Friday, November 1, 2024
CrimeNEWSನಮ್ಮರಾಜ್ಯ

BMTC: ಕಂಡಕ್ಟರ್‌  ಪರ ನಿಲ್ಲದ ಸಂಸ್ಥೆಯಿಂದ ಕೈಗಾರಿಕಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ – ಅನಂತ ಸುಬ್ಬರಾವ್‌  

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಬಿಎಂಟಿಸಿ ಎಂಡಿಗೆ ಪತ್ರ ಬರೆದು  ಕಾನೂನು ಹೋರಾಟಕ್ಕೆ ಮುಂದಾಗಲು ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕರ್ತವ್ಯದ ಮೇಲಿದ್ದಾಗ ಪೊಲೀಸರು ಯಾವುದಾದರೂ ಆರೋಪಗಳಿಗೆ ನೌಕರರನ್ನು ದಸ್ತಗಿರಿ (ಬಂಧಿಸಿದಾಗ) ಮಾಡಿದಾಗ ಜಾಮೀನು ಕೊಡುವುದು ಸಂಸ್ಥೆ ಆದ್ಯ ಕರ್ತವ್ಯವಾಗಿದೆ. ಆದರೆ ನಿಗಮದ ಅಧಿಕಾರಿಗಳ ಇದನ್ನು ಉಲ್ಲಂಘಿಸಿ ಈವರೆಗೂ ಆರೋಪಿತರಾದ ಯಾವೊಬ್ಬ ನೌಕರರಿಗೂ ಜಾಮೀನು ಕೊಡಿಸಿಲ್ಲ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಸಂಬಂಧ ಇದೇ ಮಾರ್ಚ್‌ 26ರಂದು ನಡೆದ ಘಟನೆಯೊಂದಲ್ಲಿ ಬಿಎಂಟಿಸಿ ಘಟಕ 34ರ ನಿರ್ವಾಹಕ ಹೊನ್ನಪ್ಪ ನಾಗಪ್ಪ ಅಗಸರ ಅವರನ್ನು ಪೊಲೀಸರು ಬಂಧಿಸಿ ನಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ವೇಳೆ ನಿರ್ವಾಹಕ ಹೊನ್ನಪ್ಪ ಅವರ ಪರವಾಗಿ ಸಂಸ್ಥೆಯಿಂದ ವಕೀಲರು ಬಂದು ನಡೆದ ಘಟನೆಯನ್ನು ನ್ಯಾಯಾಧೀಶರ ಮುಂದೆ ವಿವರಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಮನವಿ ಮಾಡಬೇಕು. ಆದರೆ ಆ ಕೆಲಸವನ್ನು ಸಂಸ್ಥೆ ಮಾಡಿಲ್ಲ. ಇದು ಕೈಗಾರಿಕಾ ಒಪ್ಪಂದದ  ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎಐಟಿಯುಸಿ ಅಧ್ಯಕ್ಷ ಎಚ್‌. ವಿ.ಅನಂತಸುಬ್ಬರ್‌ ಹೇಳಿದ್ದಾರೆ.

ಅಲ್ಲದೆ ಈ ಬಗ್ಗೆ ಬಿಎಂಟಿಸಿ ಎಂಡಿ ಅವರಿಗೆ ಪತ್ರ ಬರೆದಿದ್ದು ನೌಕರನಿಗೆ ಸಂಸ್ಥೆಯಿಂದಲೇ ಜಾಮೀನು ಕೊಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರದಲ್ಲೇನಿದೆ?: 26.03.2024ರಂದು ಕರ್ತವ್ಯದ ಮೇಲಿದ್ದಾಗ ಬಿಎಂಟಿಸಿ ಘಟಕ 34ರ ನಿರ್ವಾಹಕ ಹೊನ್ನಪ್ಪ ನಾಗಪ್ಪ ಅಗಸರ ನಿರ್ವಾಹಕರು ಮತ್ತು ಮಹಿಳಾ ಪ್ರಯಾಣಿಕರಿಗೂ ಮಾತುಕತೆಗಳಾಗಿ ಈ ನಿರ್ವಾಹಕರನ್ನು ಪೊಲೀಸರು ಕರ್ತವ್ಯದಲ್ಲಿದ್ದಾಗಲೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ ಎಂದು ತಿಳಿದುಬಂದಿದೆ.

