KKRTC: ಮಧ್ಯರಾತ್ರಿ ಕೆಟ್ಟುನಿಂತ ಎಸಿ ಬಸ್- 8ಗಂಟೆಗಳು ಪ್ರಯಾಣಿಕರ ಪರದಾಡಿಸಿದ ಡಿಎಂ ಅಮಾನತು ಮಾಡಿ ಎಂಡಿ ರಾಚಪ್ಪ ಆದೇಶ

- ಮಧ್ಯರಾತ್ರಿ ಕೆಟ್ಟು ನಿಂತ ಕೆಕೆಆರ್‌ಟಿಸಿ ಬಸ್ । ಪರ್ಯಾಯ ವ್ಯವಸ್ಥೆ ಮಾಡದೆ ಡಿಪೋ ವ್ಯವಸ್ಥಾಪಕನ ನಿರ್ಲಕ್ಷ್ಯ
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KKRTC) ಸಂಸ್ಥೆಯ ಎಸಿ ಸ್ವೀಪರ್ ಬಸ್‌ವೊಂದು ಕಲಬುರಗಿ- ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲೇ ತಡರಾತ್ರಿ ಕೆಟ್ಟು ನಿಂತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡಿದ ಘಟಕ ವ್ಯವಸ್ಥಾಪಕರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅಮಾನತು ಮಾಡಿದ್ದಾರೆ.
ಮಾರ್ಗಮಧ್ಯೆ ಬಸ್ ಕೆಟ್ಟು ನಿಂತ ಬಳಿಕ ಸಕಾಲಕ್ಕೆ ಮತ್ತೊಂದು ಬಸ್ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡಿದ ಸಂಸ್ಥೆಯ ಕಲಬುರಗಿ ಘಟಕ-1ರ ಡಿಎಂ ಅಶೋಕ ದೊಡ್ಡಮನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ತಿಳಿಸಿದ್ದಾರೆ.
ಘಟನೆ ವಿವರ: ಕಲಬುರಗಿ ಘಟಕ-1ರ ಎಸಿ ಸ್ವೀಪರ್ ಬಸ್ (ಕೆಎ 32 ಎಫ್ 2011) ಗುರುವಾರ ಅಂದರೆ ಮೇ 15 ರಾತ್ರಿ 7 ಗಂಟೆಗೆ ಸುಮಾರಿಗೆ 30 ಜನ ಪ್ರಯಾಣಿಕರನ್ನು ಕರೆದುಕೊಂಡು ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿತ್ತು. ಈ ಬಸ್ ಶುಕ್ರವಾರ ಮೇ 16ರ ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ತಲುಪಬೇಕಾಗಿತ್ತು.
ಇನ್ನು ಪ್ರಯಾಣಿಕರು ತಲಾ 1210 ರೂ. ಬಸ್ ಚಾರ್ಜ್‌ಕೊಟ್ಟದರು. ಇನ್ನು ಶುಕ್ರವಾರ ಬೆಳಗ್ಗೆ ಮದುವೆ, ಆಸ್ಪತ್ರೆ ಮತ್ತು ಸಂದರ್ಶನ ಹೀಗೆ ಹಲವಾರು ಕಾರ್ಯಗಳಲ್ಲಿ ತೊಡಗುವವರಿದ್ದರು. ಆದರೆ ಬೆಂಗಳೂರನ್ನು ಸಮಯಕ್ಕೆ ಸರಿಯಾಗಿ ತಲುಪುತ್ತೇವೆ ಅಂದು ಕೊಂಡಿದ್ದ ವೃದ್ಧರು, ಕಂಪನಿಗಳಲ್ಲಿ ಸಂದರ್ಶನಕ್ಕೆ ಹೋಗುತ್ತಿದ್ದ ಯುವಕರು ಸೇರಿದಂತೆ ಇತರೆ ಪ್ರಯಾಣಿಕರಿಗೆ ಶಾಕ್‌ಆಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಳ್ಳಾರಿ ಬಳಿಯಲ್ಲಿರುವ ಬೈಲೂರ ಹತ್ತಿರ ಹಠಾತ್ ಆಗಿ ಬಸ್ ಕೆಟ್ಟು ನಿಂತಿದೆ. ಇದನ್ನು ನೋಡಿ ಪ್ರಯಾಣಿಕರು ಆತಂಕಗೊಂಡರು.
