KKRTC ವಿಜಯಪುರ: ತಂದೆ ನಿಧನರಾದ ನಾಲ್ಕೇ ದಿನಕ್ಕೆ ಡ್ಯೂಟಿಗೆ ಬರಬೇಕಿತ್ತು ಅಂತ ಚಾಲಕನಿಗೆ ಗೈರುಹಾಜರಿ ಮಾಡಿದ ಡಿಸಿ ನಾರಾಯಣಪ್ಪ ಕುರುಬರ

- ಒಟ್ಟು 58 ದಿನ ರಜೆಯಲ್ಲಿದ್ದ ಚಾಲಕ ಕಂ ನಿರ್ವಾಹಕನಿಗೆ ಹಿಂದೆ ಮುಂದೆ ಗೈರು ಹಾಜರಿ ತೋರಿಸಿ 7ದಿನ ರಜೆ ಮಂಜೂರು ಮಾಡಿದ ಡಿಸಿಯ ನಡೆ ಅನುಮಾನಕ್ಕೆ ಎಡೆ
ವಿಜಯಪುರ: ತನ್ನ ತಂದೆ ನಿಧನರಾಗಿದ್ದಕ್ಕೆ ರಜೆ ಹಾಕಿಕೊಂಡ ಚಾಲಕ ಕಂ ನಿರ್ವಾಹಕನಿಗೆ ಕೇವಲ 7 ದಿನ ಮಾತ್ರ ರೆಜೆಕೊಟ್ಟು ಬಳಿಕ ಗೈರುಹಾಜರಿ ತೊರಿಸುವ ಮೂಲಕ ದೌರ್ಜನ್ಯದಿಂದ ನಡೆದುಕೊಂಡಿದ್ದಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ.
ಇನ್ನು 2020 ರಿಂದ 2021ರ ನಡುವೆ ನಾರಾಯಣಪ್ಪ ಕುರುಬರ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಇದೇ ವಿಜಯಪುರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮಹಿಳೆಯರಿಗೆ ಕಿರಕುಳ ನೀಡಿರುವ ಬಗ್ಗೆ ದುರುಗಳು ಬಂದಿದವು ಎಲ್ಲವನ್ನು ಗಮನಿಸಿದ ಮೇಲಧಿಕಾರಿಗಳು ಹಾಗೂ ಅಂದಿನ ಸಾರಿಗೆ ಸಚಿವರು ವರ್ಗಾವಣೆ ಮಾಡಿದ್ದರು.
ಆದರೆ ಇವರು ತಮ್ಮ ರಾಜಕೀಯ ಪ್ರಭಾವ ಬಳಸಿ ಮತ್ತೆ ವಿಜಯಪುರ ವಿಭಾಗಕ್ಕೆ ಡಿಸಿಯಾಗಿ ಬಂದು ಒಕ್ಕರಿಸಿದ್ದಾರೆ. ಬಂದಮೇಲೆ ಚಾಲಕ ಕಂ ನಿರ್ವಾಹಕ ಹಿರೆಗೆಪ್ಪ ತಳವಾರ ಅವರ ತಂದೆ 2023 ಅಕ್ಟೋಬರ್ 17ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ನಿಧನರಾಗುವುದಕ್ಕೂ ಮೊದಲ ಮೂರು ದಿನ ಅಂದರೆ ಅ.14ರಿಂದ ಅ.20ರವರೆಗೆ ರಜೆ ಮಂಜೂರು ಮಾಡಿದ್ದಾರೆ.
