ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಭೆಯನ್ನು ಇದೇ ಆ.11ರಂದು ಕರೆಯಲಾಗಿದೆ ಎಂದು KSRTC ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ದೇಶ್ ಎಸ್. ನಾಯಕ್ ತಿಳಿಸಿದ್ದಾರೆ.
ಇದೇ ಆ.11ರಂದು ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಜೈಬೀಮ್ ನಗರದ ಪೂರ್ಣಿಮ ಟಾಕೀಸ್ ಎದುರುಗಡೆ ನಂ.16, ಜೆ.ಸಿ.ರೋಡ್,1ನೇ ಕ್ರಾಸ್, ನ್ಯೂ ಮಿಷನ್ ರೋಡ್‌ನಲ್ಲಿ ಇರುವ ಜೈಜೀಮ್ ಭವನದಲ್ಲಿ ಆಯೋಜಿಸಿಲಾಗಿದೆ.
ಸಭೆಯಲ್ಲಿ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳ ಮುಖಂಡರು ಉಪಸ್ಥಿತರಿರಲಿದ್ದು, ಈ ಸಭೆಯ ಸಂಪೂರ್ಣ ಉಸ್ತುವಾರಿಯನ್ನು ದೊಡ್ಡಪ್ಪ ಎಚ್. ನರಕಲದಿನ್ನಿ ಹಾಗೂ ನಿಂಗಪ್ಪ ತಡಿಬಿಡಿ ಅವರು ವಹಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು KSRTC, BMTC, NWKRTC ಮತ್ತು KKRTC ರಾಜ್ಯ, ವಲಯ, ವಿಭಾಗೀಯ, ಘಟಕ ಸಮಿತಿಯ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರು ತಪ್ಪದೇ ಸಕಾಲಕ್ಕೆ ಆಗಮಿಸಿ ಮುಕ್ತವಾಗಿ ಚ್ರಚೆ ಮಾಡುವ ಮೂಲಕ ಸಭೆಯ ಕಾರ್ಯ ಕಲಾಪಗಳನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ ಬಹುದಿನಗಳ ನಂತರ “ಬಹುಜನರಲ್ಲಿ” ಕ್ರಾಂತಿಕಾರಿ ಅಲೆ ಎದ್ದಿದ್ದು, ಸಾರಿಗೆ ನಿಗಮಗಳ ಎಲ್ಲ ಎಸ್ಸಿ-ಎಸ್ಟಿ ನೌಕರರು ತಮ್ಮ ವೈಯಕ್ತಿಕ ಸಂಘಗಳ ಭೇದ ಭಾವ ಮರೆತು ಎಲ್ಲರೂ ಒಂದೇ ವೇದಿಕೆಗೆ ಆಗಮಿಸಿ ಒಂದೇ ಸಂಘಟನೆಯಲ್ಲಿ ಮುಂದುವರಿಯಲು ನಿರ್ಧರಿಸಿರುವುದು ನಿಜಕ್ಕೂ ಬಾಬಾ ಸಾಹೇಬರಿಗೆ ಕೊಡುವ ಗೌರವ ಅಂತಾನೆ ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.