KSRTC ಬೇಲೂರು: ಡಿಎಂ ಕಿರುಕುಳಕ್ಕೆ ನೊಂದು ಡಿಪೋದಲ್ಲೆ ವಿಷ ಸೇವಿಸಿದ ಚಾಲಕ ಕಂ ನಿರ್ವಾಹಕ- ಸ್ಥಿತಿ ಗಂಭೀರ

- ಡಿಎಂ ಶಾಜೀಯಾ ಭಾನು ಹಾಗೂ ಡಿಸಿ ಅಮಾನತಿಗೆ ಶಾಸಕ ಸುರೇಶ್ ಒತ್ತಾಯ
- ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಪೊಲೀಸ್ ಅಧಿಕಾರಿಗಳು
ಬೇಲೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕಿ ಕಿರುಕುಳಕ್ಕೆ ನೊಂದ ಚಾಲಕ ಕಂ ನಿರ್ವಾಹಕರೊಬ್ಬರು ಡಿಪೋನಲ್ಲೇ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಬೇಲೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕೋಟಿಗನಹಳ್ಳಿಯ ನಿವಾಸಿ ಚಾಲಕ ಕಂ ನಿರ್ವಾಹಕ ಹರೀಶ್ ಎಂಬುವರೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದವರು. ಸದ್ಯ ಅವರನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.
KSRTC ಬೇಲೂರು ಘಟಕದ ಡಿಎಂ ಶಾಜೀಯಾ ಭಾನು ಚಾಲಕ ಕಂ ನಿರ್ವಾಹಕ ಹರೀಶನಿಗೆ ಇಂದು ಮುಂಜಾನೆಯೇ ಡ್ಯೂಟಿಗೆ ಬಂದರೂ ಡ್ಯೂಟಿ ಕೊಟ್ಟಿಲ್ಲ. ಬದಲಿಗೆ ಕಿರುಕುಳ ನೀಡಿದ್ದಾರೆ. ಜತೆಗೆ ಚಾಲಕನನ್ನು ಡಿಎಂ ನಿಂದಿಸಿ ಅವಮಾಸಿನಿದ್ದಾರೆ.
ಇದರಿಂದ ಮನನೊಂದು ಚಾಲಕ ಕಂ ನಿರ್ವಾಹಕ ಹರೀಶ್ ವಿಶ್ರಾಂತಿ ಕೊಠಡಿಗೆ ಹೋಗಿ ವಿಷ ಸೇವಿಸಿ ಅಸ್ವಸ್ಥರಾಗಿದ್ದಾರೆ. ಅದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಕೆ.ಸುರೇಶ್ ಚಾ ಕಂ ನಿ ಹರೀಶ್‌ನ ಆರೋಗ್ಯದ ಬಗ್ಗೆ ದೈದ್ಯರನ್ನು ವಿಚಾರಿಸಿದ್ದಾರೆ. ಅಲ್ಲದೆ ಈ ವೇಳೆ ನೌಕರನಿಗೆ ಕಿರುಕುಳ ನೀಡಿದ ಮತ್ತು ನೀಡುತ್ತಿರುವ ಡಿಪೋ ಮ್ಯಾನೇಜರ್ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಇಬ್ಬರನ್ನೂ ಕೂಡಲೇ ಅಮಾನತು ಮಾಡಬೇಕು ಎಂದು ಸಾರಿಗೆ ಸಚಿವರನ್ನು ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಬೇಲೂರು ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಸಂಬಂಧ ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಇನ್ನು ಸರ್ಕಾರ ಕೂಡ ಸಾರಿಗೆ ನೌಕರರಿಗೆ ಸಿಗಬೇಕಾದ ವೇತನ ಸೌಲಭ್ಯವನ್ನು ಸರಿಯಾಗಿ ಕೊಡದೆ ಅರ್ಧಕ್ಕರ್ಧ ವೇತನ ಕೊಡುತ್ತಿದೆ. ಇತ್ತ ಸಮಯದ ಪರರಿವೇ ಇಲ್ಲದಂತೆ ಡ್ಯೂಟಿ ಮಾಡುತ್ತಿದ್ದರೂ ಕೂಡ ಅಧಿಕಾರಿಗಳು ನೌಕರರಿಗೆ ಕಿರುಕುಳ ಕೊಡುವುದು ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಎಲ್ಲ ಒತ್ತಡಗಳನ್ನು ಸಹಿಸಿಕೊಂಡು ಅರ್ಧ ಸಂಬಳಕ್ಕೆ ನೌಕರರು ದುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಭಾರಿ ನೋಯುತ್ತಿರುವ ನೌಕರರು ಈ ಕಿರುಕುಳದಿಂದ ಇನ್ನಷ್ಟು ನೊಂದ ಜೀವನವನ್ನೇ ಮುಗಿಸಿಕೊಳ್ಳುವುಕ್ಕೆ ಯತ್ನಿಸುತ್ತಿದ್ದಾರೆ.
