
ಬೆಂಗಳೂರು ಗ್ರಾಮಾಂತರ: 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಧಿವೃದ್ದಿ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ದೇವನಹಳ್ಳಿ ತಾಲೂಕಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ವತಿಯಿಂದ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಾಲೂಕಿನ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ್ ಬಾಬು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (PMKSY-PDMC) ಹನಿ ನೀರಾವರಿ ಘಟಕಗಳನ್ನು ನಿರ್ಮಿಸಿಕೊಳ್ಳಬಹುದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ (NHM) ಹಾಗೂ ಸಮಗ್ರ ತೋಟಗಾರಿಕೆ ಅಧಿವೃದ್ದಿ ಯೋಜನೆಯಡಿ(CHD) ರೈತರು ದ್ರಾಕ್ಷಿ, ಮಾವು, ದಾಳಿಂಬೆ, ಡ್ರ್ಯಾಗನ್ ಪ್ರೊಟ್,ಬೆಣ್ಣೆ ಹಣ್ಣು,ಹೈಬ್ರಿಡ್ ತರಕಾರಿ ಹಾಗೂ ಹೂವಿನ ಬೆಳೆಗಳಾದ ಬಲ್ಬಸ್ ಪುಷ್ಪಗಳು, ಟ್ಯೂಬ್ರೋಸ್, ಧವನ, ಮಲ್ಲಿಗೆ ಹೂವುಗಳನ್ನು ಬೆಳೆಯಬಹುದು.
ಹಾಗೇ ರೋಗ ಮತ್ತು ಕೀಟ ನಿಯಂತ್ರಣ, ಪ್ಲಾಸ್ಟಿಕ್ ಹೊದಿಕೆ, ಪ್ಲಾಸ್ಟಿಕ್ ಟನೆಲ್ಸ್, ಸೆನ್ಸರ್ ಆಧಾರಿತ ಮಷಿನ್ಗಳು, ಪ್ರಾಥಮಿಕ ಸಂಸ್ಕರಣ ಘಟಕಗಳು, ಪಾಲಿ ಮನೆ, ಪಕ್ಷಿ ನಿರೋಧಕ ಬಲೆಗಳು, ಜೇನುಸಾಕಾಣಿಕೆ, ಘಟಕಗಳನ್ನು ನಿರ್ಮಿಸಿಕೊಳ್ಳಲು ಹಾಗೂ ಕೃಷಿಗೆ ಸಂಬಂಧಪಟ್ಟ ಯಂತ್ರೋಪಕರಣಗಳ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಜೂ.13ರಒಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಮಲ್ಲಿಕಾರ್ಜುನ್ ಬಾಬು ಬಿ.ಎಂ – 9480461234, ಹಾಗೂ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕುಂದಾಣ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಪೂರ್ಣಿಮ ಬಾಬು – 8867413260.
ವಿಜಯಪುರ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಆದರ್ಶ್ ಆರ್.ಕೆ. – 8722487173, ಕಸಬಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶ್ ಕುಮಾರ್ ಟಿ.ಜಿ – 7975888212, ಚನ್ನರಾಯಪಟ್ಟಣ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಕವಿತಾ ಎಸ್ ಪೂಜಾರಿ – 7259612750 ಗೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
Related
