KKRTC: ₹6 ಸಾವಿರ, ಮೊಬೈಲ್ ಇದ್ದ ಬ್ಯಾಗ್ ಬಿಟ್ಟುಹೋಗಿದ್ದ ಪ್ರಯಾಣಿಕರು- ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲನಾ ಸಿಬ್ಬಂದಿ


ಯಲಬುರ್ಗಾ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಯಲಬುರ್ಗಾ ಘಟಕದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಬ್ಯಾಗನ್ನ ವಾರಸುದಾರರಿಗೆ ಮರಳಿಸುವ ಮೂಲಕ ಚಾಲನಾ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಯಲಬುರ್ಗಾ ಘಟಕದ ವಾಹನ (KA 37 F 0791) ಬೆಂಗಳೂರಿಂದ ಯಲಬುರ್ಗಕ್ಕೆ ಹೋಗುವಾಗ ಸರಸ್ವತಿ ಎಂಬ ಮಹಿಳಾ ಪ್ರಯಾಣಿಕರು ಚಿತ್ರದುರ್ಗದಿಂದ ಹೊಸಪೇಟೆಗೆ ಪ್ರಯಾಣ ಚೀಟಿಯನ್ನು ಪಡೆದಿದ್ದರು.
ಆದರೆ ಅವರು ಮಾರ್ಗ ಮಧ್ಯೆ ಕಾನಹೊಸಳಿಯಲ್ಲಿ ಇಳಿದಿದ್ದು ಈ ವೇಳೆ ಅವರು ತೌು ತಂದಿದ್ದ ಬ್ಯಾಗನ್ನು ಬಸ್ಸಿನಲ್ಲೇ ಮರೆತು ಬಿಟ್ಟುಹೋಗಿದ್ದರು. ಕಾರಣ ವಾರಸುದಾರರ ಸಂಬಂಧಿಕರು ಹೊಸಪೇಟೆಗೆ ಬಂದು ನಿರ್ವಾಹಕರನ್ನು ವಿಚಾರಿಸಿದಾಗ ನಿರ್ವಾಹಕರು ಬಸ್ಸಿನಲ್ಲಿದ್ದ ಬ್ಯಾಗನ್ನು ಪರಿಶೀಲಿಸಿ ಅದನ್ನು ಹೊಸಪೇಟೆ ಬಸ್ ನಿಲ್ದಾಣ ಅಧಿಕಾರಿ ಹತ್ತಿರ ತೆಗೆದುಕೊಂಡು ಹೋದರು.
ಬಳಿಕ ಬಸ್ ನಿಲ್ದಾಣ ಅಧಿಕಾರಿ ಅವರ ಸಮ್ಮುಖದಲ್ಲಿ ಬ್ಯಾಗನ್ನು ಪರಿಶೀಲಿಸಿ ಅದರಲ್ಲಿ ಮಹಿಳೆಯ ಆಧಾರ್ ಕಾರ್ಡ್ ಕೀಪ್ಯಾಡ್ ಮೊಬೈಲ್ ಹಾಗೂ ಒಂದು ಪರ್ಸಿದ್ದು ಅದರಲ್ಲಿ ಆರು ಸಾವಿರ ರೂಪಾಯಿ ಇತ್ತು. ಈ ಎಲ್ಲವನ್ನು ವಾರಸುದಾರರಿಗೆ ತಲುಪಿಸಲಾಯಿತು.
ಈ ವೇಳೆ ಚಾಲಕ ಮತ್ತು ನಿರ್ವಾಹಕರು ಇದ್ದು ವಾರಸುದಾರರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲನಾ ಸಿಬ್ಬಂದಿಯನ್ನು ಬಸ್ ನಿಲ್ದಾಣ ಅಧಿಕಾರಿ ಶ್ಲಾಘಿಸಿದ್ದಾರೆ.
Related








