ಮೈಸೂರು: ಮುಡಾದಲ್ಲಿ ನಡೆದಿರುವ ಬಹುಕೋಟಿ ಹಗರಣ ಪ್ರಕರಣ ಸಂಬಂಧ ಮೈಸೂರು ಲೋಕಾಯುಕ್ತದಲ್ಲಿ ಇಂದು ಪ್ರಕರಣದ A1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಣೆ ಮುಕ್ತಾಯವಾಗಿದೆ.
ಸುದೀರ್ಘ 2 ಗಂಟೆಗಳ ಕಾಲ ಮೈಸೂರಿನ ಲೋಕಾಯುಕ್ತಾ ಕಚೇರಿಯಲ್ಲಿ ನಡೆದ ವಿಚಾರಣೆಗೆ ಬಂದಿದ್ದ ಸಿದ್ದರಾಮಯ್ಯ, ಲೋಕಾಯುಕ್ತಾ ಕಚೇರಿಯಲ್ಲಿ ವಿಚಾರಣೆ ಎದುರಿಸಿದ ಬಳಿಕ ಹೊರನಡೆದಿದ್ದಾರೆ.
ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10ಗಂಟೆಗೆ ಲೋಕಾಯುಕ್ತಾ ಕಚೇರಿಗೆ ಆಗಮಿಸಿದ್ದರು,
ಸಿದ್ದರಾಮಯ್ಯ ಅವರು ಸುಮಾರು 2ಗಂಟೆ ವಿಚಾರಣೆ ಬಳಿಕ ಅಂದರೆ ಸುಮಾರು ಮಧ್ಯಾಹ್ನ 12ಗಂಟೆಗೆ ಲೋಕಾಯುಕ್ತ ಕಚೇರಿಯಿಂದ ಹೊರಬಂದಿದ್ದಾರೆ. ಸುದೀರ್ಘ 2 ಗಂಟೆಗಳ ಕಾಲ ವಿಚಾರಣೆಯನ್ನು ಸಿಎಂ ಎದುರಿಸಿದ್ದಾರೆ.
ಮೂಲಗಳ ಪ್ರಕಾರ 30ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ವಿಚಾರಣೆಯಲ್ಲಿ ಲೋಕಾಯುಕ್ತ ಎಸ್ಪಿ ಉದೇಶ್ ಸಿಎಂಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಎಲ್ಲದಕ್ಕೂ ಸಿಎಂ ಸಾವಧಾನವಾಗಿ ಉತ್ತರಿಸಿದ್ದಾರೆ ಜತೆಗೆ ವಿಚಾರಣೆ ನಂತರ ಲೋಕಾಯುಕ್ತ ಕಚೇರಿಯಿಂದ ಮುಗುಳ್ನಗುತ್ತಲೇ ಸಿಎಂ ಹೊರನಡೆದಿದ್ದಾರೆ.
50:50 ಅನುಪಾತದಲ್ಲಿ 14 ಸೈಟ್ ಪಡೆದ ಆರೋಪ ಸಿಎಂ ಪತ್ನಿ ಪಾರ್ವತಿ ಮೇಲೆ ಇದೆ. ಈ ಬಗ್ಗೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ಇದೀಗ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ.