ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆಯ ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಯುವತಿಯೊಬ್ಬಳು ಮುಗ್ಗರಿಸಿ ಬಿದ್ದ ಪರಿಣಾಮ ಆಕೆಯ ಮೇಳೆ ಬಸ್ ಹಿಂದಿನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಆಂಧ್ರಪ್ರದೇಶದ ಅನಂತಪುರದ ಹಾಲಿ ನಗರದ ಕತ್ರಿಗುಪ್ಪೆಯ ನಿವಾಸಿ ಮೋನಿಕಾ (20) ಅವಸರದಿಂದ ಹೋಗಿ ಮೃತಪಟ್ಟ ಯುವತಿ.
ಕತ್ರಿಗುಪ್ಪೆಯಲ್ಲಿ ವಾಸವಾಗಿದ್ದ ಮೋನಿಕಾ ಬೊಮ್ಮನಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ 8ಗಂಟೆ ಸುಮಾರಿನಲ್ಲಿ ದೇವೇಗೌಡ ಪೆಟ್ರೋಲ್ ಬಂಕ್, ಚಿನ್ನಮ್ಮ ಜಂಕ್ಷನ್ ಸಮೀಪ ಮೋನಿಕಾ ಬಿಎಂಟಿಸಿ ಬಸ್ ಹತ್ತಲು ಹೋಗಿದ್ದಾರೆ .
ಅಷ್ಟರಲ್ಲಾಗಲೇ ಬಸ್ ಚಲಿಸುತ್ತಿತ್ತು. ಆದರೂ ಆಕೆ ಬಸ್ ಹತ್ತುವ ಪ್ರಯತ್ನವಾಗಿ ಓಡಿದ್ದಾರೆ ಅಷ್ಟರಲ್ಲಿ ಮುಗ್ಗರಿಸಿ ಬಿದ್ದು ಕೆಳಗೆ ಬಿದ್ದಿದ್ದಾರೆ. ಆವೇಳೆ ಮೋನಿಕಾ ಮೇಲೆ ಬಸ್ನ ಹಿಂದಿನ ಚಕ್ರ ಹರಿದಿದೆ. ಪರಿಣಾಮ ಸ್ಥಳದಲ್ಳೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.