NEWSಆರೋಗ್ಯನಮ್ಮಜಿಲ್ಲೆ

ಪ್ರಕೃತಿಯ ಸಮತೋಲನ ಕಾಪಾಡಲು ಗಿಡ-ಮರ ಬೆಳೆಸಿ: ಆಶಾ ರಾಜಶೇಖರ್

ವಿಜಯಪಥ ಸಮಗ್ರ ಸುದ್ದಿ

ಹೊಸಕೋಟೆ: ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ಪ್ರಕೃತಿಯ ಸಮತೋಲನ ಕಾಪಾಡಲು ಗಿಡ-ಮರಗಳನ್ನು ಬೆಳೆಸಲು ನಾವೆಲ್ಲರು ಅಣಿಯಾದಾಗ ಮಾತ್ರ ಸಕಾಲದಲ್ಲಿ ಉತ್ತಮ ಮಳೆಯಾಗಿ ಸಮೃದ್ದ ಬೆಳೆಗೆ ಸಹಕಾರಿಯಾಗುತ್ತದೆ ಎಂದು ನಗರಸಭೆ ಅಧ್ಯಕ್ಷರಾದ ಆಶಾ ರಾಜಶೇಖರ್ ಹೇಳಿದರು.

ಹೊಸಕೋಟೆ ನಗರಸಭೆ ವತಿಯಿಂದ ಜಿ.ಕೆ.ಬಿ.ಎಂ ಶಾಲೆಯಲ್ಲಿ 50 ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.

ಹೆಚ್ಚು ಗಿಡ ಮರಗಳನ್ನು ನೆಡುವುದರಿಂದ ಭೂ ಕುಸಿತ ಪ್ರಕೃತಿ ವಿಕೋಪಗಳು ಸಂಭವಿಸುವುದನ್ನು ತಪ್ಪಿಸಬಹುದು. ಗಿಡ ಮರಗಳನ್ನು ನಮ್ಮ ಜೀವ ಉಳಿಸುವ ಒಂದು ಅಂಶಗಳು ಅವುಗಳನ್ನು ನಾಶ ಮಾಡುತ್ತಾ ಬಂದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ ಎಂದರು.

ನಗರಸಭೆ ಉಪಾಧ್ಯಕ್ಷ ನವೀನ್, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ್, ನಗರಸಭೆ ಪೌರಾಯುಕ್ತರಾದ ನೀಲಾಲೊಜನಾ ಪ್ರಭು, ಎಇಇ ರವೀಂದ್ರನಾಥ್, ಆರೋಗ್ಯ ನಿರೀಕ್ಷಕರು ಶೋಭಾ ಎಂ. ಹಾಗೂ ಅಂಜಿನಪ್ಪ, ಹೊಸಕೋಟೆ ಡಿವೈಎಸ್ಪಿ ಮಲ್ಲೇಶ್ ಗೌಡ, ಆರ್. ಎಫ್.ಒ ವರುಣ್ ಕುಮಾರ್, ನಗರ ಅಭಿಯಾನ ವ್ಯವಸ್ಥಾಪಕರು ಮಹಾಂತ ಹಾಗೂ ನಗರಸಭೆ ಎಲ್ಲ ಸದಸ್ಯರು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾಲಿನ್ಯ  ತಡೆಗಟ್ಟುವುದು ನಮ್ಮ ಕರ್ತವ್ಯ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದೊಡ್ಡಬಳ್ಳಾಪುರ ನಗರ ಸಭೆ ವತಿಯಿಂದ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ಎಂಬ ಕಾರ್ಯಕ್ರಮವನ್ನು, ನಗರದ ಬಸವಣ್ಣ ದೇವಸ್ಥಾನ ಬಳಿ ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು’ ಎಂಬ ಘೋಷವಾಕ್ಯದೊಂದಿಗೆ ಶಾಸಕ ಧೀರಜ್ ಮುನಿರಾಜು ಅವರ ಅಧ್ಯಕ್ಷತೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಕೆ., ಉಪಾಧ್ಯಕ್ಷ ಮಲ್ಲೇಶ್ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ವಿ.ಎಸ್., ಆಯುಕ್ತ ಕಾರ್ತಿಕೇಶ್ವರ ಆರ್., ನಗರ ಸಭೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Megha
the authorMegha

Leave a Reply

error: Content is protected !!