NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಅಪಘಾತ ತಪ್ಪಿಸಲು​ ಸಿಮ್ಯುಲೇಟರ್‌ ಮೂಲಕ ಚಾಲಕರಿಗೆ ವಿಶೇಷ ತರಬೇತಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಸಾರಿಗೆಯ (BMTC) ಬಸ್​ಗಳಿಂದ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಬಿಎಂಟಿಸಿ ಬಸ್​ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ರಾಜಧಾನಿಯಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸಲು ಬಿಎಂಟಿಸಿ ಸಿಮ್ಯುಲೇಟರ್‌ ಮೂಲಕ ಚಾಲಕರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದ್ದು, ಇದು ಬಸ್‌ ಚಲಾಯಿಸಿದ ಅನುಭವವನ್ನೇ ನೀಡುವ ಡಿಜಿಟಲ್ ವ್ಯವಸ್ಥೆಯ ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಹೊಂದಿರುವ ಯಂತ್ರವಾಗಿದೆ.

ಈ ಸಿಮ್ಯುಲೇಟರ್‌ ಯಂತ್ರ ಬಿಎಂಟಿಸಿಯ ವಡ್ಡರಹಳ್ಳಿ ಚಾಲಕರ ತರಬೇತಿ ಕೇಂದ್ರದಲ್ಲಿದ್ದು, ಬಸ್ ಮಾದರಿಯಲ್ಲಿಯೇ ಚಕ್ರ, ಸೀಟು, ಸೀಟ್ ಬೆಲ್ಟ್, ಆಯಕ್ಸಿಲೇಟರ್, ಬ್ರೇಕ್, ಕ್ಲಚ್ ಹೊಂದಿದ್ದು ಎದುರಿಗೆ ಎಲ್ಇಡಿ ಸ್ಕ್ರೀನ್‌ ಹೊಂದಿದೆ. ಹೀಗಾಗಿ ಸಿಮ್ಯುಲೇಟರ್​ನಲ್ಲಿ ರಸ್ತೆ ಮೇಲೆ ಬಸ್‌ ಚಲಾಯಿಸಿದ ಅನುಭವ ಆಗುತ್ತದೆ.

ದಿಣ್ಣೆಗಳನ್ನು ಏರುವಾಗ, ಇಳಿಯುವಾಗ, ತಿರುವುಗಳಲ್ಲಿ ಹೇಗೆ ವಾಹನ ಚಲಾಯಿಸಬೇಕು ಅತಿ ವಾಹನ ದಟ್ಟಣೆ ಇರುವ ಬೆಂಗಳೂರಿನಂತಹ ನಗರದಲ್ಲಿ ಹಿಂದೆ ಮುಂದೆ ವಾಹನಗಳು ಇರುವಾಗ ಹೇಗೆ ಚಾಲನೆ ಮಾಡಬೇಕು ಎಂಬುದನ್ನೆಲ್ಲ ಹೇಳಿ ಕೊಡಲಾಗುತ್ತದೆ. ಚಾಲನಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಸಲಾಗುತ್ತದೆ.

ವಿಶೇಷತ ತರಬೇತಿ ಕೇಂದ್ರ: ಮೊದಲಿಗೆ ಚಾಲಕರಿಗೆ ಕೈ ಮೂಲಕ ನೀಡಬೇಕಾದ ಸೂಚನೆಗಳ ಬಗ್ಗೆ, ಸಂಚಾರ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಿರುವ ಚಿಹ್ನೆಗಳ ಮಾಹಿತಿ, ಕ್ಲಚ್‌, ಗೇರ್‌, ಬ್ರೇಕ್‌, ಆಯಕ್ಸಿಲೇಟರ್‌ಗಳ ಬಗ್ಗೆ ತಜ್ಞರು ಹೇಳಿಕೊಡುತ್ತಾರೆ. ಬಳಿಕ ಸಿಮ್ಯುಲೇಟರ್‌ ಕೊಠಡಿಯಲ್ಲಿ ಚಾಲನೆ ಕಲಿಸುತ್ತಾರೆ. ಇಷ್ಟೇ ಅಲ್ಲದೆ ಬಸ್​ಗಳಲ್ಲೂ ತರಬೇತಿ ನೀಡುತ್ತಾರೆ.

ಇಂಧನ ಉಳಿತಾಯ ಮಾಡಬೇಕಿದ್ದರೆ ಆಕ್ಸಿಲೇಟರ್‌ ಹೇಗೆ ಬಳಸಬೇಕು, ಕ್ಲಚ್‌, ಗೇರ್‌ಗಳನ್ನು ಹೇಗೆ ಬಳಸಿದರೆ ಇಂಧನ ಉಳಿಸಬಹುದು ಎಂಬುದನ್ನು ಕೂಡ ತಜ್ಞರು ಹೇಳಿಕೊಡುತ್ತಾರೆ.

ಇಇನ್ನು ಸೀಟ್‌ಬೆಲ್ಟ್‌ನಿಂದ ಹಿಡಿದು ಎಲ್ಲ ನಿಯಮಗಳನ್ನು ಪಾಲಿಸದಿದ್ದರೆ ಈ ಯಂತ್ರ ಚಾಲನೆಯಾಗುವುದಿಲ್ಲ. ಆನಂತರವೂ ಸಣ್ಣ ತಪ್ಪಾದರೂ ಗುರುತು ಆಗುವುದರಿಂದ ತಿದ್ದಿಕೊಳ್ಳಲು ಸುಲಭವಾಗುತ್ತದೆ. ಹೊಸಬರಿಗೆ ಮತ್ತು ಚಾಲನೆಯಲ್ಲಿ ಪದೇಪದೆ ತಪ್ಪು ಮಾಡುವವರಿಗೂ ‘ಸಿಮ್ಯುಲೇಟರ್‌’ ಡಿಜಿಟಲ್‌ ಯಂತ್ರದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಬಿಎಂಟಿಸಿ ಡ್ರೈವಿಂಗ್ ಸ್ಕೂಲ್ ಮೇಲ್ವಿಚಾರಕ ಮಧು ಹೇಳಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