KKRTC ಕಂಡಕ್ಟರ್ ಮೇಲೆ ಹಲ್ಲೆ: ಮೂವರಿಗೆ ₹75 ಸಾವಿರ ದಂಡ- ಕಟ್ಟಲಾಗದಿದ್ದರೆ 6 ತಿಂಗಳು ಜೈಲು ಶಿಕ್ಷೆ- ಕೋರ್ಟ್ ಮಹತ್ವದ ತೀರ್ಪು


ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಮೂವರಿಗೆ ಅಫಜಲಪುರ ಪ್ರಧಾನ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಲಾ 25 ಸಾವಿರ ರೂಪಾಯಿಯಂತೆ 75 ಸಾವಿರ ರೂ. ದಂಡ ವಿಧಿಸಿ ಆದೇಶಿಸ ಹೊರಡಿಸಿದೆ.
ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದ್ದರಿಂದ ಮೂವರು ಅಪರಾಧಿಗಳಿಗೆ ಅಫಜಲಪುರದ ಪ್ರಧಾನ ದಿವಾಣಿ ನ್ಯಾಯಾಲಯ ಮತ್ತುಜೆಎಂಎಫ್‌ಸಿನ್ಯಾಯಾಲಯ 75 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ.
ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದ ಅಫಜಲಪುರ ತಾಲೂಕಿನ ಚಿನಮಳ್ಳಿ ಗ್ರಾಮದ ಗುರಪ್ಪ ಲಾಲಪ್ಪ ಸಿಂಗೆ, ಆಕಾಶ ಗುರಪ್ಪ ಸಿಂಗೆ, ಜೈಭೀಮ ಗುರಪ್ಪ ಸಿಂಗೆ ಎಂಬುವರೆಗೆ ಶಿಕ್ಷೆಗೊಳಗಾದವರು.
ಈ ಮೂವವರ ವಿರುದ್ಧ ದಾಖಲಾಗಿದ್ದ ಪ್ರಕರಣದಡಿ ಹಲ್ಲೆ ಮಾಡಿರುವುದು ಸಾಬೀತಾಗಿರುವುದರಿಂದ ಪ್ರಧಾನ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅನೀಲ ಅಮಾಟೆ ಅವರು 75 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ಆಗದಿದ್ದರೆ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಮಹತ್ವದ ತೀರ್ಪುನೀಡಿ ಆದೇಶಿಸಿದ್ದಾರೆ.
ಘಟನೆ ಏನು?: 2019 ರ ಆಗಸ್ಟ್ 30 ರಂದು ರಾತ್ರಿ 8.30ರ ಸುಮಾರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಗುರಪ್ಪ ಲಾಲಪ್ಪ ಸಿಂಗೆ ಎಂಬಾತ ಕಂಡಕ್ಟರ್‌ನೊಂದಿಗೆ ಟಿಕೆಟ್ ತೆಗೆದುಕೊಳ್ಳುವ ವಿಷಯದಲ್ಲಿ ಗಲಾಟೆ ಮಾಡಿದ್ದು ಅಲ್ಲದೆ ಅವಾಚ್ಯವಾಗಿ ನಿಂದಿಸಿದ್ದನ್ನು.
ಅಷ್ಟಕ್ಕೆ ಸುಮ್ಮನಾಗದ ಈತ ನಂತರ ತನ್ನ ಮಕ್ಕಳಾದ ಆಕಾಶ ಮತ್ತು ಜೈಭೀಮ ಎಂಬುವವರನ್ನು ಫೋನ್ ಮಾಡಿ ಕರೆಸಿಕೊಂಡಿದ್ದನ್ನು. ಈ ನಡುವೆ ಚಿನಮಳ್ಳಿ ಹತ್ತಿರ ಬಸ್ ಬರುತ್ತಿದ್ದಂತೆ ಅದನ್ನು ನಿಲ್ಲಿಸಿ ಮೂವರು ಕಂಡಕ್ಟರ್ ಮೇಲೆ ಭೀಕರ ಹಲ್ಲೆ ನಡೆಸಿ ಸಮವಸ್ತ್ರ ಹರಿದಿದ್ದು ಅಲ್ಲದೆ ಚಪ್ಪಲಿಯಿಂದ ಹೊಡೆದಿದ್ದರು.

ಈ ಸಂಬಂಧ ದೇವಸ್ಥಾನ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ನಡುವೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಅನೀಲ ಅಮಾಟೆ ಅವರು ಅಪರಾಧಿಗಳಿಗೆ ಈ ಶಿಕ್ಷೆ ವಿಧಿಸಿ ಆದೇಶಿಸಿದದ್ದಾರೆ.
ಇನ್ನು ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪಿ.ಜಯಶ್ರೀ ಅವರು ವಾದ ಮಂಡಿಸಿದ್ದರು.
ಇದು ಸರ್ಕಾರದ ಒಬ್ಬ ಸಾರಿಗೆ ನೌಕರರ ಮೇಲೆ ಮನಬಂದಂತೆ ಹಲ್ಲೆ ಮಾಡುವ ಕಿಡಿಗೇಡಿಗೆ ಎಂಥ ಶಿಕ್ಷೆಯಾಗುತ್ತದೆ ಎಂಬುದಕ್ಕೆ ಈ ತೀರ್ಪು ಮಹತ್ವದಾಗಿದೆ. ಅಲ್ಲದೆ ಒಬ್ಬ ಸರ್ಕಾರಿ ಸಾರಿಗೆ ನೌಕರನ ಮೇಲೆ ಹಲ್ಲೆ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡು ಸಾರಿಗೆ ನೌಕರರ ಜತೆ ಸೌಹಾರ್ದಯುತವಾಗಿ, ಸೌಜನ್ಯದಿಂದ ವರ್ತಿಸಬೇಕು. ಜತೆಗೆ ಅವರು ನಿಮ್ಮ ಸೇವೆ ಮಾಡುತ್ತಿರುವುದು ಎಂಬುದನ್ನು ಅರಿಯಬೇಕು.
Related