ಇದು ನಿಲ್ಲಬೇಕಾದರೆ ಮೊದಲು ಅಧಿಕಾರಿಗಳು ನೌಕರರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು. ಜತೆಗೆ ಪ್ರತಿ ಡಿಪೋಗಳಲ್ಲೂ ಲಂಚ ಎಂಬುವುದು ಯಾರದೆ ಭಯವಿಲ್ಲದೆ ರಾಜರೋಷವಾಗಿ ನಡೆಯುತ್ತಿದೆ ಇದಕ್ಕೆ ಕಡಿವಾಣ ಬೀಳಬೇಕು. ನೌಕರರ ಕಿತ್ತು ತಿನ್ನುವ ಈ ಲಂಚ ಎಂಬ ಭೂತಕ್ಕೆ ಕಡಿವಾಣ ಬೀಳಬೇಕು ಆಗ ಮಾತ್ರ ನೌಕರರು ತುಸು ನಿಮ್ಮದಿಯಿಂದ ಡ್ಯೂಟಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಇನ್ನು ಅಧಿಕಾರಿಗಳು ಕೂಡ ನೌಕರರ ಬಗ್ಗೆ ತುಚ್ಯವಾಗಿ ನೋಡದೆ ನಾವೆಲ್ಲರೂ ಕೂಡ ಸಾರ್ವಜನಿಕ ಸೇವಕರು ಎಂದು ಅಧಿಕಾರಿಗಳು ತಿಳಿದುಕೊಳ್ಳಬೇಖು. ಜತೆಗೆ ಸರ್ಕಾರದಿಂದ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ಒಗ್ಗಟ್ಟಾಗಬೇಕು. ಆದರೆ ಈ ಅಧಿಕಾರಿಗಳ ತಲೆಯಲ್ಲಿ ಅಹಂ ಎಂಬುವುದು ಹೊಕ್ಕಿದ್ದು ಇದರಿಂದ ಹೊರಬರದೆ ನೌಕರರಿಗೆ ಹಿಂಸೆ ನೀಡುವ ಪ್ರವತ್ತಿ ಬೆಳೆಸಿಕೊಂಡು ನಿತ್ಯ ಕಿರುಕುಳ ನೀಡುವುದನ್ನು ತಮ್ಮ ಡ್ಯೂಟಿ ಮಾಡಿಕೊಂಡಿಕೊಂಡಿದ್ದಾರೆ.
ಇನ್ನಾದರೂ ನೌಕರರ ಜತೆ ಸೌಜನ್ಯದಿಂದ ನಡೆಸಿಕೊಂಡು ನಾವು ಒತ್ತಡ ರಹಿತವಾಗಿ ಡ್ಯೂಟಿ ಮಾಡುವುದಕ್ಕೆ ಬಿಡಬೇಕು ಎಂದು ನೊಂದ ನೌಕರರು ಒತ್ತಾಯಿಸಿದ್ದಾರೆ. ಅಲ್ಲದೆ ನಾವೆಲ್ಲರೂ ಒಗ್ಗಟ್ಟಾಗೋಣ ಎಂದು ಮನವಿ ಮಾಡಿದ್ದಾರೆ.
Related

You Might Also Like
ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು: ಸಿಎಂ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ ಎಂದು ಮುಖ್ಯಮಂತ್ರಿ...
ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ
ಮೈಸೂರು: ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಇಂದು ಭೇಟಿ ನೀಡಿ ಆಹಾರ ಧಾನ್ಯಗಳ...
ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು: ಆಯುಕ್ತ ಸತೀಶ್
ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ...
ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದರೆ ನಿವೇಶನ ಮಾಲೀಕರಿಗೆ ದಂಡ ವಿಧಿಸಿ: ಸ್ನೇಹಲ್
ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವ...
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ
2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...