Please assign a menu to the primary menu location under menu

NEWSನಮ್ಮಜಿಲ್ಲೆ

ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ

ವಿಜಯಪಥ ಸಮಗ್ರ ಸುದ್ದಿ

ಬೆಂ.ಗ್ರಾ.: ಉತ್ತಮ ಆಡಳಿತ ಸಪ್ತಾಹ-2024 ರ ಅಂಗವಾಗಿ “ಇಂದೇ ಸಕಾಲ”ದಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಅನುಮೋದಿಸಿ ಜಿಲ್ಲಾಧಿಕಾರಿಗಳಿಂದ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಉತ್ತಮ ಆಡಳಿತ ಸಪ್ತಾಹ-2024 ವು 19.12.2024 ರಿಂದ 24.12.2024 ರವರೆಗೆ ನಡೆಯಲಿದೆ.  “ಪ್ರಶಾಸನ್ ಗಾಂವ್ ಕಿ ಓರೆ(ಗ್ರಾಮದ ಕಡೆಗೆ ಆಡಳಿತ)”  ಎಂಬ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಸಾರ್ವಜನಿಕ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಗ್ರಾಮದ ಗಾಂಧಿವಾದಿ ಹಾಗೂ ಪರಿಸರ ಸಂರಕ್ಷಕರಾದ ಕೆ.ಎಸ್ ಕೃಷ್ಣಪ್ಪ ಹಾಗೂ ದೊಡ್ಡಬಳ್ಳಾಪುರ ನಗರದ ನಿವೃತ್ತ ಶಿಕ್ಷರಾದ ಎಸ್.ಎಸ್ ರಾಜೇಂದ್ರ ಅವರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಮಾತನಾಡಿ, ಜಿಲ್ಲೆಯ ಎಲ್ಲಾ ಹಿರಿಯ ನಾಗರಿಕರು “ಇಂದೇ ಸಕಾಲ” ವಿಶೇಷ ಯೋಜನೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಪಡೆದು ವಿನೂತನ ಕಾರ್ಯಕ್ರಮದ ಸೌಲಭ್ಯಗಳನ್ನು ಪಡೆಯಲು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ, ಇಲಾಖೆಯ ಸಿಬ್ಬಂದಿ ರವಿಕುಮಾರ್, ಪ್ರಸನ್ನ ಮತ್ತು ಸಮಾಜಕಾರ್ಯ ಪ್ರಶಿಕ್ಷಣಾರ್ಥಿ ಮನೋಜ್ ಬಿ.ಎಚ್ ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