CRIMENEWSನಮ್ಮರಾಜ್ಯ

KSRTC: ಚಾಲಕನ ನಿಯಂತ್ರಣ ಕಳೆದು ಕೊಂಡು ಕಾಫಿ ತೋಟಕ್ಕೆ ನುಗ್ಗಿದ ಬಸ್‌

ವಿಜಯಪಥ ಸಮಗ್ರ ಸುದ್ದಿ

ವಿರಾಜಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿರುವ ಘಟನೆ ಇಂದು ಬೆಳಗ್ಗೆ ವಿರಾಜಪೇಟೆಯ ಕಾವೇರಿ ಕಾಲೇಜು ಬಳಿಯ ಇಳಿಜಾರಿನ ನಡೆದಿದೆ.

ಕೋಲಾರ ವಿಭಾಗದ ಬಸ್‌ ಅವಘಡಕ್ಕೆ ಹೀಡಾಗಿದ್ದು, ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಸ್‌ ಮಡಿಕೇರಿಯಿಂದ ವಿರಾಜಪೇಟೆ ಮಾರ್ಗವಾಗಿ ಬೆಂಗಳೂರು-ಕೋಲಾರ ಕಡೆಗೆ ಇಂದು ಬೆಳಗ್ಗೆ ತೆರಳುತ್ತಿದ್ದಾಗ  ಕಾವೇರಿ ಕಾಲೇಜು ಬಳಿ ಇಳಿಜಾರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದೆ.

ಘಟಕಗಳಲ್ಲಿ ಬಸ್‌ಗಳನ್ನು ಸರಿಯಾಗಿ ರಿಪೇರಿ ಮಾಡುವುದಕ್ಕೆ ತಾಂತ್ರಿಕ ಸಿಬ್ಬಂದಿಗಳಿಗೆ ಬಿಡಿ ಭಾಗಗಳನ್ನು ಕೊಡದಿರುವುದಕ್ಕೆ ಈ ರೀತಿಯ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

Megha
the authorMegha

Leave a Reply

error: Content is protected !!