NEWSನಮ್ಮಜಿಲ್ಲೆಸಂಸ್ಕೃತಿ

ಕರ್ನಾಟಕ ವಿಕಾಸ ರಂಗದ ಕೊಡಗು ಜಿಲ್ಲಾಧ್ಯಕ್ಷರಾಗಿ KSRTC ನಿವೃತ್ತ ನೌಕರ, ಸಾಹಿತಿ ವೈಲೇಶ್‌ ನೇಮಕ

ವಿಜಯಪಥ ಸಮಗ್ರ ಸುದ್ದಿ

ಕೊಡಗು: ಕರ್ನಾಟಕ “ವಿಕಾಸ ರಂಗ”ವು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ, ನೆಲ-ಜಲದ ರಕ್ಷಣೆಗಾಗಿ ಶ್ರಮಿಸುವ ಧ್ಯೇಯೋದ್ಧೇಶಗಳೊಂದಿಗೆ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆ.ಬೋಯಿಕೇರಿ ನಿವಾಸಿ ವೈಲೇಶ ಪಿ.ಎಸ್. ಅವರನ್ನು ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆಯೆಂದು ಕರ್ನಾಟಕ ವಿಕಾಸ ರಂಗದ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಇಂದು ನೇಮಕ ಮಾಡಿ, ನೇಮಕಾತಿ ಪ್ರಮಾಣಪತ್ರವನ್ನು ವೈಲೇಶ ಅವರಿಗೆ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ನೀಡುವ ಮೂಲಕ ನೀವು ಕರ್ನಾಟಕ “ವಿಕಾಸ ರಂಗ ಧ್ಯೇಯೋದ್ಧೇಶಗಳಿಗೆ ಶಕ್ತಿ ಮೀರಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

Megha
the authorMegha

Leave a Reply

error: Content is protected !!