ದಶಕದಿಂದ ಇಪಿಎಸ್ ನಿವೃತ್ತರು ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಕಿವಿಗೊಡದ ಕೇಂದ್ರ: ನಂಜುಂಡೇಗೌಡ ಅಸಮಾಧಾನ

ಬೆಂಗಳೂರು: ಇಪಿಎಸ್ ನಿವೃತ್ತರು ದಶಕದಿಂದ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಸಹಾ ಕೇಂದ್ರ ಸರ್ಕಾರ ಕಿವಿಗೊಡದೆ ಇರುವುದು ಅತ್ಯಂತ ಶೋಚನೀಯ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಲ್‌ಬಾಗ್ ಆರವರಣದಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಭಾನುವಾರ ಜರುಗಿದ ಇಪಿಎಸ್ ಪಿಂಚಣಿದಾರರ 90ನೇ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಜುಲೈ 11ರಂದು ಸಿಬಿಟಿ ಸಭೆ ಇದ್ದು, ಜುಲೈ 21 ರಿಂದ ಪಾರ್ಲಿಮೆಂಟ್‌ನ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದೆ. ಈ ಬಾರಿಯಾದರೂ ನಮ್ಮ ರಾಜ್ಯದ ಸಂಸದರು ಸಂಸತ್‌ನಲ್ಲಿ ಧ್ವನಿಯೆತ್ತಲೇ ಬೇಕು ಸಭೆಯ ಮೂಲಕ ಸಂಸದರಿಗೆ ಆಗ್ರಹಿಸಿದರು.
ಇನ್ನು ಏನೇ ಆಗಲಿ 78 ಲಕ್ಷ ಇಪಿಎಸ್ ನಿವೃತ್ತರ ಪರ ನಡೆಸುತ್ತಿರುವ ಈ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಶತಸಿದ್ಧ. ಆಗಸ್ಟ್ 04 ಮತ್ತು 05, 2025 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ದೇಶಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಎನ್ಎಸಿ ತಿಳಿಸಿದ್ದಾರೆ.
ಆ ಹೋರಾಟದಲ್ಲಿ ನಮ್ಮ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯ ನಿವೃತ್ತರು ಭಾಗವಹಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದ್ದರು. ಈ ಹೋರಾಟದಲ್ಲಿ ಭಾಗವಹಿಸಲು ಇಚ್ಛಿಸುವ ನಿವೃತ್ತರು ಕೂಡಲೇ ತಮ್ಮ ಮುಂಗಡ ರೈಲ್ವೆ ಟಿಕೆಟ್ ಕಾಯ್ದಿರಿಸುವ ಮೂಲಕ ಎನ್ಎಸಿ ಕಾರ್ಯಕಾರಿ ಸಮಿತಿ ಸದಸ್ಯರಿಗೆ ತಿಳಿಸಬೇಕೆಂದು, ಸಭೆಯಲ್ಲಿ ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ಮುಗಿಯುವುದಿಲ್ಲ, ಕಮಾಂಡರ್ ಅಶೋಕ್ ರಾಹುತ್ ಅವರು ಪ್ರತಿಪಾದಿಸುತ್ತಿರುವ ಕನಿಷ್ಠ ಹೆಚ್ಚುವರಿ ಪಿಂಚಣಿ ರೂ. 7500 ಮತ್ತು ಭತ್ಯೆ, ವೈದ್ಯಕೀಯ ಸೌಲಭ್ಯ ಇವೆಲ್ಲವೂ ನಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುವವರೆಗೆ ಈ ಹೋರಾಟ ನಿಲ್ಲದು ಎಂದು ಹೇಳಿದರು.
ಇನ್ನು ಇದೇ ಜುಲೈ 27 ರಂದು ಹುಬ್ಬಳ್ಳಿಯಲ್ಲಿ ಇಪಿಎಸ್ ನಿವೃತ್ತರ ಬೃಹತ್ ಸಮಾವೇಶ ನಡೆಯುತ್ತಿದ್ದು, ನಾವೆಲ್ಲರೂ ಭಾಗವಹಿಸೋಣ ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ನಾವೆಲ್ಲರೂ “ದೆಹಲಿ ಯಾತ್ರೆ” ಕೈಗೊಳ್ಳುವುದು ಒಂದೇ ಮಾರ್ಗ, ಒಟ್ಟಾಗಿ ಆಗಸ್ಟ್ 4 ಮತ್ತು 5 ರಂದು ದೆಹಲಿಯಲ್ಲಿ ನಡೆಯುವ ಬೃಹತ್ ಆಂದೋಲನದಲ್ಲಿ ಭಾಗವಹಿಸೋಣ ಎಂದರು.
ಸಭೆಗೂ ಮೊದಲು ಎಲ್ಲ ನಿವೃತ್ತರನ್ನು ಸಂಘದ ಖಜಾಂಚಿ ಡೋಳಪ್ಪನವರು ಸ್ವಾಗತಿಸಿ, ಜೂನ್ 27 ರಂದು ಇಪಿಎಫ್ಓ ಕಚೇರಿ ಆವರಣದಲ್ಲಿ ಜರುಗಿದ ಪ್ರತಿಭಟನೆ ಅತ್ಯಂತ ಪರಿಣಾಮಕಾರಿಯಾಗಿತ್ತು, ಭಾಗಿಯಾಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳಾದ ನಾಗರಾಜ, ರುಕ್ಮೇಶ್ & ಕೃಷ್ಣಮೂರ್ತಿ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ನಾವು ಬದ್ಧ ಎಂದು ಸದಸ್ಯರು ಹರ್ಷ ವ್ಯಕ್ತಪಡಿಸಿದರು.
