NEWSನಮ್ಮರಾಜ್ಯರಾಜಕೀಯ

ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌

ಈ ಮಧ್ಯೆ ಶಿವಕುಮಾರ್‌ ಅವರು ಮಿಡ್‌ನೈಟ್‌ ಮೀಟಿಂಗ್‌ ನಡಸಿರುವ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸಂಪುಟಕ್ಕೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ತಡರಾತ್ರಿ ಮಿಡ್‌ನೈಟ್‌ ಮೀಟಿಂಗ್‌ ನಡೆಸಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಅವರು ಬರುವ ಬುಧವಾರ ಅಂದರೆ ಜೂನ್‌ 3ರಂಉ ಸಂಜೆ 4 ಗಂಟೆಗೆ ವಿಧಾಬಸೌಧದ ಮೆಟ್ಟಿಲಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗದ್ದುಗೆ ಏರಲಿದ್ದಾರೆ.

ಈ ಮೂಲಕ ಡಿಕೆಶಿ ಅವರ ಪದಗ್ರಹಣಕ್ಕೆ ಕೊನೆಗೂ ಮುಹೂರ್ತ ಫಿಕ್ಸ್‌ ಆದಂತಾಗಿದ್ದು, ಬುಧವಾರ ಸಂಜೆ 4 ಗಂಟೆಯ ನಂತರ ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್‌ ಮುಂದೆ ಬೃಹತ್‌ ವೇದಿಕೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇನ್ನು ಡಿಕೆಶಿ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಮುಂಗಾರು ಆರಂಭಕ್ಕೂ ಮುನ್ನವೇ ಅಅವ ಯುಗಾರಂಭವಾಗಲಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪಟ್ಟಾಭಿಷೇಕ ನಡೆಯಲಿದೆ. ಈ ನಡುವೆ ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಯಲಿದ್ದು, ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್‌ ನೇತೃತ್ವದಲ್ಲಿ ಶಾಸಕಾಂಗ ನಾಯಕನ ಆಯ್ಕೆ ಆಗಲಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶಿವಕುಮಾರ್‌ ಅವರು ಮಿಡ್‌ನೈಟ್‌ ಮೀಟಿಂಗ್‌ ನಡಸಿರುವ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸಂಪುಟಕ್ಕೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ತಡರಾತ್ರಿ ಮಿಡ್‌ನೈಟ್‌ ಮೀಟಿಂಗ್‌ ನಡೆಸಿದ್ದಾರೆ.

ಹೈಕಮಾಂಡ್‌ ಭೇಟಿ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಗಣಿಗ ರವಿ, ಕಡಲೂರು ಉದಯ್ ಅವರೊಂದಿಗೆ ಸುಮಾರು 1 ಗಂಟೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಆಪ್ತರಾದ ಬೇಳೂರು ಗೋಪಾಲಕೃಷ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಮಾಜಿ ಅಧ್ಯಕ್ಷ ನಲಪಾಡ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. ಆದರೆ ಅಲ್ಲಿ ಏನು ಚರ್ಚೆಯಾಯಿತು ಎಂಬುವುದು ಮಾತ್ರ ಗೌಪ್ಯವಾಗಿದೆ.

ಈನಡುವೆ ಹೊಸ ಸರ್ಕಾರ ರಚನೆಗೆ ಹೈಕಮಾಂಡ್ ಕೂಡ ರಿಸೆಟ್ ಬಟನ್ ಒತ್ತಿದೆ. ಅಂದ್ಹಾಗೆ ಡಿಕೆಶೀ ಟೀಂಗೆ ಯಾರೆಲ್ಲ ಸೇರ್ತಾರೆ? ಸಿದ್ದರಾಮಯ್ಯ ಸರ್ಕಾರದ ಸಚಿವರಾಗಿದ್ದ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ..? ಎಷ್ಟು ಜನ ಹೊಸಬರು ಮಂತ್ರಿಗಳಾಗುತ್ತಾರೆ? ಹೀಗೆ ಸಮುದಾಯ, ಜಿಲ್ಲಾವಾರು ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಈ ಮಧ್ಯೆ ಸಿದ್ದು ಸಂಪುಟದಲ್ಲಿ ಸಚಿವರಾಗಿದ್ದ ಹಲವರಿಗೆ ಶಾಕ್ ಕಾದಿದೆ. ಹಳಬರಲ್ಲಿ ಎಷ್ಟು ಜನ ಸಚಿವರು ಡಿಕೆಶಿ ಸಂಪುಟ ಸೇರ್ತಾರೆ ಅನ್ನುವಾ ಕುತೂಹಲ ಕೂಡ ಇದೆ.

ಯಾರೆಲ್ಲ ಡೇಂಜರ್ ಝೋನ್ನಲ್ಲಿ ಇದ್ದಾರೆ?
* ಶರಣಬಸಪ್ಪ ದರ್ಶನಾಪುರ್
* ರಹೀಂ ಖಾನ್
* ಎಚ್‌.ಸಿ ಮಹದೇವಪ್ಪ
* ಬೋಸರಾಜು
* ಶಿವಾನಂದ ಪಾಟೀಲ್
* ಆರ್.ಬಿ ತಿಮ್ಮಾಪುರ್

ಯಾರೆಲ್ಲ ಸೇಫ್ ಆಗಬಹುದು?
* ಜಮೀರ್ ಅಹ್ಮದ್
* ಡಾ. ಜಿ. ಪರಮೇಶ್ವರ್
* ಚೆಲುವರಾಯಸ್ವಾಮಿ
* ಸತೀಶ್ ಜಾರಕಿಹೋಳಿ
* ಕೆಎಚ್ ಮುನಿಯಪ್ಪ
* ಎಚ್.ಕೆ. ಪಾಟೀಲ್
* ಶಿವರಾಜ್ ತಂಗಡಗಿ

Deva
the authorDeva

Leave a Reply

error: Content is protected !!
Latest news
KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ ಕಾಂಗ್ರೆಸ್​​ ಹಿರಿಯ ನಾಯಕ ಮಾಜಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ನಿಧನ ಕಾರಿನ ಟೈಯರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿ: ಕಾರಿನಲ್ಲಿದ್ದ ಐವರು ಸ್ಥಳದಲ್ಲೇ‌ ಮೃತ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