NEWSನಮ್ಮಜಿಲ್ಲೆಬೆಂಗಳೂರು

KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರು ಅತ್ಯಂತ ಶ್ರಮಜೀವಿಗಳು, ಅದರಲ್ಲೂ ಚಾಲನಾ ಸಿಬ್ಬಂದಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು, ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯ ಎಂದು ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘಿಸಿದರು.

ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಅ.13ರಂದು ಆಯೋಜಿಸಿದ್ದ ಇಪಿಎಸ್-95 ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ನಾಲ್ಕನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಸಾರಿಗೆ ನೌಕರರು ತಮ್ಮ ನಿವೃತ್ತಿಯ ನಂತರ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ತಿಳಿದು ತುಂಬಾ ಬೇಸರ ವ್ಯಕ್ತಪಡಿಸಿದ ಶ್ರೀಗಳು, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನಿವೃತ್ತರ ಬದುಕಿಗೆ ಆಶ್ರಯ ನೀಡುವ ಉತ್ತಮ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಉಚ್ಚ ನ್ಯಾಯಾಲಯದ ವಕೀಲರು ಹಾಗೂ ರಾಜ್ಯ ಕಾನೂನು ಸೇವೆ ಪ್ರಾಧಿಕಾರದ ಮುಖ್ಯಸ್ಥರೂ ಆದ ಶ್ರೀಧರ ಪ್ರಭು ಅವರು, ನಿವೃತ್ತರ ಬದುಕಿನ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದರು. ನಿವೃತ್ತರಿಗೆ ನೀಡುವ ಪಿಂಚಣಿ “ಭಿಕ್ಷೆಯಲ್ಲ” ಅದು ಗೌರವ ಧನ, ನೌಕರನು ತಾನು ಸೇವೆಯಲ್ಲಿದ್ದಾಗ, ಉದ್ಯೋಗದಾತನು ನೀಡುತ್ತಿದ್ದ ಸೇವಾ ಸೌಲಭ್ಯಗಳನ್ನು, ನಿವೃತ್ತಿಯ ನಂತರವೂ ನೌಕರನಿಗೆ ಮುಂದುವರಿಸಬೇಕೆಂಬುದುದಕ್ಕೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಯುತವಾದ ನಿತ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಇನ್ನು ನಮ್ಮ ಸಂಘಟನೆ ಪ್ರಾರಂಭವಾಗಿ ಏಳು ವರ್ಷ ಕಳೆದಿದ್ದು, ಎಲ್ಲ ಏಳು ಬೀಳುಗಳ ನಡುವೆ, ಗಟ್ಟಿಯಾಗಿ ನಿಂತಿದೆ. ಅದಕ್ಕೆ ಸಂಘಟನೆಯ ಕಾರ್ಯಕರ್ತರೇ ಕಾರಣ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದರು.

ದಾಖಲೆಯ 81 ಮಾಸಿಕ ಸಭೆಗಳನ್ನು ಲಾಲ್‌ಬಾಗ್ ಆವರಣದಲ್ಲಿ ನಡೆಸುವ ಮೂಲಕ ಎಲ್ಲ ಇಪಿಎಸ್ ನಿವೃತ್ತರ ಮೆಚ್ಚುಗೆಗೆ ಪಾತ್ರವಾಗಿದ್ದು, ಜತೆಗೆ ಪಿಎಫ್ ಕಚೇರಿ ಆವರಣದಲ್ಲಿ “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮದಂದು ನಾವು ನಡೆಸುವ ಪ್ರತಿಭಟನಾ ಸಭೆ ದೇಶಾದ್ಯಂತ ಸುದ್ದಿಯಾಗಿದೆ. ಅದರಿಂದಾಗಿ ನಿವೃತ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ನಾವೆಲ್ಲರೂ ಸಂಘ ಜೀವಿಗಳು, ಸಂಘಟನಾತ್ಮಕವಾಗಿ ಹೋರಾಟ ಮಾಡಿದಲ್ಲಿ ಮಾತ್ರ ನಮಗೆ ಜಯ ಶತ ಸಿದ್ದ ಎಂದ ಸಂಘದ ಅಧ್ಯಕ್ಷ ಶಂಕರ್ ಕುಮಾರ್, ನಮ್ಮ ಹೋರಾಟ ಹಾಗೂ ಪ್ರತಿಭಟನಾ ಸಭೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತರು ಭಾಗವಹಿಸಿದ್ದಲ್ಲಿ ಮಾತ್ರ, ನಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಮ್ಮ ಸಂಘವು ಅಧಿಕೃತವಾಗಿ ಸ್ಥಾಪನೆಯಾಗಿ ನಾಲ್ಕು ವಸಂತಗಳನ್ನು ಪೂರೈಸಿದ್ದು, ಸಂಘದ ನಾಲ್ಕು ವರ್ಷಗಳ ಸಾಧನೆಯ ಬಗ್ಗೆ ಪ್ರಸ್ತಾವನಾ ವರದಿ ಹಾಗೂ ಆಡಿಟ್ ವರದಿಯನ್ನು ಸಭೆಯಲ್ಲಿ ಉಪಾಧ್ಯಕ್ಷ ಆರ್. ಸುಬ್ಬಣ್ಣ ಮಂಡಿಸಿದರು. ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.

