CrimeNEWSನಮ್ಮರಾಜ್ಯ

BMTC ಘಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕನ ಕುಟುಂಬ ಪರನಿಂತ ನೌಕರರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈ ಕೋರ್ಟ್‌ ತಡೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬಿಎಂಟಿಸಿ ಚಾಲಕನ ಕುಟುಂಬ ಪರನಿಂತ ಸಂಸ್ಥೆಯ ನೌಕರರು ಮತ್ತು ಎಎಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಪೊಲೀಸ್‌ ಪ್ರಕರಣದಲ್ಲಿನ 8 ಮಂದಿಗೆ   ಇಂದು ಹೈ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಇದೇ 2024ರ ಮಾರ್ಚ್‌5ರಂದು 46ನೇ ಎಸಿಎಂಎಂ ನ್ಯಾಯಾಲಯ ಕೆಲ ಷರತ್ತುಗಳೊಂದಿಗೆ ಜಾಮೀನು ಕೂಡ ಮಂಜೂರು ಮಾಡಿತ್ತು. ಬಳಿಕ ಪ್ರಕರಣಕ್ಕೆ ತಡೆಯಾಜ್ಞೆಕೋರಿ ಹೈ ಕೋರ್ಟ್‌ಮೆಟ್ಟಿಲೇರಿದ್ದರು.

ಮಂಗಳವಾರ ಹೈ ಕೋರ್ಟ್‌ನ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠದಲ್ಲಿ ಪ್ರಕರಣ ಸಂಬಂಧ ಆರೋಪಿತರ ಪರ ಸುಪ್ರೀಂ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ. ಶಿವರಾಜು ಅವರು ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.

ಸಂಸ್ಥೆಯ ನೌಕರರಾದ ಎಚ್‌.ಡಿ.ನಾಗೇಂದ್ರ, ಎಚ್‌.ಆರ್‌.ಜಗದೀಶ್‌, ಪಿ.ಹರೀಶ್‌ಗೌಡ, ಎನ್‌.ಸುಧಾಕರರೆಡ್ಡಿ, ಲಕ್ಷ್ಮಣ ಮಗವೀರ್‌ಸೇರಿದಂತೆ 8 ಮಂದಿ ಹೈ ಕೋರ್ಟ್‌ ಮೆಟ್ಟಿಲ್ಲೇರಿದ್ದರು. ಹೈ ಕೋರ್ಟ್‌ನಲ್ಲಿ ಈ ಪ್ರಕರಣ ರದ್ದು ಕೋರಿ ಅರ್ಜಿ ಹಾಕಲಾಗುವುದು ಎಂದು ವಕೀಲ ಶಿವರಾಜು ಅವರು ಮೇನಲ್ಲೇ ತಿಳಿಸಿದ್ದರು.

ನೌಕರರಿಂದ ಯಾವುದೆ ಫೀ ಪಡೆಯದೆ ಉಚಿತವಾಗಿ ವಕಾಲತ್ತು ವಹಿಸಿ ಇಂದು ಸ್ಟೇ ತಂದಿರುವುದಕ್ಕೆ ವಕೀಲರಿಗೆ ನಾವು ಸದಾ ಅಭಾರಿಯಾಗಿದ್ದೇವೆ ಎಂದು ಸಂಸ್ಥೆ ಮಾಜಿ ನೌಕರ ಎಚ್‌.ಆರ್‌.ಜಗದೀಶ್‌ತಿಳಿಸಿದ್ದಾರೆ.

ಪ್ರಕರಣವೇನು?: ಬಿಎಂಟಿಸಿ ಘಟಕ -21ರಲ್ಲಿ ಮೇಲಧಿಕಾರಿಗಳ ಕಿರುಕುಳದಿಂದ ನೊಂದು ಚಾಲಕ ಹೊಳೆ ಬಸಪ್ಪ ಎಂಬುವರು 30 ಅಗಸ್ಟ್‌ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಾಲಕನ ಆತ್ಮಹತ್ಯೆಗೆ ಕಾರಣವಾದ ಅಧಿಕಾರಿಗಳನ್ನು ವಜಾ ಮಾಡಬೇಕು ಹಾಗೂ ಮೃತರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಅಂದು ಹೋರಾಟ ಮಾಡಲಾಗಿತ್ತು.

ಚಾಲಕ ಹೊಳೆ ಬಸಪ್ಪ ಘಟಕದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಎಪಿ ಮುಖಂಡರು ಸೇರಿದಂತೆ ಅಂದು ರಾತ್ರಿ ವರೆಗೂ ಹೋರಾಟ ಮಾಡಿದ 19 ಮಂದಿ ವಿರುದ್ಧ ಬಿಎಂಟಿಸಿ ಅಧಿಕಾರಿಗಳು ಎಫ್‌ಐಆರ್‌ದಾಖಲಿಸಿದ್ದರು.

ನ್ಯಾಯ ಕೇಳಲು ಬಂದಿದ್ದ ನೌಕರರು ಮತ್ತು ಎಎಪಿ ಮುಖಂಡರ ವಿರುದ್ಧವೆ ಎಫ್‌ಐಆರ್‌ದಾಖಲಿಸಲಾಗಿತ್ತು. ಅಂದು ಸಂಸ್ಥೆಯ ಅಧಿಕಾರಿಗಳು ತಪ್ಪು ಮಾಡಿದವರನ್ನು ಬಿಟ್ಟು ಅಮಾಯಕರ ವಿರುದ್ಧ ಪೊಲೀಸ್‌ಪ್ರಕರಣ ದಾಖಲಿಸಿದ್ದರಿಂದ ಇಂದುಯಾವುದೇ ತಪ್ಪು ಮಾಡದವರನ್ನು ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದಾರೆ.

Leave a Reply

error: Content is protected !!
LATEST
ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ: ತುಷಾರ್ ಗಿರಿನಾಥ್ ನಲ್‌ಜಲ್ ಮಿತ್ರ ತರಬೇತಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅನುರಾಧ ಚಾಲನೆ ನ.19 ರಿಂದ ಡಿ.10ರವರೆಗೆ ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನಕ್ಕೆ ಚಾಲನೆ BMTC ಘಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕನ ಕುಟುಂಬ ಪರನಿಂತ ನೌಕರರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈ ಕೋರ್ಟ್‌ ... KKRTC: ತಡರಾತ್ರಿ 20ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೋರಿದ 15ಕ್ಕೂ ಹೆಚ್ಚು ದರೋಡೆಕೋರರು- ತಪ್ಪಿದ ಭಾರಿ ಅನಾಹುತ! KSRTC: ವೇತನ ಹೆಚ್ಚಳ ಸಂಬಂಧ ಗೌಪ್ಯ ಸಭೆಗೆ ಸಜ್ಜಾದ ಅಧಿಕಾರಿಗಳು-ಸಿಬ್ಬಂದಿ ವರ್ಗ ಸಮಾಜ ಪರಿವರ್ತನೆಗೆ ದಾಸಶ್ರೇಷ್ಠ ಕನಕರ ದಾರಿಯಲ್ಲಿ ನಡೆಯೋಣ: ಸಚಿವ ಮುನಿಯಪ್ಪ ಬಸ್‌ ಪಾಸ್‌ ತೋರಿಸದೆ ನಿರ್ವಾಹಕರಿಗೆ ಅವಾಜ್‌ ಹಾಕಿ ಬಸ್‌ ನಿಲ್ಲಿಸಿ ಗಲಾಟೆ ಮಾಡಿದ ಕಿರಾತಕ ! 2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