NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಮಧ್ಯರಾತ್ರಿ ಕೆಟ್ಟುನಿಂತ ಎಸಿ ಬಸ್‌- 8ಗಂಟೆಗಳು ಪ್ರಯಾಣಿಕರ ಪರದಾಡಿಸಿದ ಡಿಎಂ ಅಮಾನತು ಮಾಡಿ ಎಂಡಿ ರಾಚಪ್ಪ ಆದೇಶ

ವಿಜಯಪಥ ಸಮಗ್ರ ಸುದ್ದಿ
  • ಮಧ್ಯರಾತ್ರಿ ಕೆಟ್ಟು ನಿಂತ ಕೆಕೆಆರ್‌ಟಿಸಿ ಬಸ್‌ । ಪರ್ಯಾಯ ವ್ಯವಸ್ಥೆ ಮಾಡದೆ ಡಿಪೋ ವ್ಯವಸ್ಥಾಪಕನ ನಿರ್ಲಕ್ಷ್ಯ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KKRTC) ಸಂಸ್ಥೆಯ ಎಸಿ ಸ್ವೀಪರ್ ಬಸ್‌ವೊಂದು ಕಲಬುರಗಿ- ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲೇ ತಡರಾತ್ರಿ ಕೆಟ್ಟು ನಿಂತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡಿದ ಘಟಕ ವ್ಯವಸ್ಥಾಪಕರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅಮಾನತು ಮಾಡಿದ್ದಾರೆ.

ಮಾರ್ಗಮಧ್ಯೆ ಬಸ್‌ ಕೆಟ್ಟು ನಿಂತ ಬಳಿಕ ಸಕಾಲಕ್ಕೆ ಮತ್ತೊಂದು ಬಸ್  ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡಿದ ಸಂಸ್ಥೆಯ ಕಲಬುರಗಿ ಘಟಕ-1ರ ಡಿಎಂ ಅಶೋಕ ದೊಡ್ಡಮನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ತಿಳಿಸಿದ್ದಾರೆ.

ಘಟನೆ ವಿವರ: ಕಲಬುರಗಿ ಘಟಕ-1ರ ಎಸಿ ಸ್ವೀಪರ್ ಬಸ್ (ಕೆಎ 32 ಎಫ್ 2011) ಗುರುವಾರ ಅಂದರೆ ಮೇ 15 ರಾತ್ರಿ 7 ಗಂಟೆಗೆ ಸುಮಾರಿಗೆ 30 ಜನ ಪ್ರಯಾಣಿಕರನ್ನು ಕರೆದುಕೊಂಡು ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿತ್ತು. ಈ ಬಸ್ ಶುಕ್ರವಾರ ಮೇ 16ರ ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ತಲುಪಬೇಕಾಗಿತ್ತು.

ಇನ್ನು ಪ್ರಯಾಣಿಕರು ತಲಾ 1210 ರೂ. ಬಸ್‌ ಚಾರ್ಜ್‌ಕೊಟ್ಟದರು. ಇನ್ನು ಶುಕ್ರವಾರ ಬೆಳಗ್ಗೆ ಮದುವೆ, ಆಸ್ಪತ್ರೆ ಮತ್ತು ಸಂದರ್ಶನ ಹೀಗೆ ಹಲವಾರು ಕಾರ್ಯಗಳಲ್ಲಿ ತೊಡಗುವವರಿದ್ದರು. ಆದರೆ ಬೆಂಗಳೂರನ್ನು ಸಮಯಕ್ಕೆ ಸರಿಯಾಗಿ ತಲುಪುತ್ತೇವೆ ಅಂದು ಕೊಂಡಿದ್ದ ವೃದ್ಧರು, ಕಂಪನಿಗಳಲ್ಲಿ ಸಂದರ್ಶನಕ್ಕೆ ಹೋಗುತ್ತಿದ್ದ ಯುವಕರು ಸೇರಿದಂತೆ ಇತರೆ ಪ್ರಯಾಣಿಕರಿಗೆ ಶಾಕ್‌ಆಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಳ್ಳಾರಿ ಬಳಿಯಲ್ಲಿರುವ ಬೈಲೂರ ಹತ್ತಿರ ಹಠಾತ್ ಆಗಿ ಬಸ್‌ ಕೆಟ್ಟು ನಿಂತಿದೆ. ಇದನ್ನು ನೋಡಿ ಪ್ರಯಾಣಿಕರು ಆತಂಕಗೊಂಡರು.

