ಕಲಬುರಗಿ: 1.54 ಲಕ್ಷ ರೂಪಾಯಿ ಮೌಲ್ಯದ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಾರು ಸಮೇತ ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮದ ಬಳಿ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಕಾರ್ನಲ್ಲಿ ಅಕ್ರಮವಾಗಿ 214 ಲೀಟರ್ ಮದ್ಯ, 117 ಲೀಟರ್ ಬಿಯರ್ ಸೇರಿ ಒಟ್ಟು 1.54 ಲಕ್ಷ ರೂಪಾಯಿ ಮೌಲ್ಯದ ಮದ್ಯ ಸಿಕ್ಕಿದೆ.
ಕಾರಿನಲ್ಲಿ ರಾಜರೋಷವಾಗಿ ಮದ್ಯ ಕೊಂಡೊಯ್ಯಲಾಗುತ್ತಿತ್ತು ಈ ವೇಳೆ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಿಂದ ಹಿಪ್ಪರಗಾ ಎಸ್.ಎನ್. ಗ್ರಾಮದ ಕಡೆಗೆ ಕಾರು ತೆರಳುತ್ತಿತ್ತು. ಅದನ್ನು ಗಮನಿಸಿದ ಸಿಪಿಐ ಕವಿತಾ ನೇತೃತ್ವದ ಅಬಕಾರಿ ತನಿಖಾ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಮದ್ಯ ಜಪ್ತಿ ಮಾಡಿದ್ದಾರೆ.
ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಎಲ್ಲ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಆದರೂ ಕೂಡ ಅಕ್ರಮವಾಗಿ ಹಣ ಹೆಂಡ ಸಾಗಾಟ ನಡೆಸುತ್ತಿರುವುದು ಮಾತ್ರ ತಪ್ಪಿಲ್ಲ. ಇನ್ನು ಅಕ್ರಮ ಎಸಗುವವರಿಗೆ ಅಬಕಾರಿ ತಂಡ ಚುರುಕು ಮುಟ್ಟಿಸುತ್ತಿದೆ.