Related

You Might Also Like
ಜು.11ರಂದು ಸಾರಿಗೆ ನಿಗಮಗಳ ಎಂಡಿಗಳ ಜತೆ ಆರ್ಥಿಕ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ
ಬೆಂಗಳೂರು: ಸಾರಿಗೆ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳ ಕಾರ್ಯನಿರ್ವಹಣೆ, ಆದಾಯ- ವೆಚ್ಚ ಹಾಗೂ ಅವುಗಳ ಪ್ರಸ್ತುತ ಹೊಣೆಗಾರಿಕೆಗಳ ಕುರಿತು ಚರ್ಚಿಸಲು ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ...
UPI ಮೂಲಕ 50 ಸಾವಿರ ಕಳುಹಿಸಿದರೆ ಎಷ್ಟು ತೆರಿಗೆ ಕಡಿತ? ಹೊಸ ಆದಾಯ ತೆರಿಗೆ ನಿಯಮ ಏನು?
ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಪಾವತಿ ಪ್ರವೃತ್ತಿ ಬಹಳ ವೇಗವಾಗಿ ಬೆಳೆಯುತ್ತಿದ್ದು, ವಿಶೇಷವಾಗಿ UPI (ಏಕೀಕೃತ ಪಾವತಿ ಇಂಟರ್ಫೇಸ್) ಹಣವನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದನ್ನು ಬಹಳ ಸುಲಭಗೊಳಿಸಿದೆ. ಪ್ರತಿಯೊಬ್ಬರೂ...
ಶಾಲಾ ವಾಹನಕ್ಕೆ ರೈಲು ಡಿಕ್ಕಿ: ಮೂವರು ಮಕ್ಕಳು ಮೃತ, 10 ವಿದ್ಯಾರ್ಥಿಗಳಿಗೆ ಗಾಯ
ಕಡಲೂರು: ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದು, 10 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ಇಂದು ಬೆಳಗ್ಗೆ ನಡೆದಿದೆ....
BMTC: ಮಹಿಳೆ ಮೇಲೆ ಬಸ್ ನುಗ್ಗಿಸಲು ಯತ್ನ ಪ್ರಕರಣ- 17ನೇ ಘಟಕದ ಚಾಲಕನ ಅಮಾನತಿಗೆ ತಡೆ ನೀಡಿದ ಹೈ ಕೋರ್ಟ್
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಅಡ್ಡಗಟ್ಟಿದ ಮಹಿಳೆ ಮೇಲೆ ಬಸ್ ನುಗ್ಗಿಸಲು ಯತ್ನಿಸಿದ ಆರೋಪದಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಾಲಕನನ್ನು ಅಮಾನತು ಮಾಡಿದ ಆದೇಶಕ್ಕೆ ಹೈ...
ರೈತರಿಗೆ ಬೆಳೆ ವಿಮೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಬಸವರಾಜು ತಾಕೀತು
ಬೆಂಗಳೂರು ಗ್ರಾಮಾಂತರ: ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಹಾಗೂ ಅದರಿಂದ ಆಗುವ ಅನುಕೂಲಗಳ...
KSRTC: ಚಾಲಕನ ನಿಯಂತ್ರಣ ಕಳೆದು ಕೊಂಡು ಕಾಫಿ ತೋಟಕ್ಕೆ ನುಗ್ಗಿದ ಬಸ್
ವಿರಾಜಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿರುವ ಘಟನೆ ಇಂದು ಬೆಳಗ್ಗೆ ವಿರಾಜಪೇಟೆಯ ಕಾವೇರಿ ಕಾಲೇಜು ಬಳಿಯ...
KSRTC ಬೇಲೂರು: ಡಿಎಂ ಕಿರುಕುಳಕ್ಕೆ ನೊಂದು ಡಿಪೋದಲ್ಲೆ ವಿಷ ಸೇವಿಸಿದ ಚಾಲಕ ಕಂ ನಿರ್ವಾಹಕ- ಸ್ಥಿತಿ ಗಂಭೀರ
ಡಿಎಂ ಶಾಜೀಯಾ ಭಾನು ಹಾಗೂ ಡಿಸಿ ಅಮಾನತಿಗೆ ಶಾಸಕ ಸುರೇಶ್ ಒತ್ತಾಯ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಪೊಲೀಸ್ ಅಧಿಕಾರಿಗಳು ಬೇಲೂರು: ಕರ್ನಾಟಕ ರಾಜ್ಯ ರಸ್ತೆ...
ನಿಯಂತ್ರಣ ಕಳೆದುಕೊಂಡ ಬೈಕ್ ವಿಸಿ ನಾಲೆ ಬಿದ್ದು ಇಬ್ಬರು ಸವಾರರು ಮೃತ
ಮದ್ದೂರು: ಸವಾರನ ನಿಯಂತ್ರಣ ಕಳೆದುಕೊಂಡ ಬೈಕ್ ವಿಸಿ ನಾಲೆಗೆ ಬಿದ್ದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ವೃದ್ಧ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಹೊಸಗಾವಿ ಬಳಿ...
KKRTC ಬಸ್- ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, ಒಬ್ಬರ ಸ್ಥಿತಿ ಗಂಭೀರ
ಬೆಳಗಾವಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವರ ಸ್ಥಿತಿ ಗಂಭೀರವಾಗಿರುವ ಘಟನೆ...