ನ್ಯೂಡೆಲ್ಲಿ: ಸರ್ಕಾರಿ ಸಾರಿಗೆ ವಾಹನಗಳನ್ನೊಳಗೊಂಡು ಯಾವುದೇ ವಾಹನದಿಂದ ಪ್ರಯಾಣಿಕ ಆಕಸ್ಮಿಕವಾಗಿ ಬಿದ್ದು ಮೃತಪಟ್ಟರೆ, ಅದಕ್ಕೆ ವಾಹನದ ಚಾಲಕರು ಜವಾಬ್ದಾರರಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ 2024ರ ಜುಲೈನಲ್ಲೇ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಕೆ.ಟಿ. ಥಾಮಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿದ್ದು, ಯಾವುದೇ ವಾಹನವು ಅಪಘಾತಕ್ಕೀಡಾದರೆ ಚಾಲಕನ ನಿರ್ಲಕ್ಷತನವೇ ಕಾರಣವೆಂದು ಭಾವಿಸುವುದು ತಪ್ಪು ಎಂದು ಹೇಳಿದೆ.
ಇನ್ನು ಸೆಷನ್ಸ್ ನ್ಯಾಯಾಲಯ ಹಾಗೂ ಆಂಧ್ರ ಪ್ರದೇಶದ ಹೈಕೋರ್ಟ್‌ನಿಂದ ಶಿಕ್ಷೆಗೊಳಗಾಗಿದ್ದ ಚಾಲಕನನ್ನು ಆರೋಪದಿಂದ ಬಿಡುಗಡೆ ಮಾಡುವಂತೆ ಈ ಪೀಠ ಈ ತೀರ್ಪು ನೀಡುವ ಮೂಲಕ ಆದೇಶ ಮಾಡಿದೆ.
ಆಂಧ್ರಪ್ರದೇಶದ ರಸ್ತೆ ಸಾರಿಗೆ ಸಂಸ್ಥೆಯ ಚಲಿಸುವ ಬಸ್ಸಿನಿಂದ ಮಹಿಳೆಯೋರ್ವಳು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು. ಆಗ ಬಸ್ಸಿನ ಚಾಲಕ ಮೊಹಮದ್ ಆಯುದ್ದೀನ್‌ನನ್ನು ತಪ್ಪಿತಸ್ಥನನ್ನಾಗಿ ಮಾಡಿ ಆತನ ನಿರ್ಲಕ್ಷ್ಯವೇ ಮಹಿಳೆ ಬೀಳಲು ಕಾರಣವೆಂದು ಭಾವಿಸಲಾಗಿತ್ತು. ಅಷ್ಟೇ ಅಲ್ಲದೆ ಅವನಿಗೆ ಭಾರತೀಯ ದಂಡ ಸಂಹಿತೆಯ 304 3 ತಿಂಗಳು ಜೈಲು ಶಿಕ್ಷೆಯನ್ನೂ ವಿಧಿಸಿತ್ತು.
ತನಗೆ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಬಸ್ ಚಾಲಕ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದನು. ಆತನ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಥಾಮಸ್ ಚಲಿಸುವ ವಾಹನದಿಂದ ಪ್ರಯಾಣಿಕ ಕೆಳಗುರುಳಿ ಬಿದ್ದ ಸಂದರ್ಭದಲ್ಲಿ ವಾಹನದ ಚಾಲಕ ಅದಕ್ಕೆ ಜವಾಬ್ದಾರನಾಗಲಾರ ಎಂದು ಹೇಳಿ ಚಾಲಕನ ಪರ ತೀರ್ಪು ನೀಡಿರು.
Related

 