ನಾನು ಇಂದು (ಮಾ.27) ಮಧ್ಯಾಹ್ನ ಪ್ರಥಮವಾಗಿ ಈ ವಿಷಯದಲ್ಲಿ ಮುಖ್ಯ ಕಾನೂನು ಅಧಿಕಾರಿಯವರೊಡನೆ ಮಾತನಾಡಿ ನಂತರದಲ್ಲಿ ವಿಷಯದ ಬಗ್ಗೆ, ಇದಕ್ಕೆ ಸಂಬಂಧಿಸಿದ ಕೈಗಾರಿಕಾ ಒಪ್ಪಂದದ ಪ್ರಾವಿಷನ್‌ಗಳನ್ನು ತಮ್ಮ ಗಮನಕ್ಕೆ ತಂದಿದ್ದೇನೆ. ಮತ್ತೊಮ್ಮೆ ಇದನ್ನು ಉಲ್ಲೇಖಿಸಬಯಸುತ್ತೇನೆ.

16.02.1978ರಲ್ಲಿ ಸಪ್ಲಿಮೆಂಟರಿ ಮೆಮೊರಾಂಡಮ್ ಆಫ್ ಸೆಟಲೈಂಟ್ ಕ್ಲಾಸ್ 16 (f) ಜಾಮೀನು ಕೊಡುವ ಬಗ್ಗೆ ಈ ಕೆಳಕಂಡಂತೆ ತಿಳಿಸುತ್ತದೆ: (f) Bail to KSRTC employees.

(i)In the event of an employee of the Corporation being arrested by the Police or summoned to a Court for offences allged to have been committed by him in the course of his duties, the Unit Head or an Officer, duly authorised by him be permitted to stand bail, in his official capacity for the employee if the bail offered in the official capacity is refused, bail may be offered in his personal capacity and the Corporation shall accept liability for payment of the bail amount, if such contingency arises.

ಈ ಕ್ಲಾಸ್ ಪ್ರಕಾರ ಒಬ್ಬ ಕೆಲಸಗಾರನು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪರಾಧ ಮಾಡಿದಾಗ ಅಂತಹ ಸಂರ್ದಭದಲ್ಲಿ ಪೊಲೀಸರಿಂದ ದಸ್ತಗಿರಿಯಾದರೆ ಆಡಳಿತವರ್ಗವೇ ಜಾಮೀನು ಕೊಡಬೇಕು. ಆದರೆ ಈವರೆವಿಗೂ ಯಾವುದೇ ಜಾಮೀನು ವ್ಯವಸ್ಥೆಯಾಗಿಲ್ಲವೆಂದು ತಿಳಿದುಬಂದಿದೆ.

ಈಗಾಗಲೇ ಈ ನೌಕರನನ್ನು ಆಡಳಿತವರ್ಗ ಅಮಾನತ್ತಿನಲ್ಲಿ ಇಟ್ಟಿದೆ. ಆದರೆ ನಮ್ಮ ಕೈಗಾರಿಕಾ ಒಪ್ಪಂದದ ಪ್ರಕಾರ ಜಾಮೀನು ಕೊಡುವ ವ್ಯವಸ್ಥೆ ಮಾಡಿಲ್ಲವೆಂದು ತಿಳಿದುಬಂದಿದೆ. ಇದೊಂದು ಅಮಾನವೀಯ ಕ್ರಮ ಮತ್ತು ಒಪ್ಪಂದದ ಉಲ್ಲಂಘನೆ ಆಗಿದೆ ಎಂದು ಅನಂತ ಸುಬ್ಬರಾವ್‌ ಹೇಳಿದ್ದಾರೆ.