ಪ್ರಪ್ರಥಮವಾಗಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಮ್ಮ ಸಂಘವು ಮೊದಲ ಸಾರ್ವಜನಿಕ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಾದ ನಂತರ ಯಲಹಂಕ, ವಿಜಯನಗರದ ಕಾರ್ಡು ರೋಡ್ ಅಸೋಸಿನಲ್ಲಿ ಜರುಗಿದ ಹಲವಾರು ಚಿಂತನ ಮಂಥನ ಕಾರ್ಯಕ್ರಮ, ಇಪಿಎಸ್ ನಿವೃತ್ತರಲ್ಲಿ ಸಾಕಷ್ಟು ಅರಿವು ಮೂಡಿಸಿದ್ದು, ನಮ್ಮ ಸಂಘವು ಯಶಸ್ಸಿನ ಪಥದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

2024 ರಿಂದ 2027 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನಮ್ಮ ಸಂಘಕ್ಕೆ ಆಯ್ಕೆ ಮಾಡುವ ಸಂಬಂಧ ಪ್ರಸ್ತಾವನೆಯನ್ನು ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಸಭೆಯಲ್ಲಿ ಮಂಡಿಸಿದ್ದು, ಈ ನಿರ್ಣಯಕ್ಕೆ ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಇಂದಿನ ಸಭೆಗೆ ಆಗಮಿಸಿದ್ದ, ಎಲ್ಲರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ನಿವೃತ್ತ ನೌಕರರು ಹಾಗೂ ನಮ್ಮ ಸಂಘದ ಸದಸ್ಯ ನಾಗರಾಜು ಹಾಗೂ ನಾಡಪ್ರಭು ಕೆಂಪೇಗೌಡ ವಿಚಾರ ವೇದಿಕೆ ಟ್ರಸ್ಟ್ ಅಧ್ಯಕ್ಷ ಪಾಪಣ್ಣ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಆರ್.ಮನೋಹರ್, ಕೆ.ಆರ್. ರಂಗನಾಥ್, ಆರ್.ನಾಗರಾಜು ಹಾಗೂ ರುಕ್ಮೇಶ್ ಅವರು ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು ಮೇಲೂರು ಅಮರ್, ಚಿಕ್ಕಬಳ್ಳಾಪುರ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಎಲ್ಲ ಗಣ್ಯರು, ಸಂಘದ ಸದಸ್ಯರು, ಪದಾಧಿಕಾರಿಗಳನ್ನು ಸ್ವಾಗತಿಸಿ ಸಭೆಗೆ ಚಾಲನೆ ನೀಡಿದರು. ನಿರೂಪಕರಿಲ್ಲದೆ ಯಾವುದೇ ಸಭೆ ನಡೆಸಲು ಕಷ್ಟ ಸಾಧ್ಯ. ನಿರೂಪಕರಾದ ಚಂದ್ರಶೇಖರ್ ಅವರು ಬಿಎಂಟಿಸಿ ನೌಕರರಾಗಿದ್ದು, ನೈಜತೆ ಮತ್ತು ಸ್ಪಷ್ಟತೆಗೆ ಮೊದಲಿಗರಾಗಿದ್ದು, ಸರಳ ಕನ್ನಡ ಭಾಷೆಯಲ್ಲಿ, ನಿರೂಪಣೆಯನ್ನು ಸೊಗಸಾಗಿ ನಿರ್ವಹಿಸಿ, ಸಭಿಕರ ಮನ ಗೆದ್ದರು. ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು