ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ಗೆದ್ದಿರುವ ಶಿವಣ್ಣ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರುವ ಜತೆಗೆ ದರ್ಶನವನ್ನೂ ಕೊಟ್ಟಿದ್ದಾರೆ. ಜತೆಗೆ ಕ್ಯಾನ್ಸರ್‌ನಿಂದ ಮುಕ್ತರಾಗಿರುವ ಕುರಿತು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಅಮೆರಿಕದಿಂದಲೇ ಅಭಿಮಾನಿಗಳಿಗೆ ಸಂದೇಶವೊಂದನ್ನು ಶಿವಣ್ಣ ದಂಪತಿ ರವಾನಿಸಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನೀವೆಲ್ಲರೂ ಮಾಡಿದ ಪ್ರಾರ್ಥನೆಯಿಂದ ಶಿವರಾಜ್‌ಕುಮಾರ್ ಎಲ್ಲ ರಿಪೋರ್ಟ್ ನೆಗೆಟಿವ್ ಬಂತು. ಅವರೀಗ ಕ್ಯಾನ್ಸರ್ ಫ್ರೀ ಅಂತ ವೈದ್ಯರು ಅಫಿಷಿಯಲಿ ಹೇಳಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ. ಇದನ್ನೂ ನಾನು ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ.
ಬಳಿಕ ಶಿವಣ್ಣ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಆಗುತ್ತೆ ಮಾತನಾಡಬೇಕಾದರೆ, ಎಲ್ಲಿ ಎಮೋಷನಲ್ ಆಗಿ ಬಿಡ್ತೀನಿ ಅಂತ. ಇಲ್ಲಿಂದ ಹೋಗುವಾಗ ಎಮೋಷನಲ್ ಆಗಿದ್ದೇ, ಭಯ ಅನ್ನೋದು ಇದ್ದೇ ಇರುತ್ತದೆ. ಆ ಭಯ ಕಮ್ಮಿ ಮಾಡೋಕೆ ಎಂದೇ ಅಭಿಮಾನಿ ದೇವರುಗಳಿದ್ದಾರೆ.
ವೈದ್ಯರು ನನ್ನ ನೋಡಿಕೊಂಡ ರೀತಿಯಿಂದ ಇನ್ನಷ್ಟು ಧೈರ್ಯ ಬಂತು. ’45’ ಚಿತ್ರದ ಶೂಟಿಂಗ್ ಮಾಡುವಾಗ ಕಿಮೋ ಥೆರಾಫಿಯಲ್ಲಿ ಕೆಲಸ ಮಾಡಿದ್ದೀನಿ. ಕ್ಲೈಮ್ಯಾಕ್ಸ್ ಫೈಟ್ ಎಲ್ಲ ಮಾಡಿದ್ದೇನೆ ಎಂದು ನಟ ಹಂಚಿಕೊಂಡರು.
ಅಮೆರಿಕಗೆ ಚಿಕಿತ್ಸೆಗೆ ಹೊರಡುವ ಡೇಟ್ ಹತ್ತಿರ ಬಂದಾಗ ಸ್ವಲ್ಪ ಒತ್ತಡ ಜಾಸ್ತಿ ಆಯಿತು. ಆದರೆ ಸದಾ ಪತ್ನಿ ಗೀತಾ ಮತ್ತು ಮಗಳು ನಿವಿ ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಯಾವುದೇ ಒತ್ತಡಕ್ಕೂ ಒಳಗಾಗದೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಚಿಕಿತ್ಸೆ ಮಾಡಿದ ವೈದ್ಯ ಮನೋಹರ್ ಅವರು ಮಗುವಿನಂತೆ ನನ್ನ ನೋಡಿಕೊಂಡರು. ಯೂರಿನರಿ ಬ್ಲಾಡ್ ತೆಗೆದು ಹೊಸದು ಬ್ಲಾಡ್ ಹಾಕಿದ್ದಾರೆ. ಯಾರು ಗಾಬರಿ ಆಗಬೇಡಿ ನಾನು ಆರಾಮ ಆಗಿದ್ದೇನೆ. ಐ ವಿಲ್ ಬಿ ಬ್ಯಾಕ್, ಡಬಲ್ ಪವರ್‌ನೊಂದಿಗೆ ಬರುತ್ತೇನೆ. ಎಲ್ಲ ನನ್ನ ಅಭಿಮಾನಿ ದೇವರುಗಳಿಗೂ ಧನ್ಯವಾದಗಳು ಎಂದು ಶಿವಣ್ಣ ಹೇಳಿದ್ದಾರೆ.