ಇನ್ನು ಸ್ವಲ್ಪಹೊತ್ತಿನಲ್ಲೇ ಬಸ್ ದುರಸ್ತಿಯಾಗಲಿದೆ ಎಂಬ ಆಶಾಭಾವನೆ ಹೊಂದಿದ್ದ ಪ್ರಯಾಣಿಕರಿಗೆ ನಿರಾಸೆಯಾಗಿದೆ. ಹಲವಾರು ಗಂಟೆಗಳ ಕಾಲ ಚಾಲಕ-ನಿರ್ವಾಹಕರು ದುರಸ್ತಿಗೆ ಪ್ರಯತ್ನಿಸಿದ್ದರೂ ಅದು ಫಲ ನೀಡಲಿಲ್ಲ. ಕೊನೆಗೆ ಪ್ರಯಾಣಿಕರು ಮತ್ತು ಚಾಲಕರು ಕಲಬುರಗಿ ಘಟಕ-1ರ ಮ್ಯಾನೇಜರ್‌ಗೆ ಕರೆ ಮಾಡಿ ಪರ್ಯಾಯ ಬಸ್ ವ್ಯವಸ್ಥೆಗೆ ಮನವಿ ಮಾಡಿದ್ದಾರೆ.
ಆದರೆ ಸಕಾಲಕ್ಕೆ ಅವರು ಬಸ್ ವ್ಯವಸ್ಥೆ ಮಾಡಲಿಲ್ಲ. ಮನೆಯಲ್ಲಿ ಹೋಗಿ ಬೆಚ್ಚಗೆ ಮಲಗಿ ಬಳಗ್ಗೆ ಡ್ಯೂಟಿಗೆ ಮಾಮೂಲಿನಂತೆ ಬಂದು ಅದರಲ್ಲೂ ಮುಂಜಾನೆ 5-6ಗಂಟೆಗಾದರೂ ಬಸ್ ವ್ಯವಸ್ಥೆ ಮಾಡಬೇಕಿತ್ತು. ಆದರೆ ಹಾಗೆ ಮಾಡದರೆ ಮಾರನೇ ದಿನ ಅಂದರೆ ಶುಕ್ರವಾರ ಬೆಳಗ್ಗೆ 10 ಗಂಟೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ.
ಇನ್ನು ಅಲ್ಲಿಯವರೆಗೂ ಪ್ರಯಾಣಿಕರು ರಾತ್ರಿ ಪೂರ್ತಿ ನಿದ್ದೆಗೆಟ್ಟು ಬಸ್‌ಗಾಗಿ ಕಾದು ಸುಸ್ತಾಗಿದ್ದರು. ಕೊನೆಗೆ ಬೆಳಗ್ಗೆ 10 ಗಂಟೆ ಬಳಿಕ ನಾನ್ ಎಸಿ ಕೆಂಪು ಬಸ್ ಬಂದ ಬಳಿಕ ಸಂಜೆ 4.30ಕ್ಕೆ ಬೆಂಗಳೂರು ತಲುಪಬೇಕಾಯಿತು.
ನಿರ್ಜನ ಪ್ರದೇಶದಲ್ಲಿ ಬಸ್ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಸುತ್ತಮುತ್ತಲೂ ಹೋಟೆಲ್ ಇತರೆ ಆಶ್ರಯ ಇಲ್ಲದೆ 8 ಗಂಟೆಗಳಿಗೂ ಹೆಚ್ಚು ಕಾಲ ಇನ್ನೊಂದು ಬಸ್‌ಗಾಗಿ ಕಾಯುವಂತಾಯಿತು. ರಾತ್ರಿಯಿಡಿ ವೃದ್ಧರು, ಮಕ್ಕಳು ತೊಂದರೆ ಅನುಭವಿಸಬೇಕಾಯಿತು.
ಜತೆಗೆ ಭಯ, ಆತಂಕದಲ್ಲಿಯೇ ನಿದ್ದೆ ಇಲ್ಲದೆ ತೊಂದರೆ ಅನುಭವಿಸುವಂತಾಯಿತು. ಇದಕ್ಕೆಲ್ಲ ಘಟಕ ವ್ಯವಸ್ಥಾಪಕರ ನಿರ್ಲಕ್ಷ್ಯವೆ ಕಾರಣ ಎಂದು ಪ್ರಯಾಣಿಕರು ತಾವು ಅನುಭವಿಸಿದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
Related

You Might Also Like
BMTC ನೌಕರರಿಗೆ ಸಾರಿಗೆ ಸಚಿವರಿಂದ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಯೋಗದೊಂದಿಗೆ ಜೂನ್-2025ರ ಮಾಹೆಯ ಸಂಸ್ಥೆಯ 100ಕ್ಕೂ ಹೆಚ್ಚು ಅರ್ಹ ನೌಕರರಿಗೆ ಪ್ರಯಾಸ್ ಯೋಜನೆಯಡಿ...
KKRTC ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ತಾತ್ಕಾಲಿಕ ನೇಮಕ
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (CPM)...
ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 20ಕ್ಕೂ ಹೆಚ್ಚು ಜನರು ಮೃತ: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು...
KSRTC ನೌಕರರ ವೇತನ ಹೆಚ್ಚಳ ಪ್ರಕರಣ: ನಾಳೆ ಹೈ ಕೋರ್ಟ್ನಲ್ಲಿ ವಿಚಾರಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!
ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...