ಇಲ್ಲಿ ಚಾಲಕ ತನ್ನ ತಂದೆಯನ್ನು ಕಳೆದುಕೊಂಡ ಕೇವಲ ನಾಲ್ಕೆದಿನಕ್ಕೆ ಡ್ಯೂಟಿಗೆ ಬರಬೇಕಿತ್ತು ಎಂದು ಅ.21ರಿಂದ ಗೈರುಹಾಜರಿ ತೋರಿಸಿದ್ದಾರೆ. ಅಲ್ಲದೆ ಈ ಚಾಕಲ 15.09.2023ರಿಂದ 11.11.2023ರ ವರೆಗೆ ರಜೆ ತೆಗೆದುಕೊಂಡಿದ್ದಾರೆ. ಈ ನಡುವೆ ಈ ಮಧ್ಯೆ ಕೇವಲ 7 ದಿನ ರಜೆ ಮಂಜೂರು ಮಾಡಿ ಮತ್ತೆ ಗೈರುಹಾಜರಿ ತೋರಿಸಿದ್ದಾರೆ. ನಿರಂತರವಾಗಿ 58 ದಿನಗಳ ಕಾಲ ರಜೆಯಲ್ಲಿರುವ ವ್ಯಕ್ತಿಗೆ ಮಧ್ಯೆ 7 ದಿನ ರಜೆ ಮಂಜೂರು ಮಾಡುವುದಕ್ಕೆ ನಿಗಮದಲ್ಲಿ ನಿಯಮವಿದೆಯೇ?
ಇಲ್ಲಿ ನಿರಂತರವಾಗಿ ಗೈರು ಹಾಜರಿ ತೋರಿಸಬೇಕಿತ್ತು ಇಲ್ಲ ಚಾಲಕನ ತಂದೆ ನಿಧನರಾದ ದಿನದಿಂದ ಆತ ಡ್ಯೂಟಿಗೆ ಬರುವವರೆಗಾದರೂ ರಜೆ ಮಂಜೂರು ಮಾಡಬೇಕಿತ್ತು. ಇದಾವುದನ್ನು ಮಾಡದೆ 58 ದಿನಗಳ ರಜೆಯಲ್ಲಿ ಹಿಂದೆ ಮುಂದೆ ಗೈರು ಹಾಜರಿ ತೋರಿಸಿ ಮಧ್ಯೆ ರಜೆ ಮಂಜೂರು ಮಾಡಿರುವ ಈ ಡಿಸಿಯ ನಡೆ ಗಮನಿಸಿದರೆ ಅನುಮಾನ ಮೂಡುತ್ತಿದೆ.
ಇದಿಷ್ಟೇ ಅಲ್ಲದೆ ಈ ನಾರಾಯಣಪ್ಪ ಕುರುಬರ ವಿಭಾಗಕ್ಕೆ ಬಂದಾಗಿನಿಂದ ನೌಕರರ ರಜೆಯನ್ನು ಮಂಜೂರು ಮಾಡಲು 50:50 ಪದ್ಧತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹಣ ನೀಡಿದವರಿಗೆ ರಜೆ ಮಂಜೂರು ಮಾಡುವುದು. ಹಣ ನೀಡದೆ ಇದ್ದವರಿಗೆ ರಜೆ ಮಂಜೂರು ಮಾಡದೇ ಪೆಂಡಿಂಗ್ ಇಡುವುದು ಅಥವಾ ದಂಡ ಹಾಕುವುದು ಮಾಡುತ್ತಿದ್ದಾರೆ. ಹಣ ಪಡೆದ ಬಳಿಕ ಪ್ರಕರಣಗಳನ್ನು ವಿಲೇವಾರಿಮಾಡುತ್ತಿದ್ದಾರೆ ಎಂಬ ಆರೋಪ ವಿಭಾಗದಲ್ಲಿ ಕೇಳಿಬರುತ್ತಿದೆ.
ಇನ್ನು ಈತನ ಮೂಲ ಹುದ್ದೆ ಉಪ ಮುಖ್ಯಕಾನೂನು ಅಧಿಕಾರಿ. ಆದರೆ ಮೂಲ ಹುದ್ದೆ ಆತನಿಗೆ ಬೇಕಾಗಿಲ್ಲ. ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆನೇ ಬೇಕು. ಅದೂ ವಿಜಯಪುರ ವಿಭಾಗವೇ ಬೇಕು. ಈ ಹಿಂದೆ ಭ್ರಷ್ಟಾಚಾರ ಪಕ್ಷಪಾತ ಮತ್ತು ಮಹಿಳೆಯರಿಗೆ ನೀಡಿರುವ ಕಿರಕುಳದ ಆಧಾರದ ಮೇಲೆ ವಿಜಯಪುರ ವಿಭಾಗದಿಂದ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿತ್ತು.