Related
You Might Also Like
KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೌಕರರ ಹಲವಾರು ವರ್ಷಗಳ ಕನಸು ಇಂದು ಅಧಿಕೃತವಾಗಿ ನನಸಾಗಿದ್ದು, ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ...
NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ
ಹುಬ್ಬಳ್ಳಿ: ಉದ್ದೇಶ ಪೂರ್ವಕವಾಗಿ ವಾಹನ ತಪಾಸಣೆ ನಡೆಸಿ ನನ್ನನ್ನು ಅಮಾನತು ಮಾಡುವ ಸಂಚು ರೂಪಿಸಲಾಗಿದೆ ಎಂದು ಮನನೊಂದ ನಿರ್ವಾಹಕರೊಬ್ಬರು ಡ್ಯೂಟಿ ಮೇಲೆ ಇದ್ದಾಗಲೇ ವಿಸ ಸೇವಿಸಿ ಆತ್ಮಹತ್ಯೆಗೆ...
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ
ಬೆಂಗಳೂರು: ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದ್ದು, ಡೆಂಗ್ಯೂ, ಉಸಿರಾಟ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಕ್ರಿಯಾ ಆಸ್ಪತ್ರೆ ಮತ್ತು ಅದ್ವಿಕಾ...
ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ
ಗದಗ: ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತೃ...
ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ
ಬೆಂಗಳೂರು: ಅನಿಲ್ ಗುನ್ನಾಪೂರ ಅವರು ಬರೆದ 'ಸರ್ವೇ ನಂಬರ್-97' ಎಂಬ ಕಥಾಸಂಕಲನವನ್ನು ಹೊಂಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ,...
ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ?
ಆರೋಗ್ಯ ಮಾಹಿತಿ: ಜ್ವರದ ಸಮಯದಲ್ಲಿ ಹೆಚ್ಚು ಬೆವರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಈ ವೇಳೆ ಎಳನೀರು ಕುಡಿಯುವುದರಿಂದ ನೈಸರ್ಗಿಕವಾಗಿ ದೇಹಕ್ಕೆ ನೀರನ್ನು ಒದಗಿಸಿ, ನಿರ್ಜಲೀಕರಣವನ್ನು ತಡೆಯುತ್ತದೆ....
ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್ ದರ ಹೆಚ್ಚಳ: ಪಟ್ಟಿ ರಿಲೀಸ್ ಮಾಡಿದ ಸಾರಿಗೆ ಸಚಿವ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳ ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಿರುವುದನ್ನು ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಂಡಿಸಿ ಸರ್ಕಾರದ ವಿರುದ್ಧ...
KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ
ಬೆಂಗಳೂರು: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ...
APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿಯೋಗ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ತಿಳಿದುಕೊಳ್ಳಲು ಆಂಧ್ರಪ್ರದೇಶ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು...
ಜ.19ರಂದು ರೈತರ ಮಕ್ಕಳಿಗಾಗಿ ಉದ್ಯೋಗ ಮೇಳ ಆಯೋಜನೆ- 50 ಕಂಪನಿಗಳು ಭಾಗಿ
ಪಿರಿಯಾಪಟ್ಟಣ್ಣ: ರೈತರ ಮಕ್ಕಳಿಗಾಗಿ ಜನವರಿ 19ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರಿಗೆ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ...
NWKRTC: ಕರ್ತವ್ಯದ ವೇಳೆ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿರುವ TA, ATI, TI, ATSಗಳು
ಡ್ಯೂಟಿ ಮೇಲೆ ವಂದ ಮಾಡಲಿಕ್ಕೂ ಪರದಾಟ ವಾರಗಟ್ಟಲೇ ಮನೆಯಿಂದ ಹೊಗುಳಿಯುವ ಶಿಕ್ಷೆ ಅನಾರೋಗ್ಯಕ್ಕೊಳಗಾದ ಕುಟುಂಬದವರ ನೋಡಲಾಗದ ಪರಿಸ್ಥಿತಿ 8ಗಂಟೆ ಬದಲಿಗೆ 12-14 ಗಂಟೆಗಳ ಕಾಲ ಡ್ಯೂಟಿ ಹುಬ್ಬಳ್ಳಿ:...