Friday, November 1, 2024
NEWSಕ್ರೀಡೆಬೆಂಗಳೂರು

ಇಂದು RCB – KKR ನಡುವೆ ಹೈವೋಲ್ಟೇಜ್‌ ಕದನ: ತವರಿನಲ್ಲಿ ಮತ್ತೊಂದು ಜಯ ಸಾಧಿಸುವ ಹಂಬಲದಲ್ಲಿ ಆರ್​ಸಿಬಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನಡುವೆ ಐಪಿಎಲ್ 2024ರ ಹತ್ತನೇ ಪಂದ್ಯ ಇಂದು ಆಯೋಜಿಸಲಾಗಿದೆ. ಮೊದಲ ಪಂದ್ಯದಲ್ಲಿ ಸೋಲುಂಡ ಬಳಿಕ ಪಂಜಾಬ್ ವಿರುದ್ಧ ಗೆದ್ದಿರುವ ಆರ್​ಸಿಬಿ ತವರಿನಲ್ಲಿ ಮತ್ತೊಂದು ಜಯ ಸಾಧಿಸುವ ಹಂಬಲದಲ್ಲಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹೌದು! ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy stadium) ಇಂದು (ಮಾ.29) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸಜ್ಜಾಗಿದೆ.

ಇನ್ನು 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಇದು 3ನೇ ಪಂದ್ಯವಾಗಿದ್ದು, ತವರಿನಲ್ಲಿ ನಡೆಯುತ್ತಿರುವ 2ನೇ ಪಂದ್ಯವಾಗಿದೆ. ಇನ್ನೂ ಕೆಕೆಆರ್‌ಗೆ ಆವೃತ್ತಿಯ 2ನೇ ಪಂದ್ಯವಾಗಿದೆ. ಈ ತಂಡಗಳು ಈವರೆಗೆ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 14 ರಲ್ಲಿ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ 18 ಪಂದ್ಯಗಳಲ್ಲಿ ಜಯಗಳಿಸಿದೆ.

ಕೆಕೆಆರ್ ವಿರುದ್ಧ ಬೆಂಗಳೂರು ತಂಡ ಗರಿಷ್ಠ ರನ್‌ 213 ಆಗಿದ್ದರೆ, ಬೆಂಗಳೂರು ತಂಡದ ವಿರುದ್ಧ ಕೆಕೆಆರ್‌ ಗಳಿಸಿರುವ ಗರಿಷ್ಠ ರನ್‌ 222 ರನ್‌ ಆಗಿದೆ.

ಪಂದ್ಯವು ರಾತ್ರಿ 7.30 ಕ್ಕೆ ಪ್ರಾರಂಭವಾಗುತ್ತದೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಎರಡನೇ ತವರು ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಆರ್​ಸಿಬಿ ಋತುವಿನ ತಮ್ಮ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತ್ತು. ಆದರೆ ಪಂಜಾಬ್ ಕಿಂಗ್ಸ್ ಅನ್ನು ತನ್ನ ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪುಟಿದೆದ್ದಿತು. ಇದೀಗ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ ಫಾಫ್ ಡುಪ್ಲೆಸಿಸ್ ಪಡೆ.

ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಹಲವು ವರ್ಷಗಳಿಂದ ಬ್ಯಾಟಿಂಗ್ ಸ್ನೇಹಿಯಾಗಿದೆ. ಐಪಿಎಲ್‌ನಲ್ಲಿ ಬ್ಯಾಟಿಂಗ್ ಸ್ವರ್ಗವಾಗಿ ಪರಿಣಮಿಸಿದೆ. ಹೀಗಾಗಿ ತಂಡಗಳು ಈ ಸ್ಥಳದಲ್ಲಿ ಚೇಸ್ ಮಾಡಲು ಆಯ್ಕೆ ಮಾಡಿಕೊಳ್ಳುತ್ತವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗಿಂತ ಚೇಸಿಂಗ್ ತಂಡಗಳು ಈ ಸ್ಥಳದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿವೆ.

ಸದ್ಯ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ಎರಡು ಪಂದ್ಯಗಳಿಂದ ಎರಡು ಅಂಕ ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇವರ ನೆಟ್​ ರನ್​ರೇಟ್ -0.180 ಆಗಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇಳಲು ಇಂದಿನ ಪಂದ್ಯ ಗೆಲ್ಲಲೇ ಬೇಕಿದೆ.

ಸ್ಟಾರ್ಕ್‌ ಮೇಲೆ ಕಣ್ಣು: ಐಪಿಎಲ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾಗಿರುವ ಮಿಚೆಲ್‌ ಸ್ಟಾರ್ಕ್‌ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಮಿಚೆಲ್‌ ಸ್ಟಾರ್ಕ್‌ ಮೊದಲ ಪಂದ್ಯದಲ್ಲಿ ಒಂದೇ ಒಂದು ವಿಕೆಟ್‌ ಪಡೆಯದೇ 4 ಓವರ್‌ಗಳಲ್ಲಿ 53 ರನ್‌ ಚಚ್ಚಿಸಿಕೊಂಡು, ಟೀಕೆಗೆ ಗುರಿಯಾಗಿದ್ದರು. ಹಾಗಾಗಿ ಈ ಪಂದ್ಯದಲ್ಲಾದರೂ ಆರ್‌ಸಿಬಿ ಕಲಿಗಳನ್ನು ಕಟ್ಟಿಹಾಕುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ಗಂಭೀರ್‌-ಕೊಹ್ಲಿ ಮತ್ತೆ ಮುಖಾಮುಖಿ: 17ನೇ ಆವೃತ್ತಿಯಲ್ಲಿ ಮತ್ತೆ ತವರು ತಂಡಕ್ಕೆ ಮೆಂಟರ್‌ ಆಗಿ ಮರಳಿರುವ ಕೆಕೆಆರ್‌ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹಾಗೂ ಕೊಹ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿದ್ದ ಗಂಭೀರ್‌ ಹಾಗೂ ಆರ್‌ಸಿಬಿ ಆಟಗಾರ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದು, ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...