Please assign a menu to the primary menu location under menu

CrimeNEWSದೇಶ-ವಿದೇಶ

ವಯನಾಡಲ್ಲಿ ಮಹಿಳೆ ಕೊಂದು ತಿಂದಿದ್ದ ಹೆಣ್ಣು ಹುಲಿ ಸಾವು

ವಿಜಯಪಥ ಸಮಗ್ರ ಸುದ್ದಿ

ವಯನಾಡ್‌: ಕೇರಳ ರಾಜ್ಯದ ವಯನಾಡ್ ಜನರ ನಿದ್ದೆಗೆಡಿಸಿ ನರಭಕ್ಷಕ ಹುಲಿ ಕೊನೆಗೂ ಜೀವ ಬಿಟ್ಟಿದೆ. ಈ ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳು ಅರಣ್ಯ ಸಿಬ್ಬಂದಿಯೇ ದಂಗಾಗುವಂತೆ ಮಾಡಿವೆ.

ವಯನಾಡ್‌ನ ಪಂಚಾರಕೊಲ್ಲಿಯಲ್ಲಿ ನರಭಕ್ಷಕನ ಹೆಜ್ಜೆ ಗುರುತು, ಹಾವಳಿ ಬೆಚ್ಚಿ ಬೀಳುವಂತೆ ಮಾಡಿತ್ತು. ಮಹಿಳೆಯನ್ನು ಕೊಂದಿದ್ದ ಹುಲಿಯನ್ನ ಕಂಡಲ್ಲಿ ಕೊಲ್ಲಲು ಜನರು ಒತ್ತಾಯ ಮಾಡಿದ್ದರು. ಆದರೆ ಅದೇ ನರಭಕ್ಷಕ ಹುಲಿ ಈಗ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದೆ.

ಪಂಚಾರಕೊಲ್ಲಿಯ ರಾಧಾ ಎಂಬ ಮಹಿಳೆ ಅರಣ್ಯಕ್ಕೆ ಕಾಫಿ ಬೀಜ ಸಂಗ್ರಹಕ್ಕೆ ತೆರಳಿದ್ದರು. ಆಗ ದಾಳಿ ಮಾಡಿದ್ದ ನರಭಕ್ಷಕ ಹುಲಿ ರಾಧಾಳನ್ನ ಕೊಂದು ತಿಂದಿತ್ತು. ಹುಲಿಯೇ ಮಹಿಳೆಯನ್ನು ಕೊಂದಿದೆ ಎಂದು ರಾಜ್ಯ ಸರ್ಕಾರವೇ ನರಭಕ್ಷಕ ಹುಲಿ ಎಂದು ಘೋಷಿಸಿತ್ತು. ಇತ್ತ ಮಹಿಳೆಯನ್ನು ಕೊಂದ ಹುಲಿಯ ಸೆರೆಗೆ ಜನ ಪ್ರತಿಭಟನೆಯನ್ನು ನಡೆಸಿದ್ದರು.

ಆದರೆ ಸರ್ಕಾರ ಮಾತ್ರ ಅದನ್ನು ಕೊಲ್ಲಲು ಅವಕಾಶ ನೀಡಿರಲಿಲ್ಲ. ಈಗ ಅದೇ ಹುಲಿ ಸತ್ತುಬಿದಿದೆ. ಇದು ಹೇಗೆ ಮೃತಪಟ್ಟಿದೆ ಎಂಬುವುದು ಮಾತ್ರ ತಿಳಿದಿಲ್ಲ. ಇನ್ನು 2 ದಿನಗಳು ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಹುಲಿ ಕೇರಳದ ಪಿಲಕಾವುವಿನ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದೆ. ನಾಲ್ಕರಿಂದ 5 ವರ್ಷ ವಯಸ್ಸಿನ ಹೆಣ್ಣು ಹುಲಿ ಇದಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿರುವ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು ಈ ವೇಳೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಶಾಕ್ ಆಗಿದ್ದಾರೆ. ಹುಲಿ ಹೊಟ್ಟೆಯಲ್ಲಿ ಪಂಚಾರಕೊಲ್ಲಿಯಲ್ಲಿ ಮೃತಪಟ್ಟಿದ್ದ ರಾಧಾಳ ಕಿವಿಯೋಲೆ, ಕೂದಲು, ಬಟ್ಟೆ ಪತ್ತೆಯಾಗಿದೆ. ಇನ್ನು ಈ ಹುಲಿ ಮತ್ತೊಂದು ಹುಲಿಯ ದಾಳಿಯಿಂದ ಮೃತಪಟ್ಟಿದೆ ಎನ್ನಲಾಗುತ್ತಿದೆ.

