇದೇ ಮಾ.16ರಂದು ರಾತ್ರಿ ಹೆಂಡತಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಹೀಗಾಗಿ ಆತನ ಕಾಟಕ್ಕೆ ಬೇಸತ್ತಿದ್ದ ಚಿನ್ನಾ ಮಗುವನ್ನು ಉಸಿರುಗಟ್ಟಿಸಿ ಕೊಂದು ತಾನೂ ಚೂರಿಯಿಂದ ಕತ್ತು ಸೀಳಿಕೊಂಡಿದ್ದಾಳೆ.
ಈ ವೇಳೆ ಸ್ಥಳೀಯರು ಚಿನ್ನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿನ್ನಾಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಲಕ್ಷ್ಮೀನಾರಾಯಣನ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.