NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: 2024-25ನೇ ಸಾಲಿನ ಐಚ್ಛಿಕ ಭ.ನಿ. ಚೀಟಿಗಳ ಆನ್‌ಲೈನ್ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ: ನೌಕರರಿಗೆ CAO ಆದೇಶ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ಎಲ್ಲ ಅಧಿಕಾರಿಗಳ- ನೌಕರರ 2024-25ನೇ ಸಾಲಿನ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯನಿಧಿ ಚೀಟಿಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ತಿಳಿಸಿದ್ದಾರೆ.

ಇನ್ನು ಸಂಸ್ಥೆಯ ಎಲ್ಲ ವಿಭಾಗಗಳ ಅಧಿಕಾರಿ, ನೌಕರರು ತಮ್ಮ ಭವಿಷ್ಯ ನಿಧಿ ಚೀಟಿಗಳನ್ನು ಆನ್‌ಲೈನ್ ಮೂಲಕ ನೋಡುವ ಹಾಗೂ ಪ್ರಿಂಟ್ ಪಡೆಯುವ ವ್ಯವಸ್ಥೆಯನ್ನು ಮಾಡಲು ಮುಖ್ಯ ಗಣಕ ವ್ಯವಸ್ಥಾಪಕರಿಗೆ ಲಿಖಿತವಾಗಿ ತಿಳಿಸಲಾಗಿತ್ತು. ಅದರಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ಸಂಸ್ಥೆಯ ಎಲ್ಲ ವಿಭಾಗಗಳ ಅಧಿಕಾರಿಗಳು/ ನೌಕರರು 2024-25ನೇ ಸಾಲಿನ ಭವಿಷ್ಯ ನಿಧಿ / ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ಹೋಸ್ಟ್ ಮಾಡಿ ಆನ್‌ಲೈನ್ ಮೂಲಕ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಆದ್ದರಿಂದ ಎಲ್ಲರೂ pfnwkrtc.in ವೆಬ್ ಸೈಟ್ ಅನ್ನು ತೆರೆದು ಅವರ ಪಿಎಫ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು dd/mm/yyyy ಮಾದರಿಯಲ್ಲಿ ನಮೂದಿಸಿ 2024-25ನೇ ಸಾಲಿನ ಭವಿಷ್ಯ ನಿಧಿ / ಐಚ್ಛಿಕ ಭ.ನಿ ಚೀಟಿಗಳನ್ನು ವೀಕ್ಷಿಸಬಹುದಾಗಿದೆ ಹಾಗೂ Print ಅನ್ನು ಸಹ ಪಡೆಯಬಹುದಾಗಿದೆ.

ಈ ವಿಷಯವನ್ನು ವಿಭಾಗದ ಎಲ್ಲ ಘಟಕಗಳಲ್ಲಿ. ವಿಭಾಗೀಯ ಕಾರ್ಯಾಗಾರಗಳಲ್ಲಿ ಹಾಗೂ ಪ್ರಾದೇಶಿಕ ಕಾರ್ಯಾಗಾರದಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲ ಅಧಿಕಾರಿಗಳ ಹಾಗೂ ನೌಕರರ ಗಮನಕ್ಕೆ ತರಲು ಸೂಕ್ತ ಕ್ರಮವನ್ನು ಜರುಗಿಸಲು ತಿಳಿಸಿದ್ದಾರೆ.

ಮುಂದುವರಿದು 2024-25ನೇ ಸಾಲಿನಲ್ಲಿ ವಿಭಾಗಗಳಿಂದ ವರ್ಗಾವಣೆಗೊಂಡ ಹಾಗೂ F.W.C ಇತ್ಯರ್ಥಗೊಂಡ ಅಧಿಕಾರಿ / ನೌಕರರ ಭವಿಷ್ಯ ನಿಧಿ ಚೀಟಿಯನ್ನು ವಿಭಾಗಮಟ್ಟದಲ್ಲಿ ಬ್ಲಾಕ್ ಮಾಡಲು ಅವಕಾಶ ನೀಡಲಾಗಿದ್ದು ಅವುಗಳನ್ನು ಕಡ್ಡಾಯವಾಗಿ ಬ್ಲಾಕ್ ಮಾಡಬೇಕು ಎಂದು ತಿಳಿಸಿದ್ದಾರೆ.

ಈ ಸಂಬಂಧ ಕಾರ್ಯದರ್ಶಿ, ಭವಿಷ್ಯ ನಿಧಿ ನ್ಯಾಸ ಮಂಡಳಿ. ಕ.ರಾ.ರ.ಸಾರಿಗೆ ನಿಗಮ ಅವರಿಗೂ ಮಾಹಿತಿಗಾಗಿ ಕಳುಹಿಸಲಾಗಿದೆ. ಅಲ್ಲದೆ ಧರ್ಮದರ್ಶಿ, ಭವಿಷ್ಯ ನಿಧಿ ನ್ಯಾಸ ಮಂಡಳಿ, nwkrtc ಸಂಸ್ಥೆ ಅವರಿಗೂ ಮಾಹಿತಿಗಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!