ಹುಲಿ ದಾಳಿಗೆ ಬಲಿಯಾದ ರಾಧಾ ಅವರ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಯನಾಡ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಧಾ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇಂದು ರಾಧಾ ಅವರ ಮನೆಗೆ ಭೇಟಿ ಕೊಟ್ಟ ಪ್ರಿಯಾಂಕಾ ರಾಧಾ ಅವರ ಮಕ್ಕಳನ್ನು ಸಮಾಧಾನಪಡಿಸಿದರು.

Leave a Reply

error: Content is protected !!
LATEST
ಮೈಕ್ರೋ ಫೈನಾನ್ಸ್ ಪ್ರಕರಣದಿಂದ ಸಾವು - ಸರ್ಕಾರಿ ಕಾರ್ಯಕ್ರಮಗಳ ವೈಫಲ್ಯಕ್ಕೆ ಸಾಕ್ಷಿ ಎಂದ ಎಚ್‌ಡಿಕೆ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಕ್ಕೆ ಕಠಿಣ ನಿಯಮ ರೂಪಿಸಿ: ಸಚಿವ ಶಿವರಾಜ್ ತಂಗಡಗಿ ಪಡಿತರ ಚೀಟಿಯಲ್ಲಿ ಕುಟುಂಬದವರ ಹೆಸರು ಸೇರ್ಪಡೆಗೆ ಅವಕಾಶ ನೀಡಿದ ಆಹಾರ ಇಲಾಖೆ ನಿವೃತ್ತ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: 7ನೇ ವೇತನ ಆಯೋಗದ ಪಿಂಚಣಿ ಮಂಜೂರು ಮಾಡಿ ಆದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸಾರಿಗೆ ನೌಕರರಿಗೆ ಸಮಾನ ವೇತನ ಎಂದು ಹೇಳಿದ್ದೇವೆ: ಸಾರಿಗೆ ಸಚಿವ ರಾಮಲಿಂಗಾರೆ... ಚಲಿಸುತ್ತಿದ್ದ ಬಸ್‌ ಹತ್ತಲು ಹೋಗಿ ಮುಗ್ಗರಿಸಿ ಬಿದ್ದು ಪ್ರಾಣ ಕಳೆದುಕೊಂಡ ಯುವತಿ ಸಾರಿಗೆ ನೌಕರರಿಂದ ಮನವಿ ಪತ್ರ ಸಲ್ಲಿಸುವ ಚಳವಳಿ ಆರಂಭ: ಸಿಎಂ, ಸಾರಿಗೆ ಮಂತ್ರಿ, ನಾಲ್ಕೂ ನಿಗಮಗಳ ಎಂಡಿಗಳಿಗೆ ಸಲ್ಲಿಕೆ 110 ಹಳ್ಳಿಗಳ ಕೊಳವೆ ಬಾವಿಗಳು ಜಲಮಂಡಳಿ ಸುಪರ್ದಿಗೆ: ತುಷಾರ್ ಗಿರಿನಾಥ್ ವಯನಾಡಲ್ಲಿ ಮಹಿಳೆ ಕೊಂದು ತಿಂದಿದ್ದ ಹೆಣ್ಣು ಹುಲಿ ಸಾವು ಬಡವರಿಗೆ ನೆರವಾಗುತ್ತಿವೆ ಪಂಚ ಗ್ಯಾರಂಟಿ ಯೋಜನೆಗಳು: ಸಚಿವ ಮಧುಬಂಗಾರಪ್ಪ