NEWSನಮ್ಮಜಿಲ್ಲೆ

ನಾಳೆ ಲಾಲ್‌ಬಾಗ್ ಆಭರಣದಲ್ಲಿ EPS ಪಿಂಚಣಿದಾರರ 89ನೇ ಮಾಸಿಕ ಸಭೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ, ನಡಿಗೆದಾರರ ಸ್ವರ್ಗ ಎಂದು ಕರೆಯುವ, ವಿಶ್ವ ವಿಖ್ಯಾತ ಲಾಲ್‌ಬಾಗ್‌ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ, ಈ ಸುಂದರ ಪರಿಸರ ತಾಣದಲ್ಲಿ ಕ್ಷಣ ಕಾಲ ಕಳೆದಲ್ಲಿ, ಬದುಕಿನ ಜಂಜಾಟವನ್ನು ಕೆಲಹೊತ್ತು ಮರೆತಂತಾಗಿ, ಹಿರಿಯ ಜೀವಗಳಿಗೆ ನವ ಚೇತನದ ಸ್ಫೂರ್ತಿ ತುಂಬುತ್ತದೆ. ಇದೇ ಆವರಣದಲ್ಲಿ ರೈತರು ಬೆಳೆದ ಸಾವಯವ ಮಾವು, ಹಲಸು ಮೇಳ ನಡೆಯುತ್ತಿದ್ದು, ಪರಿಸರವಾದಿಗಳನ್ನು ಕೈಬೀಸಿ ಕರೆಯುತ್ತಿದೆ.

ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ನಮ್ಮ EPS ಪಿಂಚಣಿದಾರರ ಹೋರಾಟ ನಡೆಯುತ್ತಿದ್ದು, ಇತ್ತೀಚೆಗೆ ಚಂದ್ರ ಮೌಳಿ ಚಕ್ರವರ್ತಿ, ಹೆಚ್ಚುವರಿ ಕೇಂದ್ರ ಪಿಎಫ್ ಆಯುಕ್ತರು, ದೆಹಲಿ ಇವರು ಸುತ್ತೋಲೆ ಯೊಂದನ್ನು ಹೊರಡಿಸಿ, ಅಧಿಕ ಪಿಂಚಣಿ ಕೋರಿ ಜಂಟಿ ಆಯ್ಕೆ ಪತ್ರ ಸಲ್ಲಿಸಿರುವ, ಇಪಿಎಸ್ ನಿವೃತ್ತರ ಅತಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ವಜಾಗೊಂಡಿದ್ದು, ಇಂತಹ ಅರ್ಜಿಗಳನ್ನು ಮತ್ತೊಮ್ಮೆ ಆಡಿಟರ್ ಮೂಲಕ ಆಡಿಟ್ ಮಾಡಿಸಿ, ಕ್ರಮ ವಹಿಸಬೇಕೆಂದು, ತನ್ನ ಎಲ್ಲ ಅಧೀನ ಅಧಿಕಾರಿಗಳಿಗೆ ನಿರ್ದೇಶಿಸಿದ್ದು, ಇದೊಂದು ಇಪಿಎಸ್ ನಿವೃತ್ತರ ಕಣ್ಣೊರೆಸುವ ತಂತ್ರ ಅಲ್ಲದೆ ಮತ್ತೇನು?. “ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು” ಎನ್ನುವಂತಿದೆ.

ಕೇರಳ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ, ಇಪಿಎಸ್ ನಿವೃತ್ತರು ಅಧಿಕ ಪಿಂಚಣಿ ಕೋರಿ, ಸುಮಾರು ಒಂದುವರೆ ಸಾವಿರ ರಿಟ್ ಅರ್ಜಿ ಸಲ್ಲಿಸಿದ್ದು, ಇವೆಲ್ಲವೂ ದಿನಾಂಕ 30/05/2025 ರಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿದ್ದು, ಇದರ ಫಲಿತಾಂಶ ಎಷ್ಟರಲ್ಲಿಯೇ ತಿಳಿಯಲಿದೆ. ಏನೇ ಆಗಲಿ ಕೇರಳ ರಾಜ್ಯದ ಇಪಿಎಸ್ ನಿವೃತ್ತರು ಕಾನೂನು ವಿಚಾರದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ವತಿಯಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲು ಮಾಡುತ್ತಿದ್ದು, ಈ ಎಲ್ಲ ಅಂಶಗಳ ಬಗ್ಗೆ, ಮಾಸಿಕ ಸಭೆಯಲ್ಲಿ ಚರ್ಚಿಸಲಾಗುವುದು.

ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥ ಮಾಂಡರ್ ಅಶೋಕ್ ರಾಹುತ್ ಅವರು ಇಪಿಎಸ್ ನಿವೃತ್ತರ ಪರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಅತ್ಯಂತ ವಿವೇಚನಾಯುತವಾಗಿದ್ದು, ಒಂದು ವೇಳೆ ನಿವೃತ್ತರ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಈಡೇರಿಸಲು ವಿಳಂಬ ನೀತಿ ಅನುಸರಿಸಿದಲ್ಲಿ, ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಏನೇ ಆಗಲಿ, ಕೇಂದ್ರ ಸರ್ಕಾರ ನಮ್ಮ ನಾಯಕರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲೇಬೇಕು.

ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರು ಈ ಮಾಸಿಕ ಸಭೆಯಲ್ಲಿ, ನಿವೃತ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ಮುಂದಿನ ಹೋರಾಟದ ರೂಪರೇಷೆಯ ಬಗ್ಗೆ ಪ್ರಸ್ತಾಪಿಸಲಿದ್ದಾರೆ.

ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೋತೊಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಬೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಜೂನ್‌ 1ರ ಭಾನುವಾರ ಬೆಳಗ್ಗೆ 8 ಗಂಟೆಗೆ ಹಾಜರಾಗಬೇಕೆಂದು ವಿನಂತಿಸಿ ಕೊಳ್ಳಲಾಗಿದೆ. ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ, ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಅಧ್ಯಕ್ಷರು.

Megha
the authorMegha

Leave a Reply

error: Content is protected !!