NEWSನಮ್ಮಜಿಲ್ಲೆನಮ್ಮರಾಜ್ಯ

ಕೊಟ್ಟ ಕೆಲಸ ಸರಿಯಾಗಿ ನಿರ್ವಹಿಸದ ಹಿನ್ನೆಲ್ಲೆ KSRTC ಕಾರ್ಮಿಕ ಧರ್ಮದರ್ಶಿಗಳ ಒಒಡಿ ರದ್ದು: ನಿರ್ದೇಶಕರ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಭವಿಷ್ಯ ನಿಧಿ ಕಾರ್ಮಿಕ ಧರ್ಮದರ್ಶಿಗಳಿಗೆ ನೀಡಲಾಗಿದ್ದ ಒಒಡಿ ಸೌಲಭ್ಯವನ್ನು ರದ್ದುಪಡಿಸಿ KSRTC ನಿರ್ದೇಶಕರು (ಸಿ ಮತ್ತು ಜಾ) ಆದೇಶ ಹೊರಡಿಸಿದ್ದಾರೆ.

ಸಾರಿಗೆ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭವಿಷ್ಯ ನಿಧಿಗೆ ಕಾರ್ಮಿಕ ಧರ್ಮದರ್ಶಿಗಳನ್ನು ನೇಮಕ ಮಾಡಿಕೊಂಡಿದ್ದು ಈ ಧರ್ಮದರ್ಶಿಗಳು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ಭೇಟಿ ನೀಡಿ ನೌಕರರ ಕುಟುಂಬ ಪಿಂಚಣೆ, ಗುಂಪು ವಿಮಾ ಯೋಜನೆ, ಇಡಿಎಲ್‌ಐ ಅಭ್ಯರ್ಥನಗಳನ್ನು ನೌಕರರಿಗೆ/ ನಾಮಿನಿದಾರರಿಗೆ ಸಕಾಲದಲ್ಲಿ ದೊರಕುವಂತೆ ಮಾಡಿಕೊಡಬೇಕಿತ್ತು.

ಈ ಕೆಲಸ ಮಾಡಿಕೊಡುವುದಕ್ಕಾಗಿಯೇ ಇವರಿಗೆ ಒಒಡಿ ಮೇಲೆ ವೇತನ ನೀಡಲಾಗುತ್ತಿತ್ತು, ಆದರೆ ಈ ಧರ್ಮದರ್ಶಿಗಳು ತಾವು ನೇಮಕವಾಗಿರುವ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದು, ಇದರಿಂದ ನೌಕರರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಮನಗಂಡ ಭವಿಷ್ಯ ನಿಧಿ ನ್ಯಾಸ ಮಂಡಳಿ ಸಭೆಯಲ್ಲಿ ಒಒಡಿಯನ್ನು ರದ್ದುಪಡಿಸಿದೆ.

ಕಾರ್ಮಿಕ ಧರ್ಮದರ್ಶಿಗಳ ಕೆಲಸವೇನು?: KSRTC ನಿಗಮ ನೌಕರರ ಅಂಶದಾಯಿ ಭವಿಷ್ಯ ನಿಧಿ ನ್ಯಾಸ ಮಂಡಳಿ ವತಿಯಿಂದ ಕಾರ್ಮಿಕ ಧರ್ಮದರ್ಶಿಗಳಿಗೆ ನೌಕರರು ಮತ್ತು ಅವರ ಕುಟುಂಬದವರಿಗೆ ಸಮಯಕ್ಕೆ ಸರಿಯಾಗಿ ಸೌಲಭ್ಯ ಒದಗಿಸಿಕೊಡುವ ಉದ್ದೇಶದಿಂದ ಪ್ರತಿ ತಿಂಗಳು ಕೊನೆಯ 15 ದಿನಗಳ ಒಒಡಿ ಸೌಲಭ್ಯವನ್ನು ನೀಡಲಾಗಿತ್ತು.