ಆದರೆ ಈಗ ತನ್ನ ರಾಜಕೀಯ ಒತ್ತಡ ಬಳಸಿಕೊಂಡು ಮತ್ತೆ ವಿಜಯಪುರ ವಿಭಾಗಕ್ಕೆ ಒಕ್ಕರಿಸಿದ್ದಾರೆ. ಈತ ಈ ಹಿಂದೆ ವಿಜಯಪುರ ಬಸ್ ನಿಲ್ದಾಣದಲ್ಲಿರುವ ನಂದಿನಿ ಕ್ಯಾಂಟೀನ್ ಬಾಡಿಗೆ ವಿಚಾರದಲ್ಲಿ ಸಂಧಾನ ಪ್ರಕಿಯೇ ಮೂಲಕ ಪ್ರತಿ ತಿಂಗಳು 9.5 ಲಕ್ಷ ಬಾಡಿಗೆ ಇದ್ದ ಕ್ಯಾಂಟೀನ್‌ಗೆ ಕೇವಲ 4 ಲಕ್ಷ ರೂ.ಗಳಿಗೆ ಬಾಡಿಗೆ ಫಿಕ್ಸ್ ಮಾಡಿಸಿ ಬಾಡಿಗೆದಾರರಿಂದ ಹಣ ಪಡೆದು ನಿಗಮಕ್ಕೆ ಸುಮಾರು 1.90 ಕೋಟಿ ರೂ.ಗಳಷ್ಟು ಆದಾಯ ಲಾಸ್ ಆಗಲು ನೇರವಾಗಿ ಕಾರಣರಾಗಿದ್ದಾರೆ.
ಈ ಸಂಬಂಧ ಈತನ ಮೇಲೆ ದೂರು ಸಹ ದಾಖಲು ಮಾಡಲಾಗಿದೆ. ಆದರೆ ವಿಚಾರಣೆಯಲ್ಲಿ ತಮಗೆ ಬೇಕಾಗಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ ಕೊಂಡಿದ್ದಾರೆ. ಅಲ್ಲದೆ ವಿಜಯಪುರ ವಿಭಾಗದಲ್ಲಿ ಸಾಕಷ್ಟು ದುರುಗಳಿದ್ದರು ಮತ್ತೆ ವಿಜಯಪುರ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಬಂದು ಮತ್ತೆ ನೌಕರರ ಸುಲೆಗೆ ಮಾಡುವುದಕ್ಕೆ ನಿಂತಿದ್ದಾರೆ.
ಈತ ವಿಜಯಪುರ ವಿಭಾಗದಲ್ಲಿ ಮಾಡಿರುವ ಭ್ರಷ್ಟಾಚಾರ, ಪಕ್ಷಪಾತ ಮತ್ತು ಮಹಿಳೆಯರಿಗೆ ನೀಡಿರುವ ಕಿರಕುಳ ಹಾಗೂ ನಿಗಮಕ್ಕೆ ಸುಮಾರು 1.98 ಕೋಟಿ ರೂ.ಗಳಷ್ಟು ಆದಾಯ ನಷ್ಟ ಮಾಡಿ ಆರ್ಥಿಕವಾಗಿ ನಿಮಗಕ್ಕೆ ನಷ್ಟ ಮಾಡಿರುವ ಆರೋಪದ ಮೇಲೆ ಕೂಡಲೇ ವಿಚಾರಣ ಪೂರ್ವ ಅಮಾನತು ಮಾಡಿ ಸೂಕ್ತ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ವಿಭಾಗದ ನೌಕರರು ಆಗ್ರಹಿಸಿದ್ದಾರೆ.
ವಿಭಾಗದಲ್ಲಿ ಪೆಂಡಿಂಗ್ ಇದ್ದ ರಜೆ ಪ್ರಕರಣಗಳನ್ನು ಇತ್ಯಾರ್ಥ ಮಾಡಿರುವ ಡಿಸಿ ಆದೇಶದ ಪಿಡಿಎಫ್ ಪ್ರತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: Leave Order’s
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...