ಇನ್ನು ಸ್ವಲ್ಪಹೊತ್ತಿನಲ್ಲೇ ಬಸ್ ದುರಸ್ತಿಯಾಗಲಿದೆ ಎಂಬ ಆಶಾಭಾವನೆ ಹೊಂದಿದ್ದ ಪ್ರಯಾಣಿಕರಿಗೆ ನಿರಾಸೆಯಾಗಿದೆ. ಹಲವಾರು ಗಂಟೆಗಳ ಕಾಲ ಚಾಲಕ-ನಿರ್ವಾಹಕರು ದುರಸ್ತಿಗೆ ಪ್ರಯತ್ನಿಸಿದ್ದರೂ ಅದು ಫಲ ನೀಡಲಿಲ್ಲ. ಕೊನೆಗೆ ಪ್ರಯಾಣಿಕರು ಮತ್ತು ಚಾಲಕರು ಕಲಬುರಗಿ ಘಟಕ-1ರ ಮ್ಯಾನೇಜರ್‌ಗೆ ಕರೆ ಮಾಡಿ ಪರ್ಯಾಯ ಬಸ್ ವ್ಯವಸ್ಥೆಗೆ ಮನವಿ ಮಾಡಿದ್ದಾರೆ.

ಆದರೆ ಸಕಾಲಕ್ಕೆ ಅವರು ಬಸ್ ವ್ಯವಸ್ಥೆ ಮಾಡಲಿಲ್ಲ. ಮನೆಯಲ್ಲಿ ಹೋಗಿ ಬೆಚ್ಚಗೆ ಮಲಗಿ ಬಳಗ್ಗೆ ಡ್ಯೂಟಿಗೆ ಮಾಮೂಲಿನಂತೆ ಬಂದು ಅದರಲ್ಲೂ ಮುಂಜಾನೆ 5-6ಗಂಟೆಗಾದರೂ ಬಸ್‌ ವ್ಯವಸ್ಥೆ ಮಾಡಬೇಕಿತ್ತು. ಆದರೆ ಹಾಗೆ ಮಾಡದರೆ ಮಾರನೇ ದಿನ ಅಂದರೆ ಶುಕ್ರವಾರ ಬೆಳಗ್ಗೆ 10 ಗಂಟೆ ಬಸ್‌ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ.

ಇನ್ನು ಅಲ್ಲಿಯವರೆಗೂ ಪ್ರಯಾಣಿಕರು ರಾತ್ರಿ ಪೂರ್ತಿ ನಿದ್ದೆಗೆಟ್ಟು ಬಸ್‌ಗಾಗಿ ಕಾದು ಸುಸ್ತಾಗಿದ್ದರು. ಕೊನೆಗೆ ಬೆಳಗ್ಗೆ 10 ಗಂಟೆ ಬಳಿಕ ನಾನ್ ಎಸಿ ಕೆಂಪು ಬಸ್ ಬಂದ ಬಳಿಕ ಸಂಜೆ 4.30ಕ್ಕೆ ಬೆಂಗಳೂರು ತಲುಪಬೇಕಾಯಿತು.

ನಿರ್ಜನ ಪ್ರದೇಶದಲ್ಲಿ ಬಸ್ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಸುತ್ತಮುತ್ತಲೂ ಹೋಟೆಲ್ ಇತರೆ ಆಶ್ರಯ ಇಲ್ಲದೆ 8 ಗಂಟೆಗಳಿಗೂ ಹೆಚ್ಚು ಕಾಲ ಇನ್ನೊಂದು ಬಸ್‌ಗಾಗಿ ಕಾಯುವಂತಾಯಿತು. ರಾತ್ರಿಯಿಡಿ ವೃದ್ಧರು, ಮಕ್ಕಳು ತೊಂದರೆ ಅನುಭವಿಸಬೇಕಾಯಿತು.

ಜತೆಗೆ ಭಯ, ಆತಂಕದಲ್ಲಿಯೇ ನಿದ್ದೆ ಇಲ್ಲದೆ ತೊಂದರೆ ಅನುಭವಿಸುವಂತಾಯಿತು. ಇದಕ್ಕೆಲ್ಲ ಘಟಕ ವ್ಯವಸ್ಥಾಪಕರ ನಿರ್ಲಕ್ಷ್ಯವೆ ಕಾರಣ ಎಂದು ಪ್ರಯಾಣಿಕರು ತಾವು ಅನುಭವಿಸಿದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Megha
the authorMegha

Leave a Reply

error: Content is protected !!