ಇನ್ನು ಈ ನೌಕರ 26.03.2024ರಂದು ದಸ್ತಗಿರಿಯಾಗಿ ಇನ್ನು ಕೂಡ ಜಾಮೀನಿನಲ್ಲಿ ಹೊರಗೆ ತರದಿರುವುದು ಬೇಸರ ಮೂಡಿಸುತ್ತದೆ ಮತ್ತು ಆಡಳಿತವರ್ಗವು ಏಕಮುಖಿಯಾಗಿ ಕರ್ತವ್ಯ ನಿರತ ನೌಕರನನ್ನು ಹಿಂಸೆಗೆ ಗುರಿಮಾಡಿ ಅವನ ಮನಸ್ಥೈರ್ಯವನ್ನು ಕುಗ್ಗಿಸುವ ಧೋರಣೆಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೌಕರರು ಬಹಳ ದೊಡ್ಡ ಪ್ರಮಾಣದಲ್ಲಿ ಹಲವಾರು ಒತ್ತಡಗಳ ನಡುವೆ ಕೆಲಸ ಮಾಡುವ ಸಂದರ್ಭದಲ್ಲಿ ನೌಕರರಿಂದ ತಪ್ಪುಗಳು ಆಗುವುದು ಸಹಜವೆಂದ ಮಾತ್ರಕ್ಕೆ ಈ ರೀತಿ ಖಂಡನೆ ಮಾಡುವುದು ಹಾಗೂ ನಮ್ಮ ಕೈಗಾರಿಕಾ ಒಪ್ಪಂದಗಳ ಮೂಲಕ ರಕ್ಷಣೆ ಕೊಡದಿರುವುದು ಸಹಜವಾಗಿಯೇ ನೌಕರರ ಸಮೂಹದಲ್ಲಿ ಅಶಾಂತಿಯನ್ನು ಮೂಡಿಸುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ತಾವು ಕೆಲಸಗಾರರ (ನೌಕರರ) ಹಿತವನ್ನು ಕಾಪಾಡುವ ಮತ್ತು ಕಾನೂನು ಪಾಲಿಸುವ ದೃಷ್ಟಿಯಿಂದ ಈ ನೌಕರನಿಗೆ ಸಂಸ್ಥೆಯಿಂದಲೇ ಜಾಮೀನು ಕೊಡಿಸಬೇಕೆಂದು ನಾವು ತಮ್ಮಲ್ಲಿ ವಿನಂತಿಸುತ್ತೇವೆ ಹಾಗೂ ಮುಂದೆ ಇಂತಹ ದುರ್ಘಟನೆ ನಡೆದಾಗ ಕೂಡಲೆ ಜಾಮೀನು ಕೊಡುವ ವ್ಯವಸ್ಥೆಯನ್ನು ಸಂಸ್ಥೆಯೇ ಮಾಡಬೇಕೆಂದು ಎಂಡಿ ಅವರನ್ನು ಒತ್ತಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.

ಎದ್ದುಕಾಣುತ್ತಿದೆ ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳ  ಬೇಜವಾಬ್ದಾರಿ: ನೌಕರರ ಪರವಾಗಿ ಇಷ್ಟೆಲ್ಲ ಕಾನೂನುಗಳಿದ್ದರೂ ಕೂಡ ಈ ನಿರ್ವಾಹಕ ಹೊನ್ನಪ್ಪ ಅವರ ಪರ ಸಂಸ್ಥೆ ಕಾನೂನು ರೀತಿ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನಿರ್ವಾಹಕ ಕುಟುಂಬದವರೆ ವಕೀಲರನ್ನು ನೇಮಕ ಮಾಡಿಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಈ ಬಗ್ಗೆ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಯೊಬ್ಬರನ್ನು ಕೇಳಿದರೆ ಇಲ್ಲ ಸರ್‌ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ನಿರ್ವಾಹಕನೇ ವಕೀಲರನ್ನು ನೇಮಿಸಿಕೊಂಡು ಬೇಲ್‌ ಪಡೆದುಕೊಳ್ಳಬೇಕು ಅಂತ ನಮ್ಮ ಮೇಲಧಿಕಾರಿಗಳು ಹೇಳಿದ್ದಾರೆ ಎಂದು ವಿಜಯಪಥಕ್ಕೆ ತಿಳಿಸಿದ್ದಾರೆ.

ಅಂದರೆ ನಿಗಮದ ಅಧಿಕಾರಿಗಳು 16.02.1978ರಲ್ಲಿ ಸಪ್ಲಿಮೆಂಟರಿ ಮೆಮೊರಾಂಡಮ್ ಆಫ್ ಸೆಟಲೈಂಟ್ ಕ್ಲಾಸ್ 16 (f) ಪ್ರಕಾರ ನೌಕರನ ಪರ ನಿಲ್ಲದೆ ಕೈಗಾರಿಕಾ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟವಾಗಿದೆ. ಈ ಅಧಿಕಾರಿಗಳ ವಿರುದ್ಧ ಏಕೆ ಸಂಘಟನೆಗಳು ಕಾನೂನು ಕ್ರಮಕ್ಕೆ ಮುಂದಾಗಬಾರದು ಎಂದು ನೌಕರರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...