ಅದರಂತೆ ಈ ಅವಧಿಯಲ್ಲಿ ಕಾರ್ಮಿಕ ಧರ್ಮದರ್ಶಿಗಳು ಸಂಬಂಧಪಟ್ಟ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ಭೇಟಿ ನೀಡಿ ನೌಕರರ ಕುಟುಂಬ ಪಿಂಚಣೆ, ಗುಂಪು ವಿಮಾ ಯೋಜನೆ, ಇಡಿಎಲ್‌ಐ ಅಭ್ಯರ್ಥನಗಳನ್ನು ನೌಕರರಿಗೆ/ ನಾಮಿನಿದಾರರಿಗೆ ಸಕಾಲದಲ್ಲಿ ದೊರಕುವಂತೆ ಕಾರ್ಯ ನಿರ್ವಹಿಸಲು ತಿಳಿಸಲಾಗಿತ್ತು.

ಆದರೆ, ಈ ರೀತಿ ಒಒಡಿ ಸೌಲಭ್ಯದ ಅವಧಿಯಲ್ಲಿ ಕಾರ್ಮಿಕ ಧರ್ಮದರ್ಶಿಗಳು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಿದ್ದಾರೆ ಎಂಬ ಬಗ್ಗೆ ವರದಿಗಳನ್ನು ನಿಯಮಿತವಾಗಿ ನ್ಯಾಸ ಮಂಡಳಿಗೆ ಸಲ್ಲಿಸುವ ಮೂಲಕ ಅವರು ಮಾಡುತ್ತಿದ್ದ ಕೆಲಸದ ಬಗ್ಗೆ ಹಾಗೂ ಭವಿಷ್ಯ ನಿಧಿಗೆ ಸಂಬಂಧಪಟ್ಟ ಕಾರ್ಯ ನಿರ್ವಹಿಸದೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂಬುದರ ಕುರಿತು ಕಚೇರಿಗೆ ಮಕ್ಕ ಮಾಹಿತಿ ಸಿಕ್ಕಿದೆ.

ಹೀಗಾಗಿ ಈ ವಿಷಯದ ಕುರಿತು ಇದೇ ಮಾರ್ಚ್‌ 1 ರಂದು ಜರುಗಿದ 269ನೇ ನ್ಯಾಸ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಂಸ್ಥೆಯ ಆರ್ಥಿಕ ಹಿತದೃಷ್ಟಿಯಿಂದ ಮತ್ತು ಆಡಳಿತಾತ್ಮಕ ಕಾರಣಗಳ ಮೇರೆಗೆ ಇನ್ನು ಮುಂದೆ ಕಾರ್ಮಿಕ ಧರ್ಮದರ್ಶಿಗಳಿಗೆ ಪ್ರತಿ ತಿಂಗಳು ಮೊದಲ 15 ದಿನಗಳು ಭವಿಷ್ಯ ನಿಧಿ ಅಂತಿಮ ಅಭ್ಯರ್ಥನ/ ಮುಂಗಡ ಪಾವತಿಗಳ ಪರಿಶೀಲನೆಗಾಗಿ ಪರಿವೀಕ್ಷಣಾ ಕಾರ್ಯಕ್ರಮ ನೀಡಲು ಮತ್ತು ಉಲ್ಲೇಖಿತ ಪತ್ರದ ಪ್ರಕಾರ ನೀಡಲಾಗಿದ್ದ ಪ್ರತಿ ತಿಂಗಳ ಕೊನೆಯ 15 ದಿನಗಳ ಒಒಡಿ ಸೌಲಭ್ಯವನ್ನು ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಅಲ್ಲದೆ ಈ ಅವಧಿಯಲ್ಲಿ ಕಾರ್ಮಿಕ ಧರ್ಮದರ್ಶಿಗಳು ತಮ್ಮ ಮೂಲ ಹುದ್ದೆಯ ಕರ್ತವ್ಯವನ್ನು ನಿರ್ವಹಿಸುವಂತೆ ಒಮ್ಮತದಿಂದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ನಿಗಮದ ಕಾರ್ಮಿಕ ಧರ್ಮದರ್ಶಿಗಳಿಗೆ ನೀಡಲಾಗಿದ್ದ ಒಒಡಿ ಸೌಲಭ್ಯವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದ್ದು, ವಿಭಾಗ/ ನಿಗಮದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಕರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