Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 4ನಿಗಮಗಳ ಅಧೀಕ್ಷಕರ ವೇತನ ಶ್ರೇಣಿಯಲ್ಲಿ ಭಾರಿ ವ್ಯತ್ಯಾಸ – ಸರಿಪಡಿಸಲು ಆದೇಶಿಸಿ – ಸಾರಿಗೆ ಸಚಿವರಿಗೆ ಮನವಿ

ವಿಜಯಪಥ ಸಮಗ್ರ ಸುದ್ದಿ
  • ಎರಡೆರಡು ಕಡೆ ನಮಗೆ ವೇತನ ತಾರತಮ್ಯ
  • ಒಂದು ಸರ್ಕಾರಿ ನೌಕರರಿಗಿಂತ ಸಾರಿಗೆ ನೌಕರರಿಗೆ ಶೇ.40 ರಿಂದ 45 ರಷ್ಟು ಕಡಿಮೆ
  • ಮೇಲ್ವಿಚಾರಕ ಹಾಗೂ ಅಧೀಕ್ಷಕರಿಗೆ ಮೂಲ ವೇತನ ನಿಗದಿಪಡಿಸುವಲ್ಲಿನ ತಪ್ಪು
  • ಸಂಸ್ಥೆಯ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿಯೂ ಸಹ ಹೊಡೆತ
  • ಶೇ.30 ರಿಂದ 35 ರಷ್ಟು ವೇತನ ಕಡಿಮೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಮೇಲ್ವಿಚಾರಕ/ ಅಧೀಕ್ಷಕರ ವೇತನ ಶ್ರೇಣಿಯಲ್ಲಿ ಭಾರಿ ವ್ಯತ್ಯಾವಿದ್ದು ಅದನ್ನು ಸರಿಪಡಿಸುವ ಮೂಲಕ ನಮಗೆ ನ್ಯಾಯಯುತ ಸೌಲಭ್ಯಗಳನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ವಿಧಾನ ಸೌಧದ ಸಾರಿಗೆ ಸಚಿವಾಲಯಕ್ಕೆ ನಿಗಮಗಳ ಮೇಲ್ವಿಚಾರಕ/ ಅಧೀಕ್ಷಕರು ಲಿಖಿತ ಮನವಿ ಸಲ್ಲಿಸಿದ್ದು, ನಾವು ನಾಲ್ಕೂ ನಿಗಮದ ಲೆಕ್ಕಪತ್ರ, ಸಿಬ್ಬಂದಿ, ಸಂಚಾರ, ತಾಂತ್ರಿಕ, ಅಂಕಿಸಂಖ್ಯೆ, ಉಗ್ರಾಣ, ಭದ್ರತಾ. ಕಾಮಗಾರಿ, ಗಣಕಯಂತ್ರ ಹೀಗೆ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಮೇಲ್ವಿಚಾರಕ/ ಅಧೀಕ್ಷಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ.

ಆದರೆ, ವೇತನದ ವಿಷಯದಲ್ಲಿ ನಮಗೆ ಎಲ್ಲರಿಗಿಂತ ಹೆಚ್ಚು ಅನ್ಯಾಯವಾಗುತ್ತ ಬಂದಿರುತ್ತಿದೆ. ಕಾರಣ ವಿಷಯವನ್ನು ಚರ್ಚೆಗೆ ಒಳಪಡಿಸಿ ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ.

ಸರಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ವೈಜ್ಞಾನಿಕ ತಳಹದಿ ಮೇಲೆ ವೇತನವನ್ನು ನಿರ್ಮಿಸಿಕೊಂಡು ಬರಲಾಗಿದೆ. ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗಿರುವ ಪ್ರಾರಂಭಿಕ ಮೂಲ ವೇತನದ ಅಂತರ, ಮುಂದಿನ ಎಲ್ಲ ಹುದ್ದೆಗಳಿಗೆ ನೆಲಗಟ್ಟಾಗಿ ನಿಂತಂತೆ ಭಾಸವಾಗುತ್ತದೆ. ಆಯಾ ಹುದ್ದೆಗಳ ವಿದ್ಯಾರ್ಹತೆ, ಜವಾಬ್ದಾರಿ, ಹೊಣೆಗಾರಿಕೆಗೆ ತಕ್ಕಂತೆ ಹೈರಾರಕಿ ಪ್ರಕಾರ ಹಂತಗಳನ್ನು ಪ್ರಮಾಣೀಕರಿಸುತ್ತ ಬರಲಾಗಿದೆ.

ಆದರೆ ಸಾರಿಗೆ ಸಂಸ್ಥೆಯಲ್ಲಿ ಆ ಯಾವ ನಿಯಮವನ್ನು ಪಾಲಿಸಲಾಗಿಲ್ಲ. ಯಾವ ದೃಷ್ಟಿಕೋನವನ್ನು ಪರಿಗಣಿಸಿಲ್ಲ. ಮನಸ್ಸಿಗೆ ಬಂದಂತೆ ಹಂತಗಳನ್ನು ನಿರ್ಮಿಸಿಕೊಂಡು ಬರಲಾಗಿದೆ. ಇದರಿಂದ ಮೇಲ್ವಿಚಾರಕ, ಅಧೀಕ್ಷಕ, ಅಧಿಕಾರಿ-2, ಹುದ್ದೆಗಳಿಗೆ ಕ್ರಮವಾಗಿ ರೂ. 26810/-, 28850/-, 42600/- ಮೂಲವೇತನ ನಿಗದಿಪಡಿಸಲಾಗಿದೆ.

ಮೇಲ್ವಿಚಾರಕ ಹುದ್ದೆಯಿಂದ ಅಧೀಕ್ಷಕ ಹುದ್ದೆಗೆ 11.75% ಅಂತರವಿದ್ದರೆ, ಅಧೀಕ್ಷಕ ಹುದ್ದೆಯಿಂದ ಅಧಿಕಾರಿ ದರ್ಜೆ-2 ಹುದ್ದೆಗೆ ಇರುವ ಅಂತರ 47.66%. ಆಗಿದೆ. ಹುದ್ದೆ ಹುದ್ದೆಯ ನಡುವೆ ಇಷ್ಟು ದೊಡ್ಡ ಮಟ್ಟದ ಅಂದರೆ 47.66% ರಷ್ಟು ಅಂತರ ಯಾವ ನಿಗಮ ಮಂಡಳಿಗಳಲ್ಲಿ, ಯಾವ ಇಲಾಖೆಗಳಲ್ಲಿ ಕಾಣಲು ಸಿಗುವುದಿಲ್ಲ.

ನಮ್ಮಲ್ಲಿ ಮೇಲ್ವಿಚಾರಕ ಹಾಗೂ ಅಧೀಕ್ಷಕರಿಗೆ ಮೂಲ ವೇತನ ನಿಗದಿಪಡಿಸುವಲ್ಲಿ ತಪ್ಪಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ.47.66% ರಲ್ಲಿ ಶೇ.35 ರಷ್ಟು ಮೇಲ್ವಿಚಾರಕ/ಅಧೀಕ್ಷಕರಿಗೆ ವೈಜ್ಞಾನಿಕವಾಗಿ ಹಂಚಿಕೆಯಾಗಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ಸಂಗತಿಯನ್ನು ಪುಷ್ಠಿಕರಿಸುವ ವಿವಿಧ ಇಲಾಖೆ, ನಿಗಮ ಮಂಡಳಿಗಳ ವೇತನ ಶ್ರೇಣಿಗಳ ಪಟ್ಟಿಯನ್ನು ತಮ್ಮ ಅವಗಾಹನೆಗೆ ಅರ್ಪಿಸಲಾಗಿದೆ.

ಏಳನೇ ವೇತನ ಹೋಲಿಸಿಕೊಂಡಲ್ಲಿ ಸಾರಿಗೆ ನೌಕರರಿಗೆ ಶೇ.40 ರಿಂದ 45 ರಷ್ಟು ಕಡಿಮೆ ಇದೆ. ಇಷ್ಟು ಕಡಿಮೆ ವೇತನದಲ್ಲಿ ಜೀವನ ಸಾಗಿಸುವುದು ದುಸ್ಥರವಾಗಿರುವ ಸಂದರ್ಭದಲ್ಲಿ ಸಂಸ್ಥೆಯ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿಯೂ ಸಹ ಹೊಡೆತ ನೀಡಲಾಗಿದೆ. ಶೇ.30 ರಿಂದ 35 ರಷ್ಟು ವೇತನ ಕಡಿಮೆ ನೀಡುವ ಮೂಲಕ ಮತ್ತಷ್ಟು ಕಷ್ಟದ ಕೂಪಕ್ಕೆ ತಳ್ಳಲಾಗಿದೆ.

ಕಾರಣ ತಾವು ಈ ತಾರತಮ್ಯ ನಿವಾರಿಸಲು ಕೂಡಲೇ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ಹೊರಡಿಸಬೇಕು. ಮೇಲ್ವಿಚಾರಕ/ಅಧೀಕ್ಷಕ ವರ್ಗಕ್ಕೆ ಆಗಿರುವ ವೇತನ ತಾರತಮ್ಯ ನಿವಾರಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿ, ಮನವಿ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