CrimeNEWSಆರೋಗ್ಯನಮ್ಮಜಿಲ್ಲೆ

ವೈದ್ಯರ ನಿರ್ಲಕ್ಷ್ಯ, ಖಾಸಗಿ ಆಸ್ಪತ್ರೆಯ ಹಣದಾಹಕ್ಕೆ ಬಾಣಂತಿ ಬಲಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೈದ್ಯರ ನಿರ್ಲಕ್ಷ್ಯ ಮತ್ತು ಖಾಸಗಿ ಆಸ್ಪತ್ರೆಯ ಹಣದಾಹಕ್ಕೆ ಬಾಣಂತಿಯೊಬ್ಬರ ಜೀವಹೋಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಓಲ್ಡ್ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಬಾಣಂತಿ ಜನನಿಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕ್ಲೌಡ್ ನೈನ್‌ ಆಸ್ಪತ್ರೆಯ ವೈದ್ಯರು ಗರ್ಭಿಣಿ ಜನನಿಗೆ ಅವಧಿಗೆ ಮುಂಚೆಯೇ ಅಂದ್ರೆ 65 ದಿನಗಳ ಮುನ್ನವೇ ಆಪರೇಷನ್ ಮಾಡಿಸಿದ್ದಾರಂತೆ. ಈ ವೇಳೆ ಜನನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದಾದ ಮೇಲೆ ನಡೆದಿದ್ದು ಘನಘೋರ ದುರಂತ.

ಹೆರಿಗೆ ಆದ ಬಳಿಕ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 20 ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ಜನನಿ ಬಳಿಕ ಸಾವನ್ನಪ್ಪಿದ್ದಾರೆ. ಇಷ್ಟು ದಿನದ ವರೆಗೂ ಆಸ್ಪತೆಯಲ್ಲೇ ಇರಿಸಿಕೊಂಡಿದ್ದರು. ಇದೀಗ ಬಾಣಂತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದು, ಈಗ ಮೃತದೇಹ ಕೊಡಲು ಮತ್ತೆ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ.

ಅಸಲಿಗೆ ಆಗಿದ್ದೇನು?: ಗರ್ಭಿಣಿಯಾಗಿದ್ದ ಜನನಿಗೆ ಜುಲೈ-5ಕ್ಕೆ ಡೆಲಿವರಿ ಡೇಟ್ ನೀಡಲಾಗಿತ್ತು. ಆದರೆ ಮೇ 2ಕ್ಕೆ ಕ್ಲೌವ್ಡ್ ನೈನ್ ಆಸ್ಪತ್ರೆಯಲ್ಲಿ ಅವಧಿಗೂ ಮುನ್ನವೇ ಅಂದ್ರೆ ಎರಡು ತಿಂಗಳ‌ ಮೊದಲೇ ವೈದ್ಯರು ಡೆಲಿವರಿ ಮಾಡಿದ್ರಂತೆ. ಈ ವೇಳೆ ಇಂಟರ್ನೆಲ್ ಬ್ಲೀಡಿಂಗ್ ಆಗಿ ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಜನನಿ ಗಂಡನಿಗೂ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲವಂತೆ.

ತಾಯಿ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಕ್ಲೌವ್ಡ್‌ನೈನ್ ಆಸ್ಪತ್ರೆ ವೈದ್ಯರು ಮತ್ತೊಂದು ಯಡವಟ್ಟು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬಾಣಂತಿಯನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ‌ಮಾಡಿದ್ದಾರೆ ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಜನನಿ 20 ದಿನ ಸಾವು ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ.

ಮೃತದೇಹಕ್ಕೆ ₹10 ಲಕ್ಷ ಬೇಡಿಕೆ: ಗಂಭೀರ ಸ್ಥಿತಿಯಲ್ಲಿದ್ದ ಜನನಿ ಮಣಿಪಾಲ್ ಆಸ್ಪತ್ರೆಯಲ್ಲಿ ಬುಧವಾರ ‌ಕೊನೆಯುಸಿರೆಳೆದಿದ್ದಾರೆ. ಬಾಣಂತಿಯ ಮೃತದೇಹ‌ ಕೊಡಲು ಮಣಿಪಾಲ್ ಆಸ್ಪತ್ರೆಯವರು ಹಿಂದೇಟು ಹಾಕಿದ್ದರಂತೆ. 10 ಲಕ್ಷ ರೂಪಾಯಿ ಕೊಟ್ಟು ಮೃತದೇಹ ತಗೆದುಕೊಂಡು ಹೋಗಿ ಅಂತ ಮಣಿಪಾಲ್ ಆಸ್ಪತ್ರೆಯವರು ಹೇಳಿದ್ದಾರಂತೆ

ಮಣಿಪಾಲ್ ಆಸ್ಪತ್ರೆಗೆ ನಾವು ಶಿಫ್ಟ್ ಮಾಡಿಲ್ಲ. ನಾವ್ಯಾಕೆ ದುಡ್ಡು ಕೊಡ್ಬೇಕು? ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು ಕ್ಲೌವ್ಡ್ ನೈನ್‌ ಆಸ್ಪತ್ರೆಯವರು. ನೀವು ಅವರ ಹತ್ರನೇ ದುಡ್ಡು ಕೇಳಿ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಕುಟುಂಬಸ್ಥರು ಹೇಳೋದೇನು?: ಜನನಿಯನ್ನು ಕ್ಲೌವ್ಡ್‌ನೈನ್ ಆಸ್ಪತ್ರೆಗೆ ಸೇರಿಸುವಾಗಲೇ 1 ಲಕ್ಷ 30 ಸಾವಿರ ರೂಪಾಯಿ ಬಿಲ್ ಆಗಬಹುದು ಅಂದಿದ್ರು. ತಾಯಿ ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಲ್ಲ. ಆದರೆ ಒಂದು ಲಕ್ಷದ ಮೂವತ್ತು ಸಾವಿರ ಬಿಲ್ ಅಂತ ಹೇಳಿದ್ದರು. ಬಳಿಕ ಜನನಿ ಕುಟುಂಬಸ್ಥರಿಂದ ಬರೋಬ್ಬರಿ ₹30 ಲಕ್ಷ ರೂಪಾಯಿ ಖರ್ಚು ಮಾಡಿಸಲಾಗಿದೆ. ಆದರೂ ಜನನಿಯನ್ನು ಉಳಿಸಿಲ್ಲ ಎಂದು ಆರೋಪಿಸಿದ್ದಾರೆ.

ಇರೋದನ್ನೆಲ್ಲಾ ಮಾರಾಟ ಮಾಡಿ ದುಡ್ಡು ಹೊಂದಿಸಿದ್ದೇವೆ. ಇನ್ನು ನಮ್ ಕೈಯಲ್ಲಿ ಏನಿಲ್ಲ ಖರ್ಚು ಮಾಡೋಕೆ. ಇಷ್ಟು ಖರ್ಚು ಮಾಡಿದ್ರೂ ನನ್ನ ಹೆಂಡತಿಯನ್ನು ಉಳಿಸಿಕೊಳ್ಳೋಕೆ ಆಗಿಲ್ಲ ಎಂದು ಗಂಡ ಕಣ್ಣೀರು ಹಾಕುತ್ತಿದ್ದಾರೆ. ಮಗಳನ್ನು ಉಳಿಸಿಕೊಳ್ಳೋಕಾಗಿಲ್ಲ ಎಂದು ಜನನಿ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಇಷ್ಟೆಲ್ಲಾ ಆದ್ರೂ ಇನ್ನೂ ಕುಟುಂಬಸ್ಥರಿಗೆ ಬಾಣಂತಿಯ ಮೃತದೇಹ ಹಸ್ತಾಂತರ ಆಗಿಲ್ಲ. ಸದ್ಯ ಜನನಿ ಮೃತದೇಹ ಮಣಿಪಾಲ್ ಆಸ್ಪತ್ರೆಯಲ್ಲಿದೆ. ಮೃತದೇಹ ಕೊಡದಿದ್ರೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು